• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೈಕ್ರೋ ಪ್ಲಾಸ್ಟಿಕ್ ವಿರುದ್ಧ ಸಮರ ಸಾರಿದ ತೇಜಸ್ವಿನಿ ಅನಂತಕುಮಾರ್

|

ಕಣ್ಣಿಗೆ ಕಾಣದ ಹಾನಿಕಾರಕ ಮೈಕ್ರೋ ಪ್ಲಾಸ್ಟಿಕ್ ನಿಂದ ಜನರ ಆರೋಗ್ಯ ಹಾಗೂ ಪರಿಸರದ ಮೇಲೆ ಆಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ಜನ ಸಾಮಾನ್ಯರಲ್ಲಿ ಅರಿವು ಮೂಡಿಸುವ ತುರ್ತು ಅಗತ್ಯವಿದೆ ಎಂದು ಅದಮ್ಯ ಚೇತನ ಮುಖ್ಯಸ್ಥೆ ಡಾ ತೇಜಸ್ವಿನಿ ಅನಂತಕುಮಾರ್ ಹೇಳಿದರು.

ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಅದಮ್ಯ ಚೇತನ ಸಂಸ್ಥೆಯ ವತಿಯಿಂದ ನಗರದ ಕಿತ್ತೂರು ರಾಣಿ ಚೆನ್ನಮ್ಮ ಮೈದಾನದಲ್ಲಿ ಆಯೋಜಿಸಲಾಗಿದ್ದ ಜನ ಜಾಗೃತಿ ಜಾಥಾಗೆ ಚಾಲನೆ ನೀಡಿ ಅವರು ಮಾತನಾಡಿದರು.

ಸನ್ ಪೆಡಲ್ ರೈಡ್: 60 ದಿನಗಳಲ್ಲಿ 6000 ಕಿ.ಮೀ ಪ್ರಯಾಣ

ಐಐಟಿ ಬಾಂಬೆ ನಡೆಸಿರುವ ಸಂಶೋಧನೆಯ ಪ್ರಕಾರ ದೇಶದ ಬಹುತೇಕ ಬ್ರಾಂಡಿನ ಉಪ್ಪಿನಲ್ಲಿ ಮೈಕ್ರೋ ಪ್ಲಾಸ್ಟಿಕನ್ನು ನಾವು ಕಾಣಬಹುದಾಗಿದೆ. ಇದು ಉದ್ದೇಶಪೂರ್ವಕವಾಗಿ ಸೇರ್ಪಡೆಯಾಗಿರುವ ಪ್ಲಾಸ್ಟಿಕ್ ಅಲ್ಲ.

ಪರಿಸರಕ್ಕೆ ಕಂಟಕವಾಗುವ ಪ್ಲಾಸ್ಟಿಕ್ ಬ್ಯಾಗ್ ಪತ್ತೆಗೆ ಕ್ಯೂಆರ್ ಕೋಡ್

ನಮ್ಮ ದಿನ ನಿತ್ಯದ ಪ್ಲಾಸ್ಟಿಕ್ ಬಳಕೆಯಿಂದ ನಮ್ಮ ಆಹಾರಕ್ಕೆ, ನೀರು ಹಾಗೂ ಪರಿಸರಕ್ಕೆ ಸೇರ್ಪಡೆಯಾಗುತ್ತಿರುವ ಮೈಕ್ರೋ ಕಣಗಳು ಇದಕ್ಕೆ ಕಾರಣ. ನಮಗೆ ಗೊತ್ತಿಲ್ಲದಂತೆಯೇ ನಾವು ಹಾನಿಕಾರಕ ಪ್ಲಾಸ್ಟಿಕನ್ನ ಸೇವಿಸುತ್ತಿದ್ದೇವೆ. ಹಾಗೂ ಇತರರಿಗೂ ನೀಡುತ್ತಿದ್ದೇವೆ ಎಂದು ಹೇಳಿದರು.

ಸ್ವಚ್ಛತಾ ಕಾರ್ಯಕ್ಕೆ ಸ್ವತಃ ಬೀದಿಗಿಳಿದ ಶಿವಮೊಗ್ಗ ಜಿಲ್ಲಾಧಿಕಾರಿ ದಯಾನಂದ್

ಅದ್ಯಮ ಚೇತನ ಹಮ್ಮಿಕೊಂಡಿರುವ ಈ ಅಭಿಯಾನಕ್ಕೆ ಇತ್ತೀಚೆಗೆ ಬಿಜೆಪಿ ಕೂಡಾ ತಲೆದೂಗಿತ್ತು. ಸಭೆ, ಸಮಾರಂಭಗಳಲ್ಲಿ ಪ್ಲಾಸ್ಟಿಕ್ ಬಳಕೆ ನಿಯಂತ್ರಣಕ್ಕೆ ಕರೆ ನೀಡಲಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಪ್ಲಾಸ್ಟಿಕ್ ಬಳಕೆ ಇಲ್ಲದೆ ಜೀವನವೇ ಇಲ್ಲ ಎನ್ನುವ ಹಂತ

ಪ್ಲಾಸ್ಟಿಕ್ ಬಳಕೆ ಇಲ್ಲದೆ ಜೀವನವೇ ಇಲ್ಲ ಎನ್ನುವ ಹಂತ

ಪ್ಲಾಸ್ಟಿಕ್ ಬಳಕೆ ಇಲ್ಲದೆ ಜೀವನವೇ ಇಲ್ಲ ಎನ್ನುವ ಹಂತಕ್ಕೆ ತಲುಪಿರುವ ನಾವುಗಳು ಇದರ ಬಗ್ಗೆ ಹಾಗೂ ಇದರ ಬಳಕೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕಾದ ತುರ್ತು ಅಗತ್ಯವಿದೆ. ವಿಶ್ವಸಂಸ್ಥೆ ನಡೆಸಿರುವ ಒಂದು ಸಂಶೋಧನೆಯಲ್ಲಿ ನಾವು ಸುರಕ್ಷಿತ ಎಂದು ಕುಡಿಯುವ ಬಾಟಲ್ ನೀರಿನಲ್ಲೂ 40 ರಿಂದ 900 ರಷ್ಟು ಮೈಕ್ರೋ ಕಣಗಳನ್ನು ಪತ್ತೆಹಚ್ಚಿರುವ ಆಘಾತಕಾರಿ ಅಂಶ ಬಯಲಾಗಿದೆ ಎಂದು ತೇಜಸ್ವಿನಿ ಹೇಳಿದರು.

ಸ್ಟೀಲ್ ತಟ್ಟೆ ಲೋಟಗಳನ್ನು ಬಳಸಿ

ಸ್ಟೀಲ್ ತಟ್ಟೆ ಲೋಟಗಳನ್ನು ಬಳಸಿ

ಕುಡಿಯುವ ನೀರಿನ ಬಾಟಲಿಯಲ್ಲೂ ಪ್ಲಾಸ್ಟಿಕ್ ಕಣ ಇರುವ ಇಂಥ ಅಂಶಗಳನ್ನು ಜನರಿಗೆ ತಿಳಿಸಬೇಕಾಗಿದೆ. ಇಂದು ಅರಮನೆ ಮೈದಾನದಲ್ಲಿ ನಡೆದ ಬಿಜೆಪಿ ಕಾರ್ಯಕ್ರಮದಲ್ಲಿ 3 ಸಾವಿರಕ್ಕೂ ಹೆಚ್ಚು ಜನರಿಗೆ ಅದಮ್ಯ ಚೇತನ ಸಂಸ್ಥೆಯ ಸ್ಟೀಲ್ ತಟ್ಟೆ ಲೋಟಗಳನ್ನು ಬಳಸಿ ಆಹಾರ ನೀಡಲಾಯಿತು. ರಾಜಕೀಯ ಕಾರ್ಯಕ್ರಮಗಳಲ್ಲಿ ಇಂತಹ ಆದರ್ಶಕಾರಿ ಅಂಶಗಳನ್ನು ಅಳವಡಿಸಕೊಳ್ಳುವುದು ಉತ್ತಮ ಎಂದು ಶ್ಲಾಘಿಸಿದರು.

ಕಾಸ್ಮೆಟಿಕ್ ಗಳಲ್ಲೂ ಕೂಡಾ ಪ್ಲಾಸ್ಟಿಕ್ ಬಳಕೆ

ಕಾಸ್ಮೆಟಿಕ್ ಗಳಲ್ಲೂ ಕೂಡಾ ಪ್ಲಾಸ್ಟಿಕ್ ಬಳಕೆ

ಇದಲ್ಲದೆ ನಾವು ಬಳಸುವ ಪಾಲಿಸ್ಟರ್ ಬಟ್ಟೆಗಳು, ಕಾಸ್ಮೆಟಿಕ್ ಗಳಲ್ಲೂ ಕೂಡಾ ಮೈಕ್ರೋ ಪ್ಲಾಸ್ಟಿಕ್ ಗಳನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಈ ಪಾಲಿಸ್ಟರ್ ಬಟ್ಟೆಗಳನ್ನು ತೊಳೆದಾಗ ಮೈಕ್ರೋ ಪ್ಲಾಸ್ಟಿಕ್ ನೀರು ಸೇರುತ್ತದೆ. ಈ ನೀರು ಸಮುದ್ರ ಹಾಗೂ ಸಮುದ್ರದ ನೀರಿನಿಂದ ತಯಾರಾಗುವ ಉಪ್ಪಿನಿಂದ ನಮ್ಮ ದೇಹ ಸೇರುತ್ತಿದೆ. ಹಾಗೆಯೇ ಕಾಸ್ಮೆಟಿಕ್ ಗಳಲ್ಲೂ ಕೂಡಾ ಇದನ್ನು ನಾವು ಕಾಣಬಹುದಾಗಿದೆ. ಹಾಲಿನ ಪ್ಯಾಕೆಟನ್ನು ಕತ್ತರಿಸುವ ಸಂಧರ್ಭದಲ್ಲಿ ಉಂಟಾಗುವ ಸಣ್ಣ ಚೂರು ಮಣ್ಣಿನಲ್ಲಿ ಸೇರ್ಪಡೆಯಾಗಿ ಮೈಕ್ರೋ ಪ್ಲಾಸ್ಟಿಕ್ ಆಗಿ ಮಾರ್ಪಾಡಾಗುತ್ತದೆ. ಇದನ್ನ ನಾವು ತಪ್ಪಿಸಬಹುದಾಗಿದೆ ಎಂದರು.

ಪ್ಲಾಸ್ಟಿಕ್ ನಿಷೇಧ ಸರಿಯಾಗಿ ಅನುಷ್ಠಾನವಾಗುತ್ತಿಲ್ಲ

ಪ್ಲಾಸ್ಟಿಕ್ ನಿಷೇಧ ಸರಿಯಾಗಿ ಅನುಷ್ಠಾನವಾಗುತ್ತಿಲ್ಲ

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನ್ಯಾಷನಲ್ ಕಾಲೇಜಿನ ಪ್ರೊ ರಮೇಶ್ ಮಾತನಾಡಿ, ನಮ್ಮ ರಾಜ್ಯದಲ್ಲಿ ಸರಕಾರ ಪ್ಲಾಸ್ಟಿಕ್ ಬಳಕೆಗೆ ನಿಷೇಧ ಹೇರಿದೆ. ಆದರೆ, ಇದನ್ನು ಸಕಾರಾತ್ಮಕವಾಗಿ ಅನುಷ್ಠಾನಗೊಳಿಸಬೇಕಾದ ಅಧಿಕಾರಿಗಳು ಹಾಗೂ ನೌಕರರಿಗೆ ಅಗತ್ಯವಾದ ತರಬೇತಿ ಇಲ್ಲ. ಇಂತಹ ಸಣ್ಣ ಸಣ್ಣ ಸಮಸ್ಯೆಗಳಿಂದಾಗಿ ಪ್ಲಾಸ್ಟಿಕ್ ನಿಷೇಧ ಸರಿಯಾಗಿ ಅನುಷ್ಠಾನ ವಾಗುತ್ತಿಲ್ಲ ಎಂದರು.

ಜಯನಗರದ ಪ್ರಮುಖ ಬೀದಿಗಳಲ್ಲಿ ನಡೆದ ಜಾಥಾ

ಜಯನಗರದ ಪ್ರಮುಖ ಬೀದಿಗಳಲ್ಲಿ ನಡೆದ ಜಾಥಾ

ಕಾರ್ಯಕ್ರಮದಲ್ಲಿ ನಟಿ ತಾರಾ ಅನುರಾಧಾ, ಮೇದಿನಿ ಗರುಢಾಚಾರ್, ಬಿ ಎನ್ ಪ್ರಹ್ಲಾದ್ ಬಾಬು, ಅದಮ್ಯ ಚೇತನ ಸಂಸ್ಥೆಯ ಟ್ರಸ್ಟಿ ಹೆಚ್ ಎನ್ ಎ ಪ್ರಸಾದ್, ಮಾಜಿ ಮೇಯರ್ ಎಸ್ ಕೆ ನಟರಾಜ್, ಮಾಜಿ ಕಾರ್ಪೋರೇಟರ್ ಚಿನ್ನಗಿರಿ, ವೇದವ್ಯಾಸ ಭಟ್, ಬಿಜೆಪಿ ಮಂಡಲ ಅಧ್ಯಕ್ಷ ವೇಣುಗೋಪಾಲ್ ರೆಡ್ಡಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ಕಿತ್ತೂರು ರಾಣಿ ಚೆನ್ನಮ್ಮ ಮೈದಾನದಿಂದ ಪ್ರಾರಂಭವಾದ ಈ ಜನಜಾಗೃತಿ ಜಾಥಾ ಮೆರವಣಿಗೆ ಜಯನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.

English summary
On the Eve Of World Environment Day Adamya Chetana Has Organized A Awareness Rally On Bad Impacts Of The Micro Plastic. Adamya Chetana Chair Person Dr. Tejaswini Ananthkumar, Adamya Chetana Trustee H.S.N Prasad, Film Actress & Former MLC Tara Anuradha & other participated in the rally
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X