ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಲಯನ್ಸ್ ಯೂನಿವರ್ಸಿಟಿ ಹೈಡ್ರಾಮ- ನಟಿ ಶ್ರೀಲೀಲಾ ತಾಯಿ ಸ್ವರ್ಣಲತಾ ಆವೇಶ

|
Google Oneindia Kannada News

ಆನೇಕಲ್, ಸೆಪ್ಟೆಂಬರ್ 15: ಅಲಯನ್ಸ್ ಯೂನಿವರ್ಸಿಟಿಯ ಸಹೋದರರಿಬ್ಬರ ಗದ್ದುಗೆಗಾಗಿ ಗಲಾಟೆ ಮತ್ತೊಮ್ಮೆ ಬೀದಿಗೆ ಬಂದಿದೆ. ಸದ್ಯ ಸುಧೀರ್ ಅಂಗೂರ್ ಸುಪರ್ದಿಯಲ್ಲಿರುವ ಆನೇಕಲ್ ಅಲಯನ್ಸ್‌ ಯೂನಿವರ್ಸಿಟಿಗೆ ಮಧುಕರ್ ಅಂಗೂರ್‌ ಮತ್ತು ನಟಿ ಶ್ರೀಲೀಲಾ ತಾಯಿ ಸ್ವರ್ಣಲತಾ ಬಂದು ಗಲಾಟೆ ಮಾಡಿರುವ ಆರೋಪ ಕೇಳಿ ಬಂದಿದೆ.

ಮಧುಕರ್ ಅಂಗೂರ್ ಸ್ವತಃ ತಮ್ಮ ತಂಡದೊಂದಿಗೆ ಶಸ್ತ್ರಾಸ್ತ್ರ ಬೌನ್ಸರ್‌ಗಳೊಂದಿಗೆ ಒಳ ನುಗ್ಗಿದ ಬಗ್ಗೆ ಆರೋಪ ಕೇಳಿ ಬಂದಿದೆ. ಕೋರ್ಟ್ ಆದೇಶವಿದೆ ಎಂದೇ ಯೂನಿವರ್ಸಿಟಿಗೆ ಓರ್ವ ಮಹಿಳೆಯೊಂದಿಗೆ ನುಗ್ಗಿರುವ ಮಧುಕರ್ ತಂಡ ಯುವಕರ ತಂಡದೊಂದಿಗೆ ಒಲ ನುಗ್ಗಿದ್ದಾರೆ. ಇದರಿಂದ ಕೆಲ ಕಾಲ ಉದ್ವಿಗ್ನ ವಾತಾವರಣ ಉಂಟಾಗಿ ಬನ್ನೇರುಘಟ್ಟ-ಸರ್ಜಾಪುರ ಇನ್ಸ್‌ಪೆಕ್ಟರ್ ಮಧ್ಯಸ್ಥಿಕೆಯಲ್ಲಿ ಮಧುಕರ್ ಅಂಗೂರ್ ಪಡೆಯನ್ನು ಹೊರಗಟ್ಟಿದ್ದಾರೆ.

ಅಲಯನ್ಸ್ ವಿವಿ ಹಣ ದುರುಪಯೋಗ: ಮಾಜಿ ವಿಸಿ ಮಧುಕರ್ ಇಡಿ ವಿಚಾರಣೆಅಲಯನ್ಸ್ ವಿವಿ ಹಣ ದುರುಪಯೋಗ: ಮಾಜಿ ವಿಸಿ ಮಧುಕರ್ ಇಡಿ ವಿಚಾರಣೆ

ಕೋರ್ಟ್ ಆದೇಶವಿದ್ದರೆ ಸಕ್ರಮ ರೀತಿಯಲ್ಲಿ ಒಳಗೆ ಹೋಗಿ ಇಲ್ಲವಾದಲ್ಲಿ ಹೊರನಡೆಯಿರಿ ಎಂದು ತಾಕೀತು ಮಾಡಿದ ಬೆನ್ನಲ್ಲೇ ಮಧುಕರ್ ಅಂಗೂರ್ ಹೊರ ನಡೆದಿದ್ದಾರೆ. ಅಲ್ಲದೆ ಮಧುಕರ್ ರೊಂದಿಗೆ ಬಂದಿದ್ದ ಮಹಿಳೆ ಮಾತ್ರ ಹೊರ ನಡೆಯದೆ ಪೊಲೀಸರಿಗೆ ತಲೆ ನೋವಾಗಿ ಪರಿಣಮಿಸಿದ್ದು ಕೊನೆಗೂ ಹೊರ ಹಾಕುವಲ್ಲಿ ಆನೇಕಲ್ ಪೊಲೀಸರು ಯಶಸ್ವಿಯಾಗಿದ್ದಾರೆ.

ದಶಕಗಳ ಇತಿಹಾಸವಿರುವ ಅಲಯನ್ಸ್ ಯೂನಿವರ್ಸಿಟಿ ಗದ್ದುಗೆಗಾಗಿ ಅಂಗೂರ್ ಸಹೋದರರ ಗುದ್ದಾಟ. ಹಲವು ಕೊಲೆಗಳೊಂದಿಗೆ ರಕ್ತ ಸಿಕ್ತ ಇತಿಹಾಸವನ್ನೂ ಹೊಂದಿದೆ. ಇದರ ನಡುವೆ ಇದೀಗಷ್ಟೇ ಹೊಸ ದಾಖಲೆಗಾಗಿ ಆಗಮಿಸುತ್ತಿರುವ ವಿದ್ಯಾರ್ಥಿಗಳ ಕಣ್ಣ ಮುಂದಿನ ಹೈಡ್ರಾಮ ಕಂಡು ಅಚ್ಚರಿ ವ್ಯಕ್ತಪಡಿಸಿದ್ದಾರೆ.

 ಮುಂದಿನ ಚಾನ್ಸಲರ್ ತಾನೇ ಎಂದ ಸ್ವರ್ಣಲತಾ

ಮುಂದಿನ ಚಾನ್ಸಲರ್ ತಾನೇ ಎಂದ ಸ್ವರ್ಣಲತಾ

ತೆಲುಗು-ಕನ್ನಡ ಚಲನ ಚಿತ್ರ ನಟಿ ಶ್ರೀಲೀಲಾ ಅವರ ತಾಯಿ ಸ್ವರ್ಣಲತಾ ಮಧುಕರ್ ಅಂಗೂರ್ ಜೊತೆ ಅಲಯನ್ಸ್ ಯೂನಿವರ್ಸಿಟಿಗೆ ನುಗ್ಗಿದ್ದಲ್ಲದೆ ಮುಂದಿನ ಚಾನ್ಸಲರ್ ತಾನೇ ಅಂತ ಸಿಬ್ಬಂದಿಗೆ ಗದರಿಸಿದ್ದಾರೆ. ಮಧುಕರ್ ಅಂಗೂರ್ ಯೂನಿವರ್ಸಿಟಿ ಬಿಟ್ಟು ಹೊರ ಹೊರಟರೂ ಗಂಟೆಗಳ ಕಾಲ ಒಳಗೆ ಇದ್ದು ನಾನೇ ಚಾನ್ಸಲರ್ ಎಂದು ಪಟ್ಟು ಹಿಡಿದು ಕುಳಿತರು. ಆನೇಕಲ್ ಉಪವಿಭಾಗದ ಪೊಲೀಸರು ದೊಡ್ಡ ಬಳ್ಳಾಪುರ ಕಾರ್ಯಕ್ರಮದಲ್ಲಿದ್ದು, ಸಿಬ್ಬಂದಿ ಕೊರತೆಯನ್ನು ಸ್ವರ್ಣಲತಾ ಚಾಕಚಕ್ಯತೆಯಿಂದ ಬಳಸಿಕೊಂಡು ಕೊನೆಗೂ ಹೊರ ಹಾಕುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

 ಶಸ್ತ್ರಾಸ್ತ್ರ ಆಕ್ಟ್ ಒಳಗೊಂಡಂತೆ ಕೇಸ್

ಶಸ್ತ್ರಾಸ್ತ್ರ ಆಕ್ಟ್ ಒಳಗೊಂಡಂತೆ ಕೇಸ್

ಅಲಯನ್ಸ್ ಯೂನಿವರ್ಸಿಟಿ ಒಳಗೆ ಶಸ್ತ್ರಸಜ್ಜಿತ ತಂಡದೊಂದಿಗೆ ಅಕ್ರಮ ಪ್ರವೇಶ ಪಡೆದ ಮಧುಕರ್, ಸ್ವರ್ಣಲತ, ರವಿಕುಮಾರ್ ಮನ್ನವ್, ಪದ್ಮನಾಭ್, ಮೋಹನ್, ಪೊಣಚ್ಚ ಸೇರಿ ನಾಲ್ಕು ಬಂದೂಕು, ಒಂದು ಪಿಸ್ತೂಲ್ ಹೊಂದಿದ ಐವರು ಮತ್ತು 50 ಮಂದಿ ಬೌನ್ಸರ್ ಗಳ ಮೇಲೆ ಯೂನಿವರ್ಸಿಟಿ ರಿಜಿಸ್ಟ್ರಾರ್ ನಿವೇದಿತಾ ಮಿಶ್ರಾ ನೀಡಿದ ದೂರಿನನ್ವಯ ಇಂಡಿಯನ್ ಆರ್ಮ್ಸ್ ಆಕ್ಟ್ 1959(25)ರ ಅಡಿ ಪ್ರಕರಣವನ್ನು ಆನೇಕಲ್ ಇನ್ಸ್ ಪೆಕ್ಟರ್ ದಾಖಲಿಸಿದ್ದಾರೆ.

 ಕಣ್ಣ ಮುಂದೆ ಸಿನಿಮೀಯ ರೀತಿ ಎಂಟ್ರಿ:

ಕಣ್ಣ ಮುಂದೆ ಸಿನಿಮೀಯ ರೀತಿ ಎಂಟ್ರಿ:

ಅಲಯನ್ಸ್ ಯೂನಿವರ್ಸಿಟಿಯ ವಿವಿಧ ವಿಭಾಗಗಳಿಗೆ ದಾಖಲಾತಿಗಾಗಿ ಬಂದ ವಿದ್ಯಾರ್ಥಿಗಳ ಕಣ್ಣ ಮುಂದೆ ಹೈಡ್ರಾಮ ನಡೆದಿದೆ. ಒಂದು ಬಸ್, ಒಂದು ಬೆಂಝ್ ಕಾರು, ಬಸ್ಸಿನೊಳಗಿಂದ ಗೇಟ್ ತೆರೆದು ಶಸ್ತ್ರಗಳೊಂದಿಗೆ ಮಧುಕರ್ ಎಂಟ್ರಿ ವಿದ್ಯಾರ್ಥಿಗಳನ್ನು ಹೆದರುವಂತೆ ಮಾಡಿದೆ. ಪ್ರವೇಶವಾದ ಕೂಡಲೇ ಹಳೆಯ ತನ್ನ ಚೇಂಬರ್‌ಗೆ ನುಗ್ಗಿ ಇದು ನನ್ನ ಯೂನಿವರ್ಸಿಟಿ ಎಂದು ಪ್ರತ್ಯುತ್ತರ ನೀಡಿದ್ದು. ಈಗಿರುವ ಶೈಲಾ ಚಬ್ಬಿ, ಸುಧೀರ್ ಅಂಗೂರ್ ಮತ್ತಿತರು ಹೆದರುವಂತ ವಾತಾವರಣ ನಿರ್ಮಾಣವಾಗಿತ್ತು.

 ಎಸ್ಪಿ ಮಲ್ಲಿಕಾರ್ಜುನ ಬಾಲದಂಡೆ ಭೇಟಿ

ಎಸ್ಪಿ ಮಲ್ಲಿಕಾರ್ಜುನ ಬಾಲದಂಡೆ ಭೇಟಿ

ತನಗೆ ಕೋರ್ಟ್ ಆದೇಶ ನೀಡಿದೆ ಎಂದು ಬರೀ ಬಾಯಿ ಮಾತಿನಲ್ಲಿ ಸಹೋದರ ಸುಧೀರ್ ಅಂಗೂರ್ ತಂಡಕ್ಕೆ ಹಾಗು ಪೊಲೀಸರಿಗೆ ತಿಳಿಸಿದ ಮಧುಕರ್ ಅಂಗೂರ್ ಜೊತೆಯಲ್ಲಿ ಸಣ್ಣ ಆದೇಶವೂ ಇಲ್ಲದಿರುವುದು ಮಧುಕರ್ ಅಂಗೂರ್ ನಡೆಗೆ ದೊಡ್ಡ ಪೆಟ್ಟಾಗಿ ಪರಿಣಮಿಸಿದೆ ಎನ್ನಲಾಗಿದೆ. ಇನ್ನುದಶಕಗಳ ಅಲಯನ್ಸ್ ಯೂನಿವರ್ಸಿಟಿ ವಿವಾದದ ನಡುವೆ ಮಧುಕರ್ ಅಂಗೂರ್ ಅಕ್ರಮ ಪ್ರವೇಶ ಪ್ರಕರಣಕ್ಕೆ ಸಂಬಂದಿಸಿದಂತೆ ತಡ ರಾತ್ರಿ ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಾಲದಂಡೆ ಆನೇಕಲ್ ಗೆ ಆಗಮಿಸಿ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದರು. ಪ್ರಕರಣವನ್ನು ದಾಖಲಿಸಿಕೊಂಡಿರುವ ಆನೇಕಲ್ ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.

English summary
Actress Sreeleela mother Swarnalatha entered Alliance University with weapons facing the threat of arrest. Police have searched to arrest them. It is alleged that on September 10, they broke into the university along with bouncers. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X