• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಟಿ ಸಂಜನಾ ಫೆಬ್ರವರಿಯಲ್ಲಿ ಮತ್ತೆ ಮದುವೆ ಆಗ್ತಾರಂತೆ !

|
Google Oneindia Kannada News

ಬೆಂಗಳೂರು, ಫೆಬ್ರವರಿ 16 : ಸ್ಯಾಂಡಲ್ ವುಡ್ ಡ್ರಗ್ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ನಟಿ ಸಂಜನಾ ಗಲ್ರಾಣಿ ಮತ್ತೆ ಮದುವೆಯಾಗುತ್ತಿದ್ದಾರಂತೆ ! ಇದು ಸ್ವತಃ ನಟಿ ಮಣಿ ಗಲ್ರಾಣಿ ಹೇಳಿಕೊಂಡಿರುವ ಸಂಗತಿ !

ಸ್ಯಾಂಡಲ್ ವುಡ್ ಡ್ರಗ್ ಡೀಲ್ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದ ಸಂಜನಾ ಮದುವೆ ಆಗಿರುವ ಸಂಗತಿ ಬಯಲಾಗಿತ್ತು. ಮತಾಂತರಗೊಂಡು ಅನ್ಯ ಧರ್ಮದ ವರನನ್ನು ಮದುವೆಯಾಗಿದ್ದ ಸಂಜನಾ ಮದುವೆ ದೊಡ್ಡ ವಿವಾದ ಎಬ್ಬಿಸಿತ್ತು. ಸಂಜನಾ ಅವರನ್ನು ಬಲವಂತವಾಗಿ ಮತಾಂತರ ಮಾಡಿ ಮದುವೆ ಮಾಡಿಸಲಾಗಿದೆ ಎಂದು ಪೊಲೀಸ್ ಠಾಣೆಗೆ ದೂರು ಕೂಡ ನೀಡಿದ್ದರು. ಆದರೆ, ಇದ್ಯಾವುದಕ್ಕೂ ಗಲ್ರಾಣಿ ಉತ್ತರಿಸಿರಲಿಲ್ಲ. ಯಾಕೆಂದರೆ ಡ್ರಗ್ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದರು.

ಅನಾರೋಗ್ಯದ ಕಾರಣದಿಂದ ಹೈಕೋರ್ಟ್ ನಲ್ಲಿ ಜಾಮೀನು ಪಡೆದು ಏಕಾಂತವಾಗಿ ಜೀವನ ನಡೆಸುತ್ತಿದ್ದಾರೆ. ಮಾಧ್ಯಮಗಳಿಂದ ದೂರ ಉಳಿದಿರುವ ಸಂಜನಾ ಗಲ್ರಾಣ ಇದ್ದಕ್ಕಿದ್ದಂತೆ " ನಾನು ಮತ್ತೆ ಮದುವೆಯಾಗುತ್ತಿದ್ದೇನೆ. ಎಲ್ಲರನ್ನೂ ಆಹ್ವಾನಿಸುತ್ತಿದ್ದೇನೆ. ಆದರೆ ನನ್ನ ಮದುವೆ Feb 30 ಎಂದು ಹಾಕಿಕೊಂಡಿದ್ದಾರೆ. ಈಕೆಯ ವಾಟ್ಸಪ್ ಸ್ಟೇಟಸ್ ನೋಡಿ ಕೆಲವರ ಗಾಬರಿಯಾಗಿದ್ದಾರೆ. ಆದರೆ ವಾಸ್ತವ ಏನೆಂದರೆ ಸಂಜನಾ ಹೀಗೆ ಕಾಲೆಳೆದು ಕಾಲ ಕಳೆಯುತ್ತಿದ್ದಾರೆ. ಪ್ರಸಕ್ತ ಸಾಲಿನ ಫೆಬ್ರವರಿ 28 ಕ್ಕೆ ಮುಗಿಯಲಿದೆ. ಫೆ. 30 ಬರಲಿಕ್ಕೆ ಸಾಧ್ಯವೇ ಇಲ್ಲ. ಹೀಗಾಗಿ ತಾನು ಮದುವೆಯಾಗುತ್ತಿದ್ದು, ಎಲ್ಲರನ್ನು ಆಹ್ವಾನಿಸುತ್ತಿದ್ದೇನೆ ಎಂದು ಕಾಲೆಳೆದಿದ್ದಾಳೆ.

   ಟಗರು ಕಣ್ಣಿಗೆ ಬೀಳಲಿಲ್ಲವೇ ಪೊಗರು ಅಸಹ್ಯಗಳು | Oneindia Kannada

   ಇನ್ನು ಕರ್ಮ ಎಂಬುದರ ಬಗ್ಗೆ ಗಲ್ರಾಣಿ ವಿವರ ನೀಡಿದ್ದಾರೆ. ಇಸ್ಲಾಂ ಧರ್ಮದಲ್ಲಿ ಕರ್ಮ ಎಂಬುದೇ ಇಲ್ಲ. ಕಿಫ್ರಾ ಅಂತ ಇದೆ. ಅದರ ಅರ್ಥ ನೀನು ಏನು ಸಮಾಜಕ್ಕೆ ಕೊಡುತ್ತೀಯೋ ಸಮಾಜ ನಿನಗೆ ಕೊಡಬೇಕಾಗಿದ್ದನ್ನು ಕೊಡುತ್ತದೆ. ನೀನು ಒಳ್ಳೆಯದು ಮಾಡಿದರೆ, ಒಳಿತು ನಿನ್ನನ್ನು ಹಿಂಬಾಲಿಸುತ್ತದೆ. ನಿನಗೆ ಯಾರಾದರೂ ತೊಂದರೆ ಮಾಡಿ ಕೆಡಕು ಬಯಸಿದರೆ, ಅದಕ್ಕೆ ತಕ್ಕ ಪ್ರತಿಫಲ ಅವರೇ ಸ್ವೀಕರಿಸುತ್ತಾರೆ ಅಲ್ಲಿಯ ವರೆಗು ತಾಳ್ಮೆಯಿಂದ ಇರು ಎಂಬ ಮಾಹಿತಿಯನ್ನು ಗಲ್ರಾಣಿ ಹಂಚಿಕೊಂಡಿದ್ದಾರೆ. ಯಾಕೋ ಸ್ಯಾಂಡಲ್ ವುಡ್ ಡ್ರಗ್ ಕೇಸನಲ್ಲಿ ಸಿಲುಕಿ ಕಂಗಾಲಾಗಿರುವ ಸಂಜನಾ ಇದೀಗ ಫಿಲಾಸಪಿ ಹೇಳುತ್ತಿದ್ದಾಳೆ.

   English summary
   Actress Sanjjana Galrani puts whatsapp status about her new marriage date Feb 30, that made everyone in shock. Know more.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X