ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪದವಿ ಪ್ರವೇಶ ಪ್ರಕ್ರಿಯೆ ಆರಂಭ: ಬೇಗ ಬೇಗ ಅರ್ಜಿ ಸಲ್ಲಿಸಿ

By Nayana
|
Google Oneindia Kannada News

ಬೆಂಗಳೂರು, ಮೇ.2: ದ್ವಿತೀಯ ಪಿಯುಸಿ ಫಲಿತಾಂಶ ಹೊರಬಿದ್ದ ಹಿನ್ನೆಲೆಯಲ್ಲೇ ಪದವಿ ಕೋರ್ಸ್‌ಗಳ ಪ್ರವೇಶ ಪ್ರಕ್ರಿಯೆ ಆರಂಭವಾಗಿದೆ.

ಕೆಲವು ಪ್ರತಿಷ್ಠಿತ ಕಾಲೇಜುಗಳ ಕಾರ್ಮಿಕರ ದಿನವನ್ನು ಲೆಕ್ಕಿಸದೆ ಮಂಗಳವಾರ ಮಧ್ಯಾಹ್ನದವರೆಗೆ ಅರ್ಜಿ ನೀಡಿವೆ. ಮತ್ತೆ ಕೆಲವು ಕಾಲೇಜುಗಳು ಬುಧವಾರದಿಂದ ಅರ್ಜಿ ನೀಡಲಿವೆ. ಈ ವರ್ಷ ವಾಣಿಜ್ಯ ವಿಭಾಗಕ್ಕೆ ಹೆಚ್ಚಿನ ಬೇಡಿಕೆ ಉಂಟಾಗಲಿದೆ ಎಂಬ ನಿರೀಕ್ಷೆ ಇದೆ.

ದ್ವಿತೀಯ ಪಿಯು ಫಲಿತಾಂಶ ಪ್ರಕಟ, ದಕ್ಷಿಣ ಕನ್ನಡ ಪ್ರಥಮ ದ್ವಿತೀಯ ಪಿಯು ಫಲಿತಾಂಶ ಪ್ರಕಟ, ದಕ್ಷಿಣ ಕನ್ನಡ ಪ್ರಥಮ

ಬಹುತೇಕ ಪ್ರತಿಷ್ಠಿತ ಕಾಲೇಜುಗಳಲ್ಲಿ ವಾಣಿಜ್ಯಕ್ಕೆ ಶೇ.80 ಮತ್ತು ವಿಜ್ಞಾನ ಮತ್ತು ಕೆಲೆಗೆ ಶೇ.60ರಷ್ಟು ಕಟ್‌ಆಫ್ ನಿಗದಿಮಾಡಿಕೊಂಡಿದೆ. ಈ ವರ್ಷ ದ್ವಿತೀಯ ಪಿಯುಸಿ ಫಲಿತಾಂಶ ಕೂಡ ಶೇ.7.18 ಹೆಚ್ಚಳವಾಗಿರುವುದರಿಂದ ಪ್ರವೇಶಕ್ಕೆ ನಿಗದಿಪಡಿಸುವ ಕಟ್‌ಆಫ್‌ ಅಂಕವನ್ನು ಶೇ.2 ರಷ್ಟು ಏರಿಕೆ ಮಾಡಿದೆ. ಮೇ.5ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲು ನಿರ್ಧರಿಸಿವೆ.

Admission process resume for degree courses

ಬಿಎಂಎಸ್ ಮಹಿಳಾ ಕಾಲೇಜು: ಬಸವನಗುಡಿಯ ಬಿಎಂಎಸ್ ಮಹಿಳಾ ಕಾಲೇಜಿನಲ್ಲಿ ಬಿ.ಕಾಂ-460, ಬಿಎಸ್ಸಿ-200, ಬಿ.ಎ-400, ಬಿಸಿಎ-120, ಬಿಬಿಎ-120 ಮತ್ತು ಬಿ.ವೋಕ್‌ನಲ್ಲಿ 30 ಸೀಟುಗಳು ಲಭ್ಯವಿದೆ.

ವಿಜಯ ಕಾಲೇಜು: ಆರ್‌.ವಿ. ರಸ್ತೆಯ ವಿಜಯ ಅನುದಾನಿತ ಮತ್ತು ಅನುದಾನರಹಿತ ಕಾಲೇಜು ಪ್ರತಿ ವರ್ಷ 1500 ಅರ್ಜಿಗಳನ್ನು ಸ್ವೀಕರಿಸುತ್ತದೆ. ಬಿ.ಕಾಂನಲ್ಲಿ 480, ವಿಜ್ಞಾನದಲ್ಲಿ 630 ಸೀಟುಗಳು ಲಭ್ಯವಿದೆ. ಕಳೆದ ವರ್ಷ ಬಿ.ಕಾಂಗೆ ಶೇ.80 ಮತ್ತು ವಿಜ್ಞಾನಕ್ಕೆ ಶೇ.60 ಕಟ್‌ಆಫ್‌ ಅಂಕ ನಿಗದಿ ಮಾಡಲಾಗಿತ್ತು.

English summary
Very soon after second PU results out, many colleges in Bangalore have started admission process for various degree courses. Even though May first was holiday, hundreds of students were in queue in front of colleges to collect brochure of courses.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X