ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಪ್ರೋ ಫೌಂಢೇಶನ್‌ ನಿಂದ ರೇಷನ್‌ ಕಿಟ್‌ ತಯಾರಿಕೆ, ವಿತರಣೆ

|
Google Oneindia Kannada News

ಬೆಂಗಳೂರು ಮೇ 10: ಕಳೆದ 45 ದಿನಗಳಿಂದ ಕರೋನಾ ಕರ್ಪ್ಯೂನಿಂದ ತೊಂದರೆಗೆ ಸಿಲುಕಿಕೊಂಡಿರುವ ಕಾರ್ಮಿಕರು, ಅಶಕ್ತರು ಹಾಗೂ ಸಾವಿರಾರು ಕುಟುಂಬಗಳಿಗೆ ಅದಮ್ಯ ಚೇತನ ಸಂಸ್ಥೆ ಆಹಾರ ಪೊಟ್ಟಣ ಹಾಗೂ ರೇಷನ್‌ ಕಿಟ್‌ಗಳನ್ನು ವಿತರಿಸುತ್ತಿದೆ. ಸುಮಾರು 6 ಲಕ್ಷಕ್ಕೂ ಹೆಚ್ಚು ಆಹಾರದ ಪ್ಯಾಕೇಟ್‌ಗಳು ಹಾಗೂ 20 ಸಾವಿರಕ್ಕೂ ಹೆಚ್ಚು ರೇಷನ್‌ ಕಿಟ್‌ಗಳನ್ನು ಅದಮ್ಯ ಚೇತನ ಸಂಸ್ಥೆಯ ವತಿಯಿಂದ ವಿತರಿಸಲಾಗಿದೆ.

ಈ ಮಹತ್‌ ಕಾರ್ಯದಲ್ಲಿ ಹಲವಾರು ಸಂಘ ಸಂಸ್ಥೆಗಳು ಕೈಜೋಡಿಸಿವೆ. ಅದರಲ್ಲೂ ಜಯನಗರದ ಸ್ಪೆಷಲ್‌ ಇನಿಷಿಯೇಟಿವ್‌ ರೈಡರ್ಸ್‌ ತಮ್ಮ ಹಾರ್ಲಿ ಡೇವಿಡ್‌ಸನ್‌ ನಂತಹ ಬೈಕ್‌ಗಳಲ್ಲಿ ಲಾಸ್ಟ್‌ ಮೈಲ್‌ ವಿತರಣೆಯನ್ನು ಮಾಡಿರುವುದಕ್ಕೆ ಹಾಗೂ ಊಟ ತಯಾರಿಸಲು ಹಾಗೂ ರೇಷನ್‌ ಕಿಟ್‌ ತಯಾರಿಸಲು ಹಣ ಸಹಾಯ ಮಾಡಿದ್ದಕ್ಕೆ ಇಂದು ಅಭಿನಂದನೆಗಳನ್ನು ಸಲ್ಲಿಸಲಾಯಿತು.

ಕೊರೊನಾ ಹೋರಾಟಕ್ಕೆ ಮತ್ತೆ ಬಲ ತುಂಬಿದ ವಿಪ್ರೋ ಮುಖ್ಯಸ್ಥಕೊರೊನಾ ಹೋರಾಟಕ್ಕೆ ಮತ್ತೆ ಬಲ ತುಂಬಿದ ವಿಪ್ರೋ ಮುಖ್ಯಸ್ಥ

ಇದೇ ವೇಳೆ 22 ಸಾವಿರಕ್ಕೂ ಹೆಚ್ಚು ಬಟ್ಟೆಯ ಬ್ಯಾಗ್‌ಗಳು ಹಾಗೂ ಮಾಸ್ಕ್‌ಗಳನ್ನು ತಯಾರಿಸಿರುವ ಸುರುಚಿ ಸಂಸ್ಥೆಯ ಮಹಿಳೆಯರಿಗೆ ಅಭಿನಂದಿಸಿದ ಅದಮ್ಯ ಚೇತನ ಸಂಸ್ಥೆಯ ಮುಖ್ಯಸ್ಥೆ ಡಾ ತೇಜಸ್ವಿನಿ ಅನಂತಕುಮಾರ್‌ ಮಾತನಾಡಿ, ಕರೋನಾ ಮಹಾಮಾರಿಯು ಮಾನವ ಕುಲದ ಮೇಲೆ ತಂದಿರುವ ಹಲವಾರು ಆತಂಕಗಳನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಹಲವಾರು ಸಂಘ ಸಂಸ್ಥೆಗಳ ಜನರು ನಮಗೆ ಸಹಾಯ ಮಾಡಲು ಮುಂದಾಗಿದ್ದಾರೆ.

ವಿಪ್ರೋ ಫೌಂಡೇಶನ್‌ ರೇಷನ್‌ ಕಿಟ್‌ಗಳ ತಯಾರಿಕೆ

ವಿಪ್ರೋ ಫೌಂಡೇಶನ್‌ ರೇಷನ್‌ ಕಿಟ್‌ಗಳ ತಯಾರಿಕೆ

ರಾಜ್ಯ ಕಾರ್ಮಿಕ ಇಲಾಖೆಯು ಆಹಾರ ತಯಾರು ಹಾಗೂ ವಿತರಣೆಗೆ ಅತಿ ಹೆಚ್ಚು ಧನ ಸಹಾಯ ಮಾಡಿದ್ದು, ವಿಪ್ರೋ ಫೌಂಡೇಶನ್‌ ರೇಷನ್‌ ಕಿಟ್‌ಗಳ ತಯಾರಿಕೆ ಹಾಗೂ ವಿತರಣೆಗೆ ಹೆಚ್ಚಿನ ಧನ ಸಹಾಯ ಮಾಡಿದೆ. ಇವರಲ್ಲದೆ ಹಲವಾರು ಸಂಘ ಸಂಸ್ಥೆಗಳು, ಬ್ಯಾಂಕುಗಳು ಹಾಗೂ ಖಾಸಗಿ ಕಂಪನಿಗಳ ಸಹಯೋಗದಿಂದಾಗಿ ನಾವು 6 ಲಕ್ಷಕ್ಕೂ ಹೆಚ್ಚು ಆಹಾರ ಪೊಟ್ಟಣಗಳನ್ನ ಹಾಗೂ 20 ಸಾವಿರಕ್ಕೂ ಹೆಚ್ಚು ರೇಷನ್‌ ಕಿಟ್‌ಗಳನ್ನು ವಿತರಿಸಲು ಸಾಧ್ಯವಾಯಿತು.

ಅದಮ್ಯ ಚೇತನ ಸಂಸ್ಥೆಗೆ ಹಣದ ಸಹಾಯ

ಅದಮ್ಯ ಚೇತನ ಸಂಸ್ಥೆಗೆ ಹಣದ ಸಹಾಯ

ಹಾರ್ಲಿ ಡೆವಿಡ್‌ಸನ್‌ನಂತಹ ಐಷಾರಾಮಿ ಬೈಕಗಳಲ್ಲಿ ತೆರಳಿ ಕಳೆದ 15 ದಿನಗಳಿಂದ ನಮ್ಮ ವಾಹನಗಳು ತೆರಳಲು ಸಾಧ್ಯವಾಗದ ಪ್ರದೇಶಗಳಿಗೆ ದಿನದ ಯಾವುದೇ ಸಮಯ ಹಾಗೂ ಸ್ಥಳಗಳಿಗೂ ಈ ಬೈಕರ್‌ ಗಳು ತಲುಪಿಸಿದ್ದಾರೆ. ಇದೇ ವೇಳೆ, ನೂರಾರು ಕುಟುಂಬಗಳಿಗೆ ಅನುಕೂಲವಾಗುವ ರೀತಿಯಲ್ಲಿ ಅದಮ್ಯ ಚೇತನ ಸಂಸ್ಥೆಗೆ ಹಣದ ಸಹಾಯವನ್ನು ಮಾಡಿದ್ದಾರೆ ಎಂದು ಹೇಳಿದರು.

ಅತ್ಯಾಕರ್ಷಕ ಪುನರ್ ಬಳಕೆ ಮಾಸ್ಕ್

ಅತ್ಯಾಕರ್ಷಕ ಪುನರ್ ಬಳಕೆ ಮಾಸ್ಕ್

ಇದೇ ವೇಳೆ, ಈ ಸಮಯದಲ್ಲಿ ಸುರುಚಿ ಸಂಸ್ಥೆಯ ಮಹಿಳಾ ಸದಸ್ಯರುಗಳಿಗೆ ಮನೆಯಲ್ಲಿಯೇ ಕೆಲಸ ನೀಡುವ ಉದ್ದೇಶದಿಂದ ಅದಮ್ಯ ಚೇತನ ಸಂಸ್ಥೆ ಬ್ಯಾಗ್‌ ಗಳನ್ನು ಹಾಗೂ ಮಾಸ್ಕ್‌ ಗಳನ್ನು ಹೊಲಿಯುವ ಕಾರ್ಯವನ್ನು ನೀಡಿತ್ತು. ಈ ಸಂಸ್ಥೆಯ ವತಿಯಿಂದ ಇದುವರೆಗೂ 22 ಸಾವಿರ ಬಟ್ಟೆಯ ಬ್ಯಾಗ್‌ಗಳನ್ನು ಹೊಲಿದು ಕೊಡಲಾಗಿದೆ. ಅಲ್ಲದೆ ಅತ್ಯಾಕರ್ಷಕ ಪುನರ್ ಬಳಕೆ ಮಾಡಬಹುದಾದಂತಹ ಮಾಸ್ಕ್‌ಗಳನ್ನು ತಯಾರಿಸಿ ಕೊಟ್ಟಿದ್ದಾರೆ.

ದೇಶದ ಜನರಿಗೆ ಅನ್ನ ಅಕ್ಷರ ಆರೋಗ್ಯ ನೀಡಬೇಕು

ದೇಶದ ಜನರಿಗೆ ಅನ್ನ ಅಕ್ಷರ ಆರೋಗ್ಯ ನೀಡಬೇಕು

ಈ ಮಾಸ್ಕ್ ಗಳನ್ನು ಇನ್ನಷ್ಟು ಟ್ರೆಂಡಿಯಾಗಿ ಹೊಲಿಯುವಂತೆ ಸಲಹೆ ನೀಡಿದ್ದೇವೆ. ಸುಮಾರು 150 ಕ್ಕೂ ಹೆಚ್ಚು ಸ್ವಯಂ ಸೇವಕರು ಅದಮ್ಯ ಚೇತನ ಸಂಸ್ಥೆಯಲ್ಲಿ ದಿನ ನಿತ್ಯ ಕಾರ್ಯನಿರ್ವಹಿಸುವುದರ ಮೂಲಕ, ಸಂಸ್ಥೆ ಉತ್ತಮ ಕಾರ್ಯವನ್ನು ಮುಂದುವರೆಸಿಕೊಂಡು ಹೋಗಲು ಕೈಜೋಡಿಸಿದ್ದಾರೆ ಎಂದು ತಿಳಿಸಿದರು.

ದೇಶದ ಜನರಿಗೆ ಅನ್ನ ಅಕ್ಷರ ಆರೋಗ್ಯ ನೀಡಬೇಕು ಎನ್ನುವ ದಿವಂಗತ ಅನಂತಕುಮಾರ್‌ ಅವರು ಹಾಕಿಕೊಟ್ಟ ಹಾದಿಯಲ್ಲಿ ಸಂಸ್ಥೆ ನಡೆಯುತ್ತಿದ್ದು, ಕರೋನಾ ಮಹಾಮಾರಿಯಿಂದ ತೊಂದರೆಗೆ ಈಡಾಗಿರುವವರ ಸಹಾಯಕ್ಕೆ ಅದಮ್ಯ ಚೇತನ ಸಂಸ್ಥೆ ಇನ್ನು ಹೆಚ್ಚಿನ ಕಾರ್ಯದಲ್ಲಿ ತೊಡಗಿಕೊಳ್ಳಲಿದೆ.

English summary
Adamya Chetana along with Wipro Special initiative riders that came together to support vulnerable groups during the lockdown, has reached dry rations to over 20,000 families.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X