ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ಮತ್ತೆ ವಾಣಿಜ್ಯ ಜಾಹೀರಾತು ಫಲಕಗಳ ಆರ್ಭಟ ಶುರು

|
Google Oneindia Kannada News

ಬೆಂಗಳೂರು, ಜುಲೈ 31: ಮೂರು ವರ್ಷಗಳ ಬಳಿಕ ಬೆಂಗಳೂರಿನಲ್ಲಿ ಮತ್ತೆ ಜಾಹೀರಾತು ಫಲಕಗಳ ಆರ್ಭಟ ಶುರುವಾಗಿದೆ.

ವಾಣಿಜ್ಯ ಜಾಹೀರಾತು ಪ್ರದರ್ಶನಕ್ಕೆ ಮತ್ತೆ ಅನುವು ನೀಡಲಾಗಿದೆ. ರಾಜ್ಯ ಸರ್ಕಾರ ಜುಲೈ 26 ರಂದು ಎಲ್ಲಾ ಬಗೆಯ ಜಾಹೀರಾತು ಹೋಡಿರ್ಂಗ್ಸ್ ಗಳ ಅಳವಡಿಕೆಗೆ ಅನುಮತಿ ನೀಡುವ ಪ್ರಸ್ತಾವನೆಗೆ ಅಂಕಿತ ಹಾಕಿದೆ.

ಬಿಬಿಎಂಪಿ ನೂತನ ಕಾಯ್ದೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ಬ್ಯಾನ್ ಆಗಿದ್ದ ಜಾಹೀರಾತು ಫಲಕಗಳನ್ನು ಹಾಕಲು ಅನುಮತಿ ನೀಡಲಾಗಿದೆ. ಈ ಬಗ್ಗೆ ಸ್ಪಷ್ಟನೆ ಕೋರಿ BBMP, ಸರ್ಕಾರಕ್ಕೆ ಪತ್ರ ಬರೆದಿದೆ.

ಬಿಬಿಎಂಪಿ ಜಾಹೀರಾತು ಬೈಲಾ ಪ್ರಕಾರ ಜಾಹೀರಾತು ಫಲಕಗಳನ್ನು ಹಾಕಲು ಅನುಮತಿ ಇಲ್ಲ. ಹೀಗಾಗಿ ಸಿಲಿಕಾನ್ ಸಿಟಿಯ ಅಂದ ಕಾಪಾಡಲು ಈ ಹಿಂದೆ ಎಲ್ಲೆಂದರಲ್ಲಿ ಜಾಹೀರಾತು ಫಲಕಗಳನ್ನು ಅಂಟಿಸುವಂತಿಲ್ಲ ಎಂದು ಬಿಬಿಎಂಪಿ ತಿಳಿಸಿದ್ದು ಜಾಹೀರಾತು ಫಲಕ ಅಂಟಿಸುವುದನ್ನು ಬ್ಯಾನ್ ಮಾಡಿತ್ತು. ಆದರೆ ಈಗ ಬಿಬಿಎಂಪಿಯ ನೂತನ ಕಾಯ್ದೆ ಜಾರಿಯಾಗಿದ್ದು ಇದರ ಪ್ರಕಾರ ಬ್ಯಾನ್ ಆಗಿದ್ದ ಜಾಹೀರಾತು ಫಲಕಗಳನ್ನು ಹಾಕಲು ಅನುಮತಿ ಇದೆ.

ಬಿಬಿಎಂಪಿ ಕಾಯಿದೆ -2020 ರನ್ನೇ ಬಳಸಿಕೊಂಡು, ಬಿಬಿಎಂಪಿ ಜಾಹೀರಾತು ನಿಯಮಗಳು-2019 ಅನ್ನು ಬದಲಾಯಿಸಿ, ಜಾಹೀರಾತು ಏಜೆನ್ಸಿಗಳ ಒತ್ತಡಕ್ಕೆ ಮಣಿದು ನಗರದಲ್ಲಿ ಮತ್ತೆ ಜಾಹೀರಾತು ಹಾವಳಿಗೆ ಅವಕಾಶ ಕಲ್ಪಿಸಿದಂತಾಗಿದೆ.

ಹೊಸ ನಿಯಮದಂತೆ ಜಾಹೀರಾತು ಏಜೆನ್ಸಿಗಳು ಕಡ್ಡಾಯವಾಗಿ ಪರವಾನಗಿ ಪಡೆದು, ಮೂರು ವರ್ಷಕ್ಕೊಮ್ಮೆ ನವೀಕರಣಗೊಳಿಸಬೇಕು. ಪಾಲಿಕೆ ಮುಖ್ಯ ಆಯುಕ್ತರಿಗೆ ಅರ್ಜಿ ಸಲ್ಲಿಸಿ ಅನುಮತಿ ಪಡೆಯಬೇಕು. ಮೂರು ವರ್ಷಗಳ ಅವಧಿಯ ಪರವಾನಗಿಗೆ 50 ಸಾವಿರ ರೂ ಶುಲ್ಕ ಪಾವತಿಸಬೇಕು.
ಮೊದಲು ಈ ಫಲಕಗಳಿಗೆ ಅವಕಾಶ ಇರಲಿಲ್ಲ

ಆರ್ ಆರ್. ನಗರದಲ್ಲಿ ಕೋರ್ಟ್‌ ಆದೇಶ ಉಲ್ಲಂಘಿಸಿ ಜಾಹೀರಾತು ಪ್ರದರ್ಶನಆರ್ ಆರ್. ನಗರದಲ್ಲಿ ಕೋರ್ಟ್‌ ಆದೇಶ ಉಲ್ಲಂಘಿಸಿ ಜಾಹೀರಾತು ಪ್ರದರ್ಶನ

* ಪಾಲಿಕೆಯಿಂದ ಅಭಿವೃದ್ಧಿಸಲ್ಪಟ್ಟ ಭಾಗ ಹಾಗೂ ಸಂಪೂರ್ಣ ನಗರದಲ್ಲಿ ವಾಣಿಜ್ಯ ಪ್ರದರ್ಶನಗಳ ಫಲಕಗಳನ್ನು ಹಾಕುವಂತಿಲ್ಲ.

* ಎಲೆಕ್ಟ್ರಾನಿಕ್‌ ಡಿಸ್‌ಪ್ಲೇಗಳು

* ಸಾರ್ವಜನಿಕ ಹಿತಾಸಕ್ತಿ ಸಂದೇಶಗಳನ್ನು ಹೊರತುಪಡಿಸಿ, ಆನಿಮೇಟೆಡ್‌ ಡಿಜಿಟಲ್‌ ಫ್ಲಾಶ್‌ ಸೈನ್‌ಗಳ ಡಿಸ್‌ಪ್ಲೇಗಳು
* ಶಬ್ಧಗಳ ಮೂಲಕ ಹೊರಾಂಗಣ ಜಾಹೀರಾತು

* ಸರಣಿ ಸಂದೇಶಗಳ ಜಾಹೀರಾತುಗಳು

* ರಸ್ತೆ ಬದಿಯಲ್ಲಿ ಟ್ರಾಫಿಕ್‌ ನಿಯಮದ ಫಲಕ ಹೊರತು ಪಡಿಸಿ ಬೇರೆ ಯಾವುದಕ್ಕೂ ಅವಕಾಶಗಳಿಲ್ಲ

* ಬಲೂನ್‌ಗಳ ಮೂಲಕ ಜಾಹೀರಾತು ಪ್ರಕಟಿಸುವುದಕ್ಕೆ ಅವಕಾಶ ಇಲ್ಲ

* ವಾಣಿಜ್ಯ ಸಂದೇಶಗಳುಳ್ಳ ಗೋಡೆ ಫಲಕಗಳನ್ನು ಹಾಕುವಂತಿಲ್ಲ. ಸಾರ್ವಜನಿಕ ಸಂದೇಶಗಳುಳ್ಳ ಚಿತ್ರಕಲೆಗಳಿಗೆ ಅವಕಾಶವಿದೆ. ಆದರೆ ಇದಕ್ಕೆ ಪರಿಶೀಲನಾ ಸಮಿತಿಯಿಂದ ಅನುಮತಿ ಮೊದಲೇ ಪಡೆಯಬೇಕು.

* ಮರಗಳಲ್ಲಿ ವಿವಿಧ ಚೆಹ್ನೆಗಳನ್ನು ಹಾಕುವಂತಿಲ್ಲ. ರಸ್ತೆ ತಿರುವುಗಳ ಚಿಹ್ನೆ, ವಿದ್ಯುತ್‌, ಸಂಪರ್ಕ ಸಂಸ್ಥೆಗಳ ಎಚ್ಚರಿಕೆ ಚಿಹ್ನೆಗಳನ್ನು ಮರದಲ್ಲಿ ಹಾಕುವಂತಿಲ್ಲ.

* ಮೊಬೈಲ್‌ ಜಾಹೀರಾತುಗಳನ್ನೂ ಬಳಸಲು ಅವಕಾಶ ಇಲ್ಲ: ಯಾವುದೇ ರೀತಿಯ ಮೊಬೈಲ್‌ ಜಾಹೀರಾತು, ಮೋಟಾರು ವಾಹನಗಳಲ್ಲಿ ಸಾಗಿಸಬಲ್ಲ, ಅಥವಾ ಒಂದು ಬಾರಿ ಅಳವಡಿಸಿ, ಮತ್ತೆ ತೆಗೆದುಹಾಕಬಹುದಾದ ವಾಣಿಜ್ಯ ಜಾಹೀರಾತುಗಳನ್ನು ಬಳಸಬಾರದು.

* ನಿಂತಿರುವ ವಾಹನಗಳ ಮೇಲೆ ವಾಣಿಜ್ಯ, ವ್ಯಾಪಾರದ ಅಭಿವೃದ್ಧಿಗಾಗಿ ಜಾಹೀರಾತು ಹಾಕುವುದು ನಿಷಿದ್ಧ.

* ಸ್ಮಶಾನ, ಒಳಚರಡಿ, ರಾಜಾಕಾಲುವೆ, ಕೆರೆ, ಮರಗಳಲ್ಲಿ ವಿವಿಧ ಚಿಹ್ನಿಗಳನ್ನು ಹಾಕುವುದಕ್ಕೆ ನಿಷೇಧ ಹೇರಲಾಗಿತ್ತು.

 ನಿರಾಪೇಕ್ಷಣಾ ಪತ್ರ ಪಡೆದುಕೊಳ್ಳಬೇಕು

ನಿರಾಪೇಕ್ಷಣಾ ಪತ್ರ ಪಡೆದುಕೊಳ್ಳಬೇಕು

ಖಾಸಗಿ ನಿವೇಶನ, ಕಟ್ಟಡ ಅಥವಾ ರಾಜ್ಯ ಮತ್ತು ಕೇಂದ್ರ ಸರ್ಕಾರದ ಜಾಗದಲ್ಲಿ ಜಾಹೀರಾತು ಪ್ರದರ್ಶಿಸಲು ನಿರಾಕ್ಷೇಪಣಾ ಪ್ರಮಾಣಪತ್ರ ಪಡೆಯುವುದು ಕಡ್ಡಾಯಗೊಳಿಸಲಾಗಿದೆ. ಇಲ್ಲವಾದಲ್ಲಿ ಶೇ.150 ರಷ್ಟು ಹೆಚ್ಚುವರಿ ಶುಲ್ಕ ಪಾವತಿಸಬೇಕಿದೆ ಎಂಬ ಹೊಸ ನಿಯಮವನ್ನು ಸರ್ಕಾರ ತಿಳಿಸಿದೆ.

ಬಿಬಿಎಂಪಿ ಆಯುಕ್ತರ ಅನುಮತಿ ಮೇಲೆ ಜಾಹಿರಾತು ಫಲಕ ಹಾಕಲು ಸರ್ಕಾರ ಗ್ರಿನ್ ಸಿಗ್ನಲ್ ನೀಡಿದೆ. ಹೀಗಾಗಿ ಈ ನಿರ್ಧಾರ ಈಗ ಗೊಂದಲಕ್ಕೆ ಎಡೆ ಮಾಡಿಕೊಟ್ಟಿದೆ.
 ಸರ್ಕಾರಕ್ಕೆ ಬಿಬಿಎಂಪಿ ಪತ್ರ

ಸರ್ಕಾರಕ್ಕೆ ಬಿಬಿಎಂಪಿ ಪತ್ರ

ಆದ ಕಾರಣ ಜಾಹೀರಾತು ಹಾಕುವುದಕ್ಕೆ ಅನುಮತಿ ನೀಡಬೇಕಾ? ಬೇಡವಾ? ಎಂಬುವುದರ ಬಗ್ಗೆ ಸ್ಪಷ್ಟನೆ ಕೋರಿ ಸರ್ಕಾರಕ್ಕೆ ಬಿಬಿಎಂಪಿ ಪತ್ರ ಬರೆದಿದೆ.

ಅನುಮತಿ ಪಡೆಯದೇ ಜಾಹೀರಾತು ಪ್ರದರ್ಶಿಸಿದರೆ, ನೋಟೀಸ್ ನೀಡದೆ ಪಾಲಿಕೆ ತೆರವು ಮಾಡಬಹುದಾಗಿದೆ. 100 ಚ.ಮೀ ಕಡಿಮೆ ವಿಸ್ತೀರ್ಣವಿದ್ದರೆ 5 ಸಾವಿರ, ಇದಕ್ಕಿಂತ ಹೆಚ್ಚಿನ ವಿಸ್ತೀರ್ಣಕ್ಕೆ 7 ಸಾವಿರ ರೂ. ದಂಡ ನಿಗದಿಪಡಿಸಲಾಗಿದೆ. ನಿಯಮ ಪಾಲನೆ ಮಾಡದ ಕಂಪನಿಗಳಿಗೆ ದಿನಕ್ಕೆ ಕೇವಲ ಒಂದು ಸಾವಿರದಂತೆ ದಂಡ ವಿಧಿಸಲು ಅವಕಾಶವಿದೆ ಎಂದು ಸ್ಪಷ್ಟಪಡಿಸಿದೆ. ಇದನ್ನೂ ಓದಿ: 21 ಸಚಿವರ ಪಟ್ಟಿಗೆ ಇನ್ನೂ ಹೈಕಮಾಂಡ್‍ನಿಂದ ಸಿಕ್ಕಿಲ್ಲ ಗ್ರೀನ್‍ಸಿಗ್ನಲ್
 ವಿಧಾನಸೌಧ ಸುತ್ತಮುತ್ತ ನಿರ್ಬಂಧ

ವಿಧಾನಸೌಧ ಸುತ್ತಮುತ್ತ ನಿರ್ಬಂಧ

ಹೊಸ ನಿಯಮದಂತೆ, ಕುಮಾರಕೃಪಾ ರಸ್ತೆ, ವಿಂಡ್ಸರ್ ಮ್ಯಾನರ್-ಶಿವಾನಂದ ವೃತ್ತ, ರಾಜಭವನ ರಸ್ತೆ, ಹೈಗ್ರೌಂಡ್ಸ್ ನಿಂದ ಮಿನ್ಸ್ಕ್ ಚೌಕ, ಸ್ಯಾಂಕಿ ರಸ್ತೆ, ಹೈಗ್ರೌಂಡ್ಸ್ ನಿಂದ ವಿಂಡ್ಸರ್‍ಸಿಗ್ನಲ್, ಅಂಬೇಡ್ಕರ್ ವೀದಿ, ಕೆ.ಆರ್ ವೃತ್ತದಿಂದ ಇನ್ ಫೆಂಟ್ರಿ ರಸ್ತೆ ಜಂಕ್ಷನ್, ಅಂಚೆ ಕಚೇರಿ ರಸ್ತೆ, ಕೆ.ಆರ್ ವೃತ್ತದಿಂದ ಮೈಸೂರು ಬ್ಯಾಂಕ್ ವೃತ್ತ, ಚಾಲುಕ್ಯ ವೃತ್ತ, ಮಹಾರಾಣಿ ಕಾಲೇಜು ರಸ್ತೆ, ಕೆ.ಆರ್ ವೃತ್ತ, ಕಬ್ಬನ್ ಪಾರ್ಕ್, ಲಾಲ್ ಭಾಗ್, ನೃಪತುಂಗ ರಸ್ತೆಗಳಲ್ಲಿ ಜಾಹೀರಾತು ಪ್ರದರ್ಶನಕ್ಕೆ ನಿಷೇಧ ಹೇರಲಾಗಿದೆ. ಇದರೊಂದಿಗೆ ದೇವಾಲಯ, ಮಸೀದಿ, ಗುರುದ್ವಾರ, ಚರ್ಚ್ ಹಾಗೂ ಧಾರ್ಮಿಕ ಸ್ಥಳಗಳಿಂದ ಐವತ್ತು ಮೀಟರ್, ವ್ಯಾಪ್ತಿಯಲ್ಲಿ ಜಾಹಿರಾತು ಪ್ರದರ್ಶನ ನಿಬರ್ಂಧಿಸಲಾಗಿದೆ.

ಮೇಲ್ಸೇತುವೆ, ರೈಲ್ವೇ ಮೇಲ್ಸೇತುವೆ, ಎಲಿವೇಟೆಡ್ ಕಾರಿಡಾರ್, ಟೆಲಿಕಾಂ ಟವರ್ ನ ಅಂಚಿನಿಂದ 3.5 ಮೀಟರ್ ಪರಿಧಿ ಹಾಗೂ ಜಲಮಂಡಳಿಯ ವಾಟರ್ ಟ್ಯಾಂಕರ್ ನಿಂದ 15 ಮೀಟರ್ ವ್ಯಾಪ್ತಿಯಲ್ಲಿ ಜಾಹಿರಾತು ಪ್ರದರ್ಶನಕ್ಕೆ ಅವಕಾಶ ನಿರಾಕರಿಸಲಾಗಿದ್ದು. ಇದರೊಂದು ಜಾಹೀರಾತು ಫಲಕಗಳ ಅಳತೆಗಳ ಬಗ್ಗೆಯೂ ನಿಯಮ ಜಾರಿ ಮಾಡಿದೆ.

Recommended Video

ಡಿ ಕೆ ಶಿವಕುಮಾರ್ ಎದುರೇ ಕಾರ್ಯಕರ್ತರ ಕಿತ್ತಾಟ | Oneindia kannada
 ಜಾಹೀರಾತು ಫಲಕಕ್ಕೆ ಅನುಮತಿ ನೀಡಬೇಡಿ ಎಂದು ಮನವಿ

ಜಾಹೀರಾತು ಫಲಕಕ್ಕೆ ಅನುಮತಿ ನೀಡಬೇಡಿ ಎಂದು ಮನವಿ

ನಗರದಲ್ಲಿ ಜಾಹೀರಾತು ಫಲಕಗಳನ್ನು ಅಳವಡಿಸಲು ಅನುಮತಿ ನೀಡದಂತೆ ಕೋರಿ ಕಾಂಗ್ರೆಸ್ ಮಾಜಿ ಮೇಯರ್​ಗಳಾದ ರಾಮಚಂದ್ರಪ್ಪ, ಹುಚ್ಚಪ್ಪ ಮತ್ತು ಪಿ.ಆರ್. ರಮೇಶ್ ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.

ಪತ್ರದಲ್ಲಿ ಕೆಎಂಸಿಯ ಹೊಸ ನಿಯಮದಂತೆ, ಬೆಂಗಳೂರು ನಗರದಲ್ಲಿ ಜಾಹೀರಾತು ಫಲಕಗಗಳ ಅಳವಡಿಸುವುದರ ಬಗ್ಗೆ ಆಯುಕ್ತರು ತಮ್ಮ ಅನುಮತಿಗಾಗಿ ಪತ್ರ ಬರೆದಿರುವ ಬಗ್ಗೆ ನಮಗೆ ತಿಳಿದು ಬಂದಿರುತ್ತದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕೆಎಂಸಿ ಹಳೆಯ ನಿಯಮದಂತೆ ನಗರದಲ್ಲಿ ಜಾಹೀರಾತು ಫಲಕಗಳನ್ನು ಅಳವಡಿಸಬಾರದೆಂಬ ನಿಯಮವಿದೆ.

ಚುನಾಯಿತ ಸದಸ್ಯರು ಇಲ್ಲದಿರುವಾಗ ಮತ್ತು ಈ ಎಲ್ಲದರ ಬಗ್ಗೆ ಸರ್ವೋಚ್ಛ ನ್ಯಾಯಾಲಯದಲ್ಲಿ ದಾವೆ ಇರುವುದರಿಂದ ಯಾವ ಕ್ಷಣದಲ್ಲಾದರೂ ತೀರ್ಪು ಹೊರಬರುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ. ತಾವು ಯಾವುದೇ ಕಾರಣಕ್ಕೂ ತೀರ್ಪು ಬರುವ ಮೊದಲು ಜಾಹೀರಾತು ಫಲಕಗಳನ್ನು ಅಳವಡಿಸಲು ಅನುಮತಿ ಕೊಡಬಾರದೆಂದು ಈ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ.

ಬೆಂಗಳೂರು ನಗರದಲ್ಲಿ ಜಾಹೀರಾತು ಫಲಕಗಳ ಗೊಂದಲವಿಲ್ಲದೇ ನಗರವು ಈಗ ಸುಂದರವಾಗಿದೆ. ಅದನ್ನು ಹಾಳು ಮಾಡುವ ಕೆಲಸದಲ್ಲಿ ತಾವು ಭಾಗಿಯಾಗುವುದಿಲ್ಲವೆಂದು ನಾವು ನಂಬಿದ್ದೇವೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

English summary
Advertisement hoardings are likely to make a comeback in the city, which was bereft of them for nearly three years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X