ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ರೈಲು ನಿಲ್ದಾಣಕ್ಕೆ ಬಂತು ಹೊಸ ಸೌಲಭ್ಯ

|
Google Oneindia Kannada News

ಬೆಂಗಳೂರು, ಫೆಬ್ರವರಿ 5: ರೈಲು ಕೋಚ್‌ಗಳ ಹೊರಭಾಗವನ್ನು ಸ್ವಯಂಚಾಲಿತವಾಗಿ ಸ್ವಚ್ಛಗಿಳಿಸುವ ನೂತನ ಸೌಲಭ್ಯ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಬುಧವಾರ ಆರಂಭವಾಗಿದೆ.

ರೈಲ್ವೆ ಕೋಚ್‌ಗಳನ್ನು ಹೊರಭಾಗದಿಂದ ಸ್ವಯಂಚಾಲಿತವಾಗಿ ಸ್ವಚ್ಛಗೊಳಿಸುವ ತಂತ್ರಜ್ಞಾನದಿಂದ ಅನೇಕ ಲಾಭಗಳಾಗಲಿದ್ದು, ಈ ಸೌಲಭ್ಯಕ್ಕೆ ನೈರುತ್ಯ ರೈಲ್ವೆಯ ಜನರಲ್ ಮ್ಯಾನೇಜರ್ ಎ.ಕೆ. ಸಿಂಗ್ ಬುಧವಾರ ಬೆಳಿಗ್ಗೆ ಚಾಲನೆ ನೀಡಿದರು.

ಕ್ಯಾಂಟೀನ್‌ ಆಗಿ ಬದಲಾದ ನಿರುಪಯುಕ್ತ ರೈಲು ಬೋಗಿಕ್ಯಾಂಟೀನ್‌ ಆಗಿ ಬದಲಾದ ನಿರುಪಯುಕ್ತ ರೈಲು ಬೋಗಿ

ಈ ಆಟೋಮ್ಯಾಟಿಕ್ ಕೊಚ್ ವಾಷಿಂಗ್ ಪ್ಲ್ಯಾಂಟ್ (ಎಸಿಡಬ್ಲ್ಯೂಪಿ) ಅತಿ ಕಡಿಮೆ ನೀರನ್ನು ಬಳಸಿಕೊಂಡು ರೈಲು ಬೋಗಿಗಳನ್ನು ಸ್ವಚ್ಚಗೊಳಿಸಲಿದೆ. ಹಾಗೆಯೇ ಈಗ ಅಸ್ತಿತ್ವದಲ್ಲಿರುವ ಸ್ವಚ್ಚಗೊಳಿಸುವ ಪದ್ಧತಿಯಂತೆ ಮಾನವಶಕ್ತಿಯನ್ನು ಬಳಸಿಕೊಳ್ಳುವ ಅವಶ್ಯಕತೆ ತಗ್ಗಲಿದೆ.

ಎಸಿಡಬ್ಲ್ಯೂಪಿ ಕರ್ನಾಟಕದಲ್ಲಿ ಈ ಮಾದರಿಯ ರೈಲ್ವೆ ಕೋಚ್ ಸ್ವಚ್ಚಗೊಳಿಸುವ ಮೊದಲ ಸೌಲಭ್ಯವಾಗಿದೆ. ಇದನ್ನು ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್ ಒಂದರ ಒಂದು ಬದಿಯಲ್ಲಿ ಅಳವಡಿಸಲಾಗಿದೆ.

ಯಶವಂತಪುರ, ಬೈಯಪ್ಪನಹಳ್ಳಿ

ಯಶವಂತಪುರ, ಬೈಯಪ್ಪನಹಳ್ಳಿ

'ಈ ಪ್ಲ್ಯಾಂಟ್ ಭಾರಿ ಪ್ರಮಾಣದಲ್ಲಿ ನೀರಿನ ಬಳಕೆಯನ್ನು ಉಳಿಸಲಿದೆ. ಹಾಗೆಯೇ ಇಲ್ಲಿ ಮರುಬಳಕೆಯ ನೀರನ್ನು ಉಪಯೋಗಿಸಿ ಸ್ವಚ್ಚಗೊಳಿಸಲಾಗುತ್ತದೆ. ಇದೇ ರೀತಿ ಪ್ಲ್ಯಾಂಟ್‌ಗಳನ್ನು ಯಶವಂತಪುರ ಹಾಗೂ ಬೈಯಪ್ಪನಹಳ್ಳಿಯ ನೂತನ ಹೊಸ ನಿಲ್ದಾಣದಲ್ಲಿ ಮುಂದೆ ಅಳವಡಿಸಲು ಯೋಜನೆ ರೂಪಿಸಿದ್ದೇವೆ' ಎಂದು ಎ.ಕೆ. ಸಿಂಗ್ ಸುದ್ದಿಗಾರರಿಗೆ ತಿಳಿಸಿದರು.

ಸೊಂದು ಕೋಚ್‌ಗೆ 42.91 ರೂ ವೆಚ್ಚ

ಸೊಂದು ಕೋಚ್‌ಗೆ 42.91 ರೂ ವೆಚ್ಚ

'ಸಂಪೂರ್ಣ ಸ್ವಯಂಚಾಲಿತವಾಗಿರುವುದರಿಂದ ಸ್ವಚ್ಚತಾ ಕೆಲಸ ಸುಲಭವಾಗಲಿದೆ. ಮ್ಯಾನ್ಯುವಲ್ ಸ್ವಚ್ಚತೆಯಲ್ಲಿ ಕೋಚ್‌ಗಳ ಮೇಲಿನ ಭಾಗವನ್ನು ಸ್ವಚ್ಚಗೊಳಿಸುವುದಿಲ್ಲ. ಇದರಲ್ಲಿ ಸಂಪೂರ್ಣ ಕೋಚ್ ಸ್ವಚ್ಚಗೊಳ್ಳಲಿದೆ. ಅಲ್ಲದೆ, ಈ ಯಂತ್ರ ಬಹಳ ಅಗ್ಗದಲ್ಲಿ ನಮ್ಮ ಕೆಲಸ ಪೂರ್ಣಗೊಳಿಸುತ್ತದೆ. ಮಾನವಶಕ್ತಿಯನ್ನು ಬಳಸಿಕೊಂಡರೆ ಪ್ರತಿ ಕೋಚ್ ಸ್ವಚ್ಚಗಳಿಸಲು 214.78 ರೂ. ತಗುಲುತ್ತದೆ. ಆದರೆ ಈ ತಂತ್ರಜ್ಞಾನದಿಂದ ಕೇವಲ 42.91 ರೂ ವೆಚ್ಚವಾಗುತ್ತದೆ ಎಂದು ಹಿರಿಯ ವಿಭಾಗೀಯ ಮೆಕ್ಯಾನಿಕಲ್ ಎಂಜಿನಿಯರ್ ಜಯಂತ್ ರಾಮಚಂದ್ರ ತಿಳಿಸಿದರು.

ತೇಜಸ್ ಮಾದರಿ ರೈಲಿನ 6 ಕಾರಿಡಾರ್; ಕರ್ನಾಟಕದ ಒಂದು ರೈಲುತೇಜಸ್ ಮಾದರಿ ರೈಲಿನ 6 ಕಾರಿಡಾರ್; ಕರ್ನಾಟಕದ ಒಂದು ರೈಲು

ಎಂಟೇ ನಿಮಿಷಗಳಲ್ಲಿ ಸ್ವಚ್ಛ

ಸಾಮಾನ್ಯವಾಗಿ ಮ್ಯಾನ್ಯುಯಲ್ ಸ್ವಚ್ಚತೆಯಲ್ಲಿ ಒಂದು ಕೋಚ್‌ಗೆ 450-500 ಲೀಟರ್ ನೀರು ಬೇಕಾಗುತ್ತದೆ. ಈ ಆಟೊಮ್ಯಾಟಿಕ್ ಪ್ಲ್ಯಾಂಟ್ 300 ಲೀಟರ್ ಬಳಸುತ್ತದೆ. ಹಾಗೆಯೇ ಸಾಂಪ್ರದಾಯಿಕ ಮಾದರಿಯಲ್ಲಿ ಸುಮಾರು 30 ನಿಮಿಷ ಬೇಕಾಗಿದ್ದರೆ, 24 ಕೋಚ್‌ಗಳ ರೈಲನ್ನು ಕೇವಲ ಎಂಟು ನಿಮಿಷಗಳಲ್ಲಿ ಸ್ವಚ್ಚಗೊಳಿಸಬಹುದು. ಮಾನವಶಕ್ತಿ ಬಳಕೆಯ ವಿಚಾರದಲ್ಲಿಯೂ ಇದರಿಂದ ಸಾಕಷ್ಟು ಲಾಭವಿದೆ ಎಂದು ಹೇಳಿದರು.

ಆರು ಮಂದಿ ಇದ್ದಲ್ಲಿ, ಒಬ್ಬರು ಸಾಕು

ಆರು ಮಂದಿ ಇದ್ದಲ್ಲಿ, ಒಬ್ಬರು ಸಾಕು

ಈ ವಿನೂತನ ತಂತ್ರಜ್ಞಾನವನ್ನು ನಿರ್ವಹಿಸಲು ನಿಯಂತ್ರಣ ಕೊಠಡಿಯಲ್ಲಿ ಒಬ್ಬ ವ್ಯಕ್ತಿ ಇದ್ದರೆ ಸಾಕು. ಈ ಹಿಂದೆ ಮಾನವಶಕ್ತಿ ಬಳಸು ಆರು ಮಂದಿ ಈ ಕೆಲಸಕ್ಕೆ ಬಳಕೆಯಾಗುತ್ತಿದ್ದರು. ವಡೋದರಾದ ಓರಿಯಂಟಲ್ ಮ್ಯಾನುಫ್ಯಾಕ್ಚರರ್ಸ್ ಈ ಪ್ಲ್ಯಾಂಟ್‌ಅನ್ನು 1.67 ಲಕ್ಷ ವೆಚ್ಚದಲ್ಲಿ ರೈಲ್ವೆಗೆ ಒದಗಿಸಿದೆ.

English summary
The Automatic Coach Washing Plant (ACWP) introduced in Bengaluru city railway station on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X