ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅತಿ ಹಗುರ ಯುದ್ಧ ವಿಮಾನ ತೇಜಸ್‌ನಲ್ಲಿ ಹಾರಾಡಿದ ಸೇನಾ ಮುಖ್ಯಸ್ಥ ಬಿಪಿನ್

|
Google Oneindia Kannada News

ಬೆಂಗಳೂರು, ಫೆಬ್ರವರಿ 21: ಸ್ವದೇಶಿ ನಿರ್ಮಿತ ಹಗುರವಾಗಿರುವ ಯುದ್ಧ ವಿಮಾನ ತೇಜಸ್‌ನಲ್ಲಿ ಭಾರತೀಯ ಸೇನೆಯ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹಾರಾಟ ನಡೆಸಿದರು.

ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಆರಂಭವಾಗಿರುವ ಏರೋ ಇಂಡಿಯಾ 2019 ಪ್ರದರ್ಶನದಲ್ಲಿ ಜನರಲ್ ಬಿಪಿನ್ ರಾವತ್ ಅವರ ನಂತರ ಸರ್ಕಾರದ ಪ್ರಧಾನ ಸಲಹೆಗಾರ ಪಿಎಸ್ ರಾಘವನ್ ಕೂಡ ಹಾರಾಟ ನಡೆಸಿದರು.

aero india 2019: Army Chief Flies In Made-In-India Tejas Fighter Jet

ಇದು ಬೆಂಗಳೂರಲ್ಲಿ ನಡೆಯುತ್ತಿರುವ ಕೊನೆಯ ಏರ್‌ ಶೋ? ಇದು ಬೆಂಗಳೂರಲ್ಲಿ ನಡೆಯುತ್ತಿರುವ ಕೊನೆಯ ಏರ್‌ ಶೋ?

ಕಡಿಮೆ ಸಂಖ್ಯೆಯ ನೌಕಾತಂಡದ ಸಮಸ್ಯೆ ಎದುರಿಸುತ್ತಿರುವ ಭಾರತೀಯ ವಾಯುಪಡೆಗೆ ತೇಜಸ್ ಸೇರ್ಪಡೆ ಬಲ ಬಂದಂತಾಗಿದೆ. ಇದಕ್ಕೆ 2013ರಲ್ಲಿ ಆರಂಭಿಕ ಅನುಮೋದನೆ ಸಿಕ್ಕಿತ್ತು.

'ಮಿಸ್ಸಿಂಗ್ ಮ್ಯಾನ್' ಮೃತ ಪೈಲಟ್‌ಗೆ ಆಗಸದಲ್ಲೇ ಶ್ರದ್ಧಾಂಜಲಿ 'ಮಿಸ್ಸಿಂಗ್ ಮ್ಯಾನ್' ಮೃತ ಪೈಲಟ್‌ಗೆ ಆಗಸದಲ್ಲೇ ಶ್ರದ್ಧಾಂಜಲಿ

ಇನ್ನು ತೇಜಸ್ ಲಘು ಯುದ್ಧ ವಿಮಾನದಲ್ಲಿ ಹಾರಾಟ ನಡಿಸಿದ ಬಳಿಕ ತಮ್ಮ ಅನುಭವ ಹಂಚಿಕೊಂಡ ಬಿಪಿನ್ ರಾವತ್ ಅವರು, ಇದು ನನ್ನ ಜೀವನದ ಅದ್ಭುತ ಅನುಭವಗಳಲ್ಲಿ ಒಂದು. ವಿಮಾನದಲ್ಲಿನ ಸೌಕರ್ಯಗಳು ಉತ್ತಮವಾಗಿದ್ದು, ಗುರಿಗಳ ಮೇಲಿನ ನಿಗಾ ವ್ಯವಸ್ಥೆ ಉತ್ತಮವಾಗಿದೆ. ನಿಜಕ್ಕೂ ಇದು ಅದ್ಬುತ ಯುದ್ಧ ವಿಮಾನವಿದು. ತೇಜಸ್ ಆವಿಷ್ಕರಣೆ ನಮ್ಮ ವಾಯು ಸೇನೆಯ ಬಲ ಹೆಚ್ಚಿಸಿದೆ ಎಂದರು.

ಏರೋ ಇಂಡಿಯಾ ಆಗಸದಲ್ಲಿ ಹಾರಾಡಿ ಮನಗೆದ್ದ ರಫೇಲ್ ಯುದ್ಧ ವಿಮಾನಏರೋ ಇಂಡಿಯಾ ಆಗಸದಲ್ಲಿ ಹಾರಾಡಿ ಮನಗೆದ್ದ ರಫೇಲ್ ಯುದ್ಧ ವಿಮಾನ

ಸಮರಕ್ಕೆ ಸನ್ನದ್ಧವಾಗಿರುವ ಭಾರತದ ಹಗುರ ಯುದ್ಧ ವಿಮಾನ ತೇಜಸ್ ಎಂಕೆ 1ಗೆ ಅಂತಿಮ ಕಾರ್ಯಾಚರಣೆಗೆ ನಿನ್ನೆಯಷ್ಟೇ ಅನುಮೋದನೆ ಸಿಕ್ಕಿ ಭಾರತೀಯ ವಾಯುಪಡೆಗೆ ಸೇರಿಸಲಾಗಿತ್ತು.

English summary
Aero india 2019: The LCA Tejas got a special passenger today at the Aero India air show being held on the outskirts of Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X