• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಇಂದಿರಾ ಕ್ಯಾಂಟೀನ್‌ಗೆ ಆಹಾರ ಪೂರೈಕೆಗೆ ಆದಮ್ಯ ಚೇತನ ಟೆಂಡರ್

|

ಬೆಂಗಳೂರು, ಡಿಸೆಂಬರ್ 12 : ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ದಿನದಿಂದ ಇಂದಿರಾ ಕ್ಯಾಂಟೀನ್ ಅಸ್ತಿತ್ವದ ಬಗ್ಗೆ ಪ್ರಶ್ನೆ ಎದ್ದಿದೆ. ಈಗ ಬಿಬಿಎಂಪಿ ಕ್ಯಾಂಟೀನ್‌ಗಳಿಗೆ ಆಹಾರ ಪೂರೈಸಲು ಟೆಂಡರ್ ಕರೆದಿದ್ದು, ಆದಮ್ಯ ಚೇತನ ಸಂಸ್ಥೆಯೂ ಟೆಂಡರ್‌ನಲ್ಲಿ ಪಾಲ್ಗೊಂಡಿದೆ.

ಬೆಂಗಳೂರು ನಗರದಲ್ಲಿರುವ ಇಂದಿರಾ ಕ್ಯಾಂಟೀನ್ಗಳಿಗೆ ಆಹಾರ ಪೂರೈಕೆ ಮಾಡುವ ಗುತ್ತಿಗೆಯ ಅವಧಿ ಮುಕ್ತಾಯವಾಗಿದೆ. ಆದ್ದರಿಂದ, ಹೊಸ ಟೆಂಡರ್‌ ಅನ್ನು ಬಿಬಿಎಂಪಿ ಕರೆದಿದೆ. ಆದಮ್ಯ ಚೇತನ ಸೇರಿ 8 ಸಂಸ್ಥೆಗಳು ಅರ್ಜಿ ಸಲ್ಲಿಸಿವೆ.

ಇಂದಿರಾ ಕ್ಯಾಂಟೀನ್ ಇನ್ನು ಮುಂದೆ ಕೆಂಪೇಗೌಡ ಕ್ಯಾಂಟಿನ್?

"ಮುಂದಿನ 15 ದಿನಗಳಲ್ಲಿ ಬಿಬಿಎಂಪಿ ಟೆಂಡರ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಿದೆ" ಎಂದು ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಹೇಳಿದ್ದಾರೆ. ಪ್ರಕ್ರಿಯೆ ಅಂತಿಮಗೊಂಡ ಬಳಿಕ ಯಾರಿಗೆ ಟೆಂಡರ್ ಸಿಗಲಿದೆ? ಎಂಬುದು ಅಂತಿಮಗೊಳ್ಳಲಿದೆ.

ಇಂದಿರಾ ಕ್ಯಾಂಟೀನ್ ಮುಚ್ಚುವ ಪ್ರಸ್ತಾಪ : ಯಾರು, ಏನು ಹೇಳಿದರು?

ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಇಂದಿರಾ ಕ್ಯಾಂಟೀನ್ ಹೆಸರು ಬದಲಾಗಲಿದೆ. ಕ್ಯಾಂಟೀನ್ ನಿರ್ವಹಣೆಗೆ ಅನುದಾನ ನೀಡುತ್ತಿಲ್ಲ ಎಂಬ ಆರೋಪಗಳು ಕೇಳಿ ಬಂದಿದ್ದವು. ಅಂತಿಮವಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಇಂದಿರಾ ಕ್ಯಾಂಟೀನ್ ಮುಚ್ಚುವುದಿಲ್ಲ ಎಂದು ಸ್ಪಷ್ಟನೆಯನ್ನು ನೀಡಿದ್ದರು.

ಇಂದಿರಾ ಕ್ಯಾಂಟೀನ್ ಮುಚ್ಚುವ ವಿಚಾರ, ಯಡಿಯೂರಪ್ಪ ಏನು ಹೇಳಿದ್ರು?

ಆದಮ್ಯ ಚೇತನ ಸಂಸ್ಥೆ ಟೆಂಡರ್

ಆದಮ್ಯ ಚೇತನ ಸಂಸ್ಥೆ ಟೆಂಡರ್

ಇಂದಿರಾ ಕ್ಯಾಂಟೀನ್‌ಗೆ ಆಹಾರ ಪೂರೈಕೆ ಮಾಡಲು ಬಿಬಿಎಂಪಿ ಕರೆದಿರುವ ಟೆಂಡರ್‌ನಲ್ಲಿ ಆದಮ್ಯ ಚೇತನ ಪಾಲ್ಗೊಂಡಿದೆ. ಆದಮ್ಯ ಚೇತನ ಸಾವಿರಾರು ಶಾಲೆಗಳಿಗೆ ಬಿಸಿಯೂಟ ಪೂರೈಕೆಯನ್ನು ಮಾಡುತ್ತಿದೆ. ಆದಮ್ಯ ಚೇತನ ಸಂಸ್ಥೆ ಕೇಂದ್ರ ಸಚಿವರಾಗಿದ್ದ ದಿ. ಅನಂತ್ ಕುಮಾರ್ ಅವರಿಗೆ ಸೇರಿದ್ದು. ಅನಂತ್ ಕುಮಾರ್ ಪತ್ನಿ ತೇಜಸ್ವಿನಿ ಅನಂತ್ ಕುಮಾರ್ ಇದರ ಉಸ್ತುವಾರಿ ನೋಡಿಕೊಳ್ಳುತ್ತಾರೆ.

ಇಂದಿರಾ ಕ್ಯಾಂಟೀನ್ ಆಹಾರ

ಇಂದಿರಾ ಕ್ಯಾಂಟೀನ್ ಆಹಾರ

ಇಂದಿರಾ ಕ್ಯಾಂಟೀನ್‌ಗೆ ಆಹಾರ ಪೂರೈಕೆ ಮಾಡಲು ಹಾಲಿ ಶೆಫ್ ಟಾಕ್, ರಿಚರ್ಡ್ಸ್‌, ಆದಮ್ಯ ಚೇತನ ಸೇರಿದಂತೆ 8 ಸಂಸ್ಥೆಗಳು ಅರ್ಜಿ ಹಾಕಿವೆ. ಟೆಂಡರ್ ನೀಡುವ ವೇಳೆ ಪಾರದರ್ಶಕ ನಿಯಮ ಪಾಲಿಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ. ಮುಂದಿನ 15 ದಿನಗಳಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಟೆಂಡರ್ ಅಂತಿಮಗೊಳಿಸಲಾಗುತ್ತದೆ.

173 ಇಂದಿರಾ ಕ್ಯಾಂಟೀನ್

173 ಇಂದಿರಾ ಕ್ಯಾಂಟೀನ್

ಬೆಂಗಳೂರು ನಗರದಲ್ಲಿ 173 ಇಂದಿರಾ ಕ್ಯಾಂಟೀನ್‌ಗಳಿವೆ. 18 ಮೊಬೈಲ್ ಕ್ಯಾಂಟೀನ್‌ಗಳಿವೆ. 5 ರೂ.ಗೆ ಉಪಹಾರ, 10 ರೂ.ಗೆ ಊಟವನ್ನು ಇಂದಿರಾ ಕ್ಯಾಂಟೀನ್‌ನಲ್ಲಿ ನೀಡಲಾಗುತ್ತದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ ಈ ಯೋಜನೆ ಜಾರಿಗೆ ತರಲಾಯಿತು. ಸಿದ್ದರಾಮಯ್ಯ ಕನಸಿನ ಯೋಜನೆ ಇದಾಗಿದೆ.

ಕ್ಯಾಂಟೀನ್‌ಗಳ ನಿರ್ವಹಣೆ

ಕ್ಯಾಂಟೀನ್‌ಗಳ ನಿರ್ವಹಣೆ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಇಂದಿರಾ ಕ್ಯಾಂಟೀನ್‌ಗಳ ನಿರ್ವಹಣೆ ಮಾಡುತ್ತಿದೆ. ಆದರೆ, ಸರ್ಕಾರದಿಂದಲೂ ಅನುದಾನದ ಅಗತ್ಯವಿದೆ. ಬಿಬಿಎಂಪಿಯಲ್ಲಿ ಈಗ ಬಿಜೆಪಿ ಆಡಳಿತವೇ ಇದ್ದು, ಸರ್ಕಾರದಿಂದ ಅನುದಾನ ಸಿಗಲಿದೆಯೇ? ಕಾದು ನೋಡಬೇಕು.

English summary
Adamya Chetana wish to supply food to Indira Canteen. Adamya Chetana participated in tender process. BBMP called for tender. Adamya Chetana supplies mid-day meals to schools.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X