ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ವಲ್ಡ್ಸ್ ಬೆಸ್ಟ್ ಮಮ್ಮಿ' ಪ್ರಶಸ್ತಿ ಸಿಗುತ್ತಿರುವುದು ಒಬ್ಬ ತಂದೆಗೆ

|
Google Oneindia Kannada News

ಬೆಂಗಳೂರು, ಮಾರ್ಚ್ 6: 'ವಲ್ಡ್ಸ್ ಬೆಸ್ಟ್ ಮಮ್ಮಿ ಅವಾರ್ಡ್' ಈ ಪ್ರಶಸ್ತಿಯನ್ನು ಸಾಮಾನ್ಯವಾಗಿ ತಾಯಿಗೆ ನೀಡುತ್ತಾರೆ. ಆದರೆ, ಈ ಪ್ರಶಸ್ತಿ ಒಬ್ಬ ತಂದೆಗೆ ಸಿಗುತ್ತಿದೆ. ಅನಾರೋಗ್ಯ ಪೀಡಿತ ಮಗುವನ್ನು ದತ್ತು ಪಡೆದಿದ್ದ ಆದಿತ್ಯ ತಿವಾರಿರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

ಬೆಂಗಳೂರಿನಲ್ಲಿ ಮಹಿಳಾ ದಿನಾಚರಣೆ ವಿಶೇಷವಾಗಿ 'ವಲ್ಡ್ಸ್ ಬೆಸ್ಟ್ ಮಮ್ಮಿ ಅವಾರ್ಡ್' ಕಾರ್ಯಕ್ರಮ ನಡೆಯುತ್ತಿದೆ. ಈ ಕಾರ್ಯಕ್ರಮದಲ್ಲಿ ಪುಣೆಯ ಆದಿತ್ಯ ತಿವಾರಿರಿಗೆ ಪ್ರಶಸ್ತಿ ನೀಡಲಾಗುತ್ತಿದೆ. ಈ ಪ್ರಶಸ್ತಿಯ ಮೂಲಕ ಅವರ ಕೆಲಸಕ್ಕೆ ಗೌರವ ನೀಡಲಾಗುತ್ತಿದೆ.

ಹೆರಿಗೆ ರಜೆ: ನೌಕರರಿಗೆ ಖುಷಿ ಸುದ್ದಿ ನೀಡಿದ ರಾಜ್ಯ ಸರ್ಕಾರಹೆರಿಗೆ ರಜೆ: ನೌಕರರಿಗೆ ಖುಷಿ ಸುದ್ದಿ ನೀಡಿದ ರಾಜ್ಯ ಸರ್ಕಾರ

ಆದಿತ್ಯ ತಿವಾರಿ ಸಾಫ್ಟವೇರ್ ಇಂಜಿನಿಯರ್ ಆಗಿದ್ದರು. ಆ ಕೆಲಸಕ್ಕೆ ರಾಜಿನಾಮೆ ನೀಡಿ, ಅವಿನಾಶ್ ಎಂಬ 22 ತಿಂಗಳ ಮಗುವನ್ನು ದತ್ತು ಪಡೆದರು. ಆದಿತ್ಯ ತಿವಾರಿ ಭಾರತದ ಚಿಕ್ಕ ವಯಸ್ಸಿನ ಸಿಂಗಲ್ ಫಾದರ್ ಆಗಿದ್ದಾರೆ. 2016ರಲ್ಲಿ ಮಗುವನ್ನ ಆದಿತ್ಯ ತಿವಾರಿ ದತ್ತು ಪಡೆದುಕೊಂಡಿದ್ದರು.

Adithya Thivari To Be Honored with worlds best mommy award

ಪುಟ್ಟ ಮಗು ಅವಿನಾಶ್ ಹುಟ್ಟಿದಾಗ ಹೃದಯದಲ್ಲಿ ಎರಡು ರಂಧ್ರ ಇತ್ತು. ಅವಿನಾಶ್ ಫೋಷಕರು ಮಗುವನ್ನು ಬಿಟ್ಟು ಹೋಗಿದ್ದರು. ಆ ನಂತರ ಆದಿತ್ಯ ಈ ಮಗುವನ್ನು ದತ್ತು ತೆಗೆದುಕೊಂಡು ಸಾಕುತ್ತಿದ್ದಾರೆ.

ತುಂಬು ಗರ್ಭಿಣಿಯಾದರೂ ಕಲಾಪಕ್ಕೆ ಹಾಜರು: ಮಾದರಿಯಾದ ಶಾಸಕಿತುಂಬು ಗರ್ಭಿಣಿಯಾದರೂ ಕಲಾಪಕ್ಕೆ ಹಾಜರು: ಮಾದರಿಯಾದ ಶಾಸಕಿ

ಸಿಂಗಲ್ ಪೇರೆಂಟ್ ಆಗಿರುವ ಆದಿತ್ಯ ಕೆಲಸಕ್ಕೆ ದೇಶ ವಿದೇಶದಲ್ಲಿಯೂ ಮೆಚ್ಚಿಗೆ ವ್ಯಕ್ತವಾಗಿತ್ತು. ಅಲ್ಲಿನ ಅನೇಕ ಕಾರ್ಯಕ್ರಮಗಳಲ್ಲಿ ಅವರು ಭಾಗಿಯಾಗಿದ್ದರು. ಇದೀಗ ಆದಿತ್ಯಗೆ 'ವಲ್ಡ್ಸ್ ಬೆಸ್ಟ್ ಮಮ್ಮಿ ಅವಾರ್ಡ್' ಪ್ರಶಸ್ತಿಯೂ ಸಿಗುತ್ತಿದೆ.

English summary
Single father Adithya Thivari to be honored with the world's best mommy award. Adithya Thivari adopted boy with down syndrome.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X