ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭಾರತ್ ಎಲೆಕ್ಟ್ರಾನಿಕ್ಸ್ ಜತೆ ಭಾರತ್ ಫೋರ್ಜ್ ಒಡಂಬಡಿಕೆ

|
Google Oneindia Kannada News

ಬೆಂಗಳೂರು, ಫೆಬ್ರವರಿ 22: ಬೆಂಗಳೂರಿನಲ್ಲಿ ನಡೆದಿರುವ ಏರೊ ಇಂಡಿಯಾ- 2019ರ ವೇಳೆ, ಭಾರತ್ ಫೋರ್ಜ್ ಲಿಮಿಟೆಡ್ ಮತ್ತು ಸರ್ಕಾರಿ ಸ್ವಾಮ್ಯದ ನವರತ್ನ ರಕ್ಷಣಾ ಉದ್ದಿಮೆಯಾದ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ರಕ್ಷಣೆ ಮತ್ತು ಬಾಹ್ಯಾಕಾಶ ಉತ್ಪನ್ನ/ ವ್ಯವಸ್ಥೆಯ ಕ್ಷೇತ್ರದಲ್ಲಿ ಪ್ರಮುಖ ಸಹಕಾರಕ್ಕಾಗಿ ಪರಸ್ಪರ ಒಡಂಬಡಿಕೆ ಪತ್ರಕ್ಕೆ ಸಹಿ ಮಾಡಿವೆ.

ಈ ಮೂಲಕ ಭಾರತ ಸರ್ಕಾರದ ಮೇಕ್ ಇನ್ ಇಂಡಿಯಾ ಯೋಜನೆಯಿಂದಾಗಿ ದೇಶೀಯ ಮಾರುಕಟ್ಟೆಯಲ್ಲಿ ರೂಪುಗೊಳ್ಳುತ್ತಿರುವ ಅವಕಾಶಗಳನ್ನು ಜಂಟಿಯಾಗಿ ಬಳಸಿಕೊಳ್ಳಲು ಮುಂದಾಗಿವೆ.

ಈ ಒಡಂಬಡಿಕೆಯ ಮೂಲಕ ಭಾರತ್ ಫೋರ್ಜ್ ಮತ್ತು ಬಿಇಎಲ್, ಭಾರತ ಸರ್ಕಾರದ ರಕ್ಷಣಾ ಸಚಿವಾಲಯದ ರಫ್ತು ಉತ್ತೇಜನ ನೀತಿಯ ಲಾಭ ಪಡೆದು ಕಂಪನಿಗಳು ವೈಯಕ್ತಿಕವಾಗಿ ಅಭಿವೃದ್ಧಿಪಡಿಸಿದ ಅಥವಾ ಜಂಟಿಯಾಗಿ ಅಭಿವೃದ್ಧಿಪಡಿಸಿದ ಮತ್ತು ಎರಡೂ ಕಂಪನಿಗಳು ಉತ್ಪಾದಿಸಿದ ರಕ್ಷಣಾ ಉತ್ಪನ್ನಗಳು/ ವ್ಯವಸ್ಥೆಗಳಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಲಭ್ಯವಿರುವ ಅವಕಾಶಗಳನ್ನು ಬಾಚಿಕೊಳ್ಳಲು ಜಂಟಿ ಪ್ರಯತ್ನಗಳನ್ನು ಮಾಡಲಿವೆ.

ಎಂಜಿನಿಯರಿಂಗ್ ಹಾಗೂ ಉತ್ಪಾದನೆಯಲ್ಲಿ ಪರಿಣತಿ

ಎಂಜಿನಿಯರಿಂಗ್ ಹಾಗೂ ಉತ್ಪಾದನೆಯಲ್ಲಿ ಪರಿಣತಿ

ಬಿಇಎಲ್, ರಾಡಾರ್ & ಶಸ್ತ್ರ ವ್ಯವಸ್ಥೆ, ಎನ್‍ಸಿಎಸ್ ಮತ್ತು ಸಂವಹನ ವ್ಯವಸ್ಥೆಗಳು, ಎಲೆಕ್ಟ್ರಾನಿಕ್ ಯುದ್ಧಪರಿಕರಗಳು & ಬಾಹ್ಯಾಕಾಶ ವ್ಯವಸ್ಥೆ, ನೌಕಾ ವ್ಯವಸ್ಥೆಗಳು, ಎಲೆಕ್ಟ್ರೋ ಆಪ್ಟಿಕ್ ಉತ್ಪನ್ನಗಳು, ಟ್ಯಾಂಕ್ ಎಲೆಕ್ಟ್ರಾನಿಕ್ಸ್ & ಗನ್ ಸಿಸ್ಟಮ್ಸ್, ಸ್ಯಾಟ್‍ಕಾಮ್ ಸಿಸ್ಟಮ್ಸ್, ಹೋಮ್‍ಲ್ಯಾಂಡ್ ಸೆಕ್ಯುರಿಟಿ & ಸ್ಮಾಟ್ ಸೊಲ್ಯೂಶನ್ಸ್, ಆಯಕಟ್ಟಿನ ಬಿಡಿಭಾಗಗಳು ಹಾಗೂ ಆಯ್ದ ನಾಗರಿಕ ಉತ್ಪನ್ನಗಳ ವಿನ್ಯಾಸ ಅಭಿವೃದ್ಧಿ, ಎಂಜಿನಿಯರಿಂಗ್ ಹಾಗೂ ಉತ್ಪಾದನೆಯಲ್ಲಿ ಪರಿಣತಿಯನ್ನು ಹೊಂದಿದೆ.

300 ಕೋಟಿ ಡಾಲರ್ ಮೌಲ್ಯದ ಕಂಪನಿ ಭಾರತ್ ಫೋರ್ಜ್

ಭಾರತ್ ಫೋರ್ಜ್ ಎನ್ನುವುದು 300 ಕೋಟಿ ಡಾಲರ್ ಮೌಲ್ಯದ ಕಲ್ಯಾಣಿ ಸಮೂಹದ ಪ್ರಮುಖ ಕಂಪನಿಯಾಗಿದ್ದು, ಅತ್ಯಧಿಕ ಕ್ಷಮತೆಯ, ವಿನೂತನ, ಸುರಕ್ಷೆ & ಪ್ರಮುಖ ಬಿಡಿಭಾಗಗಳನ್ನು ಹಾಗೂ ಸೊಲ್ಯೂಶನ್‍ಗಳನ್ನು ಆಟೊಮೋಟಿವ್, ರಕ್ಷಣೆ, ಬಾಹ್ಯಾಕಾಶ, ರೈಲ್ವೇಸ್, ವಿದ್ಯಿತ್, ನಿರ್ಮಾಣ & ಗಣಿಗಾರಿಕೆ, ಸಾಗರ ಮತ್ತು ತೈಲ & ಅನಿಲ ಉದ್ದಿಮೆಗಳಿಗೆ ಒದಗಿಸುವ ಕಂಪನಿಯಾಗಿದೆ.

ಸಣ್ಣ ಶಸ್ತ್ರಾಸ್ತ್ರಗಳ ವಿನ್ಯಾಸ ಹಾಗೂ ಅಭಿವೃದ್ಧಿ

ಕಂಪನಿಯ ರಕ್ಷಣಾ ಉತ್ಪನ್ನ ಶ್ರೇಣಿಯಲ್ಲಿ ಭಾರತ್ ಫೋರ್ಜ್, ಆರ್ಟಿಲರಿ ಗನ್‍ಗಳ ಉಪ ವ್ಯವಸ್ಥೆ, ಶಸ್ತ್ರಸನ್ನದ್ಧ ಯುದ್ಧ ವಾಹನಗಳು, ಸುರಕ್ಷಿತ ವಾಹನಗಳು, ಶಸ್ತ್ರೋಪಕರಣಗಳು, ರಕ್ಷಣಾ ಎಲೆಎಕ್ಟ್ರಾನಿಕ್ಸ್ ಮತ್ತು ಸಣ್ಣ ಶಸ್ತ್ರಾಸ್ತ್ರಗಳ ವಿನ್ಯಾಸ, ಅಭಿವೃದ್ಧಿ, ಎಂಜಿನಿಯರಿಂಗ್ ಮತ್ತು ಉತ್ಪಾಧನೆಯಲ್ಲಿ ನೈಪುಣ್ಯ ಪಡೆದಿದೆ.

ಬಿಇಎಲ್ ನಿಂದ ಮಹತ್ವದ ಒಪ್ಪಂದ

ಭಾರತ್ ಫೋರ್ಜ್‍ನ ರಕ್ಷಣೆ & ಬಾಹ್ಯಾಕಾಶ ವಿಭಾಗದ ಅಧ್ಯಕ್ಷ & ಕಾರ್ಯನಿರ್ವಾಹಕ ನಿರ್ದೇಶಕ ರಾಜೀಂದರ್ ಸಿಂಗ್ ಭಾಟಿಯಾ ಮತ್ತು ಬಿಇಎಲ್‍ನ ಮಾರುಕಟ್ಟೆ ವಿಭಾಗದ ನಿರ್ದೇಶಕಿ ಆನಂದಿ ರಾಮಲಿಂಗಂ ಅವರು ಒಡಂಬಡಿಕೆ ಪತ್ರಕ್ಕೆ ಸಹಿ ಮಾಡಿದರು. ಈ ಸಂದರ್ಭದಲ್ಲಿ ಭಾರತ್ ಫೋರ್ಜ್‍ನ ಅಧ್ಯಕ್ಷ & ವ್ಯವಸ್ಥಾಪಕ ನಿರ್ದೇಶಕ ಬಾಬಾ ಕಲ್ಯಾಣಿ ಹಾಗೂ ಬಿಇಎಲ್‍ನ ಸಿಎಂಡಿ ಗೌತಮ ಎಂ.ವಿ. ಉಪಸ್ಥಿತರಿದ್ದರು.

English summary
At Aero India 2019 being held in Bengaluru, Bharat Forge Limited and Navratna defence PSU Bharat Electronics Limited (BEL) entered into MoU for strategic co-operation in the field of Defence and Aerospace products/systems to jointly capitalise on the emerging opportunities in the domestic market, leveraging the policy initiatives of the Indian Government such as Make in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X