ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಏರೋ ಇಂಡಿಯಾ ಪ್ರದರ್ಶನಕ್ಕೆ ಸಜ್ಜಾದ ಏರ್‌ಬಸ್, ವಿಶೇಷತೆ ಏನು?

|
Google Oneindia Kannada News

ಬೆಂಗಳೂರು, ಫೆಬ್ರವರಿ 12: ಬೆಂಗಳೂರಲ್ಲಿ ಫೆ.20ರಿಂದ 25ರವರೆಗೆ ನಡೆಯಲಿರುವ ಏರೋ ಇಂಡಿಯಾ-2019 ಪ್ರದರ್ಶನದಲ್ಲಿ ಏರ್‌ಬಸ್‌ ಪಾಲ್ಗೊಳಲು ಸಜ್ಜಾಗಿದೆ.ಇಲ್ಲಿ ವೈಮಾನಿಕ ಮತ್ತು ಸ್ಥಿರತೆಯ ಪ್ರದರ್ಶನಗಳನ್ನು ನಡೆಸಲಿದೆ.

ಭಾರತೀಯ ವೈಮಾನಿಕ, ರಕ್ಷಣೆ ಮತ್ತು ಅಂತರಿಕ್ಷ ಕ್ಷೇತ್ರಗಳ ಬೆಳವಣಿಗೆಗೆ ಪೂರಕವಾಗಿ ಏರ್‍ಬಸ್ ಕೈಗೊಂಡಿರುವ ಮತ್ತು ಅದರ ಬದ್ಧತೆಯ ಉತ್ಪನ್ನಗಳನ್ನು ಹಾಲ್ ಸಂಖ್ಯೆ ಇ 2.8 ಮತ್ತು 2.10 ರಲ್ಲಿ ವೀಕ್ಷಕರು ವೀಕ್ಷಿಸಬಹುದಾಗಿದೆ. ವಿಶೇಷವಾಗಿ ಮೇಕ್ ಇನ್ ಇಂಡಿಯಾ' ಮತ್ತು ಸ್ಟಾರ್ಟಪ್ ಇಂಡಿಯಾ' ಪರಿಕಲ್ಪನೆಗೆ ಏರ್‌ಬಸ್ ಸಾಕಷ್ಟು ಕೊಡುಗೆಗಳನ್ನು ನೀಡುತ್ತಿರುವುದನ್ನು ವೀಕ್ಷಕರು, ಪರಿಣತರು ವೀಕ್ಷಿಸಿ ತಿಳಿದುಕೊಳ್ಳಬಹುದಾಗಿದೆ.

ಏರೋ ಇಂಡಿಯಾದಲ್ಲಿ 52 ವಿಮಾನಗಳ ಪ್ರದರ್ಶನ ಏರೋ ಇಂಡಿಯಾದಲ್ಲಿ 52 ವಿಮಾನಗಳ ಪ್ರದರ್ಶನ

ಈ ಏರ್‌ಬಸ್ ಮಳಿಗೆಯಲ್ಲಿ ಏರೋಸ್ಪೇಸ್ ಅಭಿಮಾನಿಗಳು ತಜ್ಞರೊಂದಿಗೆ ಚರ್ಚಿಸಿ ಉತ್ಪನ್ನಗಳು ಮತ್ತು ಸಂಶೋಧನೆಗಳ ಬಗ್ಗೆ ತಿಳಿದುಕೊಳ್ಳಲು ಇದೊಂದು ಸದಾವಕಾಶವಾಗಿದೆ.

ಇದೇ ವೇಳೆ ಏರ್‌ಬಸ್‌ ತನ್ನ ಸಮೂಹಸಂಸ್ಥೆಗಳಾದ ಸಟಾಏರ್ ಮತ್ತು ನವ್‍ಬ್ಲ್ಯೂನ ಸೇವೆಗಳಾದ ಸ್ಕೈವೈಸ್ ಆಧಾರಿತ ಡಿಜಿಟಲ್ ಸೇವೆಗಳನ್ನು ಪ್ರದರ್ಶಿಸಲಿದೆ. ಏರ್‍ಕ್ರಾಫ್ಟ್ ಪರಿಶೀಲನೆಗೆಂದು ಅಭಿವೃದ್ಧಿಪಡಿಸಲಾಗಿರುವ ಡ್ರೋಣ್ ಆಧಾರಿತ ವ್ಯವಸ್ಥೆಯನ್ನೂ ಏರ್‍ಬಸ್ ಇಲ್ಲಿ ಪ್ರದರ್ಶನಕ್ಕಿಡಲಿದೆ.

ಏರ್‌ಬಸ್ ಇಂಡಿಯಾ ಮತ್ತು ದಕ್ಷಿಣ ಏಷ್ಯಾದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಆನಂದ್ ಇ ಸ್ಟ್ಯಾನ್ಲಿ ಅವರು ಮಾತನಾಡಿ, ವಿಶ್ವದ ಅತಿದೊಡ್ಡ ರಕ್ಷಣೆ ಮತ್ತು ಮೂರನೇ ಅತಿದೊಡ್ಡ ವಾಣಿಜ್ಯ ವೈಮಾನಿಕ ಮಾರುಕಟ್ಟೆಯ ಮುಕುಟದಂತಿದೆ ಈ ಏರೋ ಇಂಡಿಯಾ. ಈ ಏರೋ ಇಂಡಿಯಾ ಪ್ರದರ್ಶನ ಏರ್‍ಬಸ್‍ನ ದೊಡ್ಡ ಮಟ್ಟದ ಪ್ರದರ್ಶನದ ಬದ್ಧತೆಯನ್ನು ಪ್ರದರ್ಶಿಸುವುದಷ್ಟೇ ಮಾತ್ರವಲ್ಲ, ಇದು ನಮಗೆ ಪ್ರಮುಖ ವೇದಿಕೆಯಾಗಿದೆ ಎಂದು ಅಭಿಪ್ರಾಯ ಪಟ್ಟರು.

ಏರೋ ಇಂಡಿಯಾದಲ್ಲಿ ಪ್ರಮುಖ ಆಕರ್ಷಣೆಗಳೇನು? ಏರೋ ಇಂಡಿಯಾದಲ್ಲಿ ಪ್ರಮುಖ ಆಕರ್ಷಣೆಗಳೇನು?

ವೈಮಾನಿಕ ಕ್ಷೇತ್ರದಲ್ಲಿ ತಂತ್ರಜ್ಞಾನ ಮತ್ತು ಪ್ರತಿಭೆಯನ್ನು ಅನಾವರಣ ಮಾಡಲು ಸಾಕಷ್ಟು ಅವಕಾಶವಿದೆ ಎಂಬುದರಲ್ಲಿ ಏರ್‍ಬಸ್ ನಂಬಿಕೆ ಇಟ್ಟಿದೆ. ಭಾರತದಲ್ಲಿ ಏರ್‍ಬಸ್ ಬಿಜ್‍ಲ್ಯಾಬ್ ಮೂಲಕ ಆವಿಷ್ಕಾರ ಮತ್ತು ಉದ್ಯಮಶೀಲತೆಯ ಸ್ಫೂರ್ತಿಯನ್ನು ಇಮ್ಮಡಿಗೊಳಿಸಲಾಗುತ್ತಿದೆ.

ಹೆಲಿಕಾಪ್ಟರ್ ಕ್ಷೇತ್ರದಲ್ಲಿ ಎಚ್225ಎಂ ಮಿಲಿಟರಿ ಆವೃತ್ತಿಯ ಏರ್‍ಬಸ್, ಎಚ್225 ಸೂಪರ್ ಪೂಮ ಹೆಲಿಕಾಪ್ಟರ್, ಸಾರ್ವಕಾಲಿಕ ಹಾರಾಟಕ್ಕೆ ಒಗ್ಗಿಕೊಳ್ಳುವಂತಹ, ಮಲ್ಟಿರೋಲ್ ಫೋರ್ಸ್ ಮಲ್ಟಿಪ್ಲೈಯರ್ ಎಎಸ್565 ಎಂಬಿಇ, ಎಚ್135 ಮತ್ತು ಎಚ್145 ಹೆಲಿಕಾಪ್ಟರ್‍ಗಳನ್ನು ಪ್ರದರ್ಶನಕ್ಕೆ ಇಡಲಾಗುತ್ತಿದೆ. ಏರ್‌ಬಸ್‌ನ ಎ330 ನಿಯೋ ಹೊಸ ಪೀಳಿಗೆಯ ವಾಣಿಜ್ಯ ಏರ್‍ಕ್ರಾಫ್ಟ್ ಮಾದರಿಗಳಾದ ಎ330-900, ಎ321 ಮತ್ತು ಎಟಿಆರ್ 72-600 ಏರ್‍ಕ್ರಾಫ್ಟ್‍ಗಳು ಪ್ರಮುಖ ಆಕರ್ಷಣೆಯಾಗಿವೆ. ಇದಲ್ಲದೇ, ಏರ್‌ಬಸ್ನ ಅಡ್ವಾನ್ಸ್ಡ್ ಇನ್‍ಸ್ಪೆಕ್ಷನ್ ದ್ರೋಣ್ ಮತ್ತು ಅದರ ವೈಶಿಷ್ಟ್ಯತೆಗಳ ಮಾಹಿತಿಗಳು ವೀಕ್ಷಕರಿಗೆ ಸಿಗಲಿವೆ.

ಈ ಸ್ಫೂರ್ತಿಗೆ ಪೂರಕವಾದ ಉತ್ಪನ್ನಗಳನ್ನು ಹಾಲ್ ಇ 2.9 ರಲ್ಲಿ ಪ್ರದರ್ಶನಗೊಳಿಸಲಾಗುತ್ತಿದ್ದು, ವೀಕ್ಷಕರು ಇಲ್ಲಿಗೆ ಆಗಮಿಸಿ ವೀಕ್ಷಿಸಬಹುದಾಗಿದೆ. ಏರ್‍ಬಸ್ ಬಿಜ್‍ಲ್ಯಾಬ್ ಏರೋ ಇಂಡಿಯಾದಲ್ಲಿ ಆಯೋಜಿಸಲಿರುವ ಸ್ಟಾರ್ಟಪ್ ದಿನ'ದ ಪಾಲುದಾರ ಸಂಸ್ಥೆಯಾಗಿದೆ.

ಏರ್‌ಬಸ್ ವೈಶಿಷ್ಟ್ಯವೇನು

ಏರ್‌ಬಸ್ ವೈಶಿಷ್ಟ್ಯವೇನು

ಇನ್ನು ಸ್ಥಿರ ಪ್ರದರ್ಶನದಲ್ಲಿ ಏರ್‌ಬಸ್ ಬಹು ನಿರೀಕ್ಷಿತ ಮತ್ತು ವೈಶಿಷ್ಟ್ಯತೆಯ ಟ್ವಿನ್-ಎಂಜಿನ್ ರೋಟೋಕ್ರಾಫ್ಟ್ ಆಗಿರುವ ಎಚ್ 135 ಹಾಗೂ ಎಚ್145 ಎಲ್ಲರನ್ನೂ ಆಕರ್ಷಿಸಲಿದೆ. ಸಹನಶೀಲತೆ, ಕಾಂಪ್ಯಾಕ್ಟ್ ನಿರ್ಮಾಣ ಮತ್ತು ಕಡಿಮೆ ಧ್ವನಿ ಮಟ್ಟವನ್ನು ಹೊಂದಿದ್ದು, ವಿಶ್ವಾಸಾರ್ಹತೆ, ಬಹುಮುಖ ಕೌಶಲ್ಯ ಮತ್ತು ಸ್ಪರ್ಧಾತ್ಮಕ ವೆಚ್ಚದ್ದಾಗಿದೆ. ಅದೇರೀತಿ ಎಚ್145 4-ಟನ್-ಕ್ಲಾಸ್‍ನ ಟ್ವಿನ್-ಎಂಜಿನ್ ರೋಟೋಕ್ರಾಫ್ಟ್ ಸಾಮಥ್ರ್ಯ ಮತ್ತು ನಮ್ಯತೆಯನ್ನು ಹೊಂದಿದೆ. ಇದು ಹೆಚ್ಚು ಮತ್ತು ಬಿಸಿ ಹವಾಗುಣದಲ್ಲೂ ಸಮರ್ಥವಾಗಿ ಕಾರ್ಯ ನಿರ್ವಹಿಸಬಲ್ಲುದಾಗಿದೆ.

ಸಿ295 ಏರ್‌ಕ್ರಾಫ್ಟ್‌ ಮಾದರಿ ಪ್ರದರ್ಶನ

ಸಿ295 ಏರ್‌ಕ್ರಾಫ್ಟ್‌ ಮಾದರಿ ಪ್ರದರ್ಶನ

ಮಧ್ಯಮ ಪ್ರಮಾಣದ ಏರ್‍ಕ್ರಾಫ್ಟ್ ಆದ ಸಿ295ನ ಮಾದರಿಗಳನ್ನು ಇಲ್ಲಿ ಪ್ರದರ್ಶಿಸಲಾಗುತ್ತದೆ. ಇದಲ್ಲದೇ, ಪ್ರಮುಖ ಆಕರ್ಷಣೆಯಾದ ಎ330 ಎಂಆರ್‍ಟಿಟಿ- ಮಲ್ಟಿ-ರೋಲ್ ಟ್ಯಾಂಕರ್ ಟ್ರಾನ್ಸ್‍ಪೋರ್ಟ್ ಏರ್‍ಕ್ರಾಫ್ಟ್: ಬಹುಮುಖದ ಗುಣಗಳನ್ನು ಹೊಂದಿರುವ ಏರ್‍ಲಿಫ್ಟರ್ ಎನಿಸಿರುವ ಎ400ಎಂ; ಜಿಯೋಸ್ಟೇಷನರಿ ಕಮ್ಯುನಿಕೇಷನ್ಸ್ ಸ್ಯಾಟಲೈಟ್ ಎಸ್‍ಇಎಸ್-12 ಮತ್ತು ಹೈಬ್ರಿಡ್ ಎಸ್‍ಎಆರ್ ಅರ್ಥ್ ಅಬ್ಸರ್ವೇಷನ್ ರಾಡಾರ್ ಸ್ಯಾಟಲೈಟ್ ನಂತಹ ವಿನೂತನವಾದ ಏರ್‍ಕ್ರಾಫ್ಟ್‍ಗಳು ಮತ್ತು ಇವುಗಳಿಗೆ ಸಂಬಂಧಿಸಿದ ಇತರೆ ಉತ್ಪನ್ನಗಳ ಪ್ರದರ್ಶನವನ್ನು ಏರ್‍ಬಸ್ ಏರ್ಪಡಿಸಿದೆ.

ಏರೋ ಇಂಡಿಯಾ ಪ್ರದರ್ಶನ : ವಿಮಾನ ಹಾರಾಟದಲ್ಲಿ ಬದಲಾವಣೆ ಏರೋ ಇಂಡಿಯಾ ಪ್ರದರ್ಶನ : ವಿಮಾನ ಹಾರಾಟದಲ್ಲಿ ಬದಲಾವಣೆ

ಸ್ಥಿರ ಮತ್ತು ಹಾರಾಟ ಪ್ರದರ್ಶನ

ಸ್ಥಿರ ಮತ್ತು ಹಾರಾಟ ಪ್ರದರ್ಶನ

ಈ ಬಾರಿಯ ಏರೋ ಇಂಡಿಯಾದಲ್ಲಿ ಏರ್‍ಬಸ್‍ನ ಪ್ರಮುಖ ಆಕರ್ಷಣೆಯೆಂದರೆ ಎ330ನಿಯೋ. ಇದು ಏರ್‍ಬಸ್‍ನ ಇತ್ತೀಚಿನ ಸೇರ್ಪಡೆಯಾಗಿದೆ. ಇದು ಆಧುನಿಕ ಉತ್ಪನ್ನಗಳಿಂದ ತಯಾರಾಗಿದ್ದು, ಹೊಸದಾದ ಗರಿಷ್ಟ ಗಾತ್ರದ ರೆಕ್ಕೆಗಳನ್ನು ಹೊಂದಿದೆಯಲ್ಲದೇ, ಸಮಗ್ರವಾದ ಶಾರ್ಕ್‍ಲೆಟ್‍ಗಳು, ಅತ್ಯುತ್ತಮ ಸಾಮಥ್ರ್ಯದ ಎಂಜಿನ್‍ಗಳನ್ನು ಹೊಂದಿದೆ. ಇದರ ಪರಿಣಾಮ ಶೇ.25 ರಷ್ಟು ಇಂಧನವನ್ನು ಉಳಿತಾಯ ಮಾಡಲಿದೆ ಮತ್ತು ಸಿಒ2 ಮಾಲಿನ್ಯವನ್ನು ಕಡಿಮೆ ಮಾಡಲಿದೆ. ಇನ್ನು ಹೊಸ ಪೀಳಿಗೆಯ ಟ್ಯಾಕ್ಟಿಕಲ್ ಏರ್‍ಫಿಲ್ಟರ್ ಸಿ295 ಸಾರ್ವಕಾಲಿಕ ವಾತಾವರಣಗಳಲ್ಲಿ ಬಹುಮುಖದ ಕಾರ್ಯವನ್ನು ಮಾಡಲಿದೆ. ಇದು ಯಾವುದೇ ಸಂದರ್ಭದಲ್ಲಿಯೂ ವಿಮಾನಗಳನ್ನು ಗುರುತು ಹಿಡಿಯುವಂತಹ ಸಾಮಥ್ರ್ಯ ಹೊಂದಿದೆ.

ಏರ್ಬಸ್‌ ಪ್ರತಿಭೆಗಳ ಅನ್ವೇಷಣೆ

ಏರ್ಬಸ್‌ ಪ್ರತಿಭೆಗಳ ಅನ್ವೇಷಣೆ

ಈ ಬಾರಿಯ ಏರೋ ಇಂಡಿಯಾದಲ್ಲಿ ಏರ್‍ಬಸ್ ಪ್ರತಿಭೆಗಳ ಅನ್ವೇಷಣೆ ಮಾಡಲಿದೆ. ಅಂದರೆ, ಫೆಬ್ರವರಿ 23 ಮತ್ತು 24ರಂದು ತನ್ನ ಮಳಿಗೆಗಳಲ್ಲಿ ಪ್ರತಿಭೆಗಳ ಅನ್ವೇಷಣೆ ಪ್ರಕ್ರಿಯೆ ನಡೆಸಲಿದೆ. ಏವಿಯೋನಿಕ್ಸ್ ಸಾಫ್ಟ್‍ವೇರ್, ಏರ್‍ಕ್ರಾಫ್ಟ್ ಸಿಸ್ಟಂ ಸಿಮ್ಯುಲೇಷನ್ ಮತ್ತು ಏರ್‍ಫ್ರೇಂ ಸ್ಟ್ರಕ್ಚರ್ ಅಲ್ಲದೇ ಎಪಿಐ ಡೆವಲಪ್‍ಮೆಂಟ್, ಫುಲ್ ಸ್ಟ್ಯಾಕ್ ಡೆವಲಪ್‍ಮೆಂಟ್, ಬಿಗ್ ಡೇಟಾ, ಕ್ಲೌಡ್ ಮತ್ತು ಡೆವ್‍ಓಪ್ಸ್‍ನಲ್ಲಿ ನೈಪುಣ್ಯತೆ ಇರುವ ಸಾರ್ವಜನಿಕರು ಮತ್ತು ಇತರೆ ವರ್ಗದ ಪ್ರತಿಭೆಗಳನ್ನು ಅನ್ವೇಷಣೆ ಮಾಡಲಿದೆ.

English summary
Airbus has planned one of its biggest-ever participation at Aero India where it will have flying and static displays of its best-in-class products to showcasing its cutting-edge aerospace services.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X