• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೋದಿ ರಾಜೀನಾಮೆ ಕುರಿತು ನಟಿ ರಮ್ಯಾ ನಡೆಸಿದ ಸಮೀಕ್ಷೆ ಫಲಿತಾಂಶ !

|

ಬೆಂಗಳೂರು ಮೇ. 02: ರಾಷ್ಟ್ರದಲ್ಲಿ ಕೊರೊನಾ ಸೋಂಕಿತರಿಗೆ ಆಕ್ಸಿಜನ್, ಬೆಡ್ ಸಿಗದೇ ಸಾವಿರಾರು ಮಂದಿ ಸಾವನ್ನಪ್ಪಿದ್ದಾರೆ. ಇದರ ಹೊಣೆ ಹೊತ್ತು ಯಾರು ರಾಜೀನಾಮೆ ನೀಡಬೇಕು ಎಂದು ನಟಿ ರಮ್ಯಾ ತನ್ನ ಇನ್‌ಸ್ಟ್ರಾ ಗ್ರಾಮ್ ಖಾತೆಯ ಮೂಲಕ ಸಮೀಕ್ಷೆ ನಡೆಸಿದ್ದಾರೆ. ನಟಿ ರಮ್ಯಾ ನಡೆಸಿದ ಸಮೀಕ್ಷೆಯಲ್ಲಿ ಶೇ. 64 ರಷ್ಟು ಮಂದಿ ಪ್ರಧಾನಿ ಮೋದಿ ರಾಜೀನಾಮೆ ನೀಡಬೇಕು ಎಂದು ವೋಟ್ ಮಾಡಿದ್ದಾರೆ. ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ರಾಜೀನಾಮೆ ಕೊಡಬೇಕು ಎಂದು ಶೇ. 36 ರಷ್ಟು ಮಂದಿ ಓಟ್ ಮಾಡಿದ್ದಾರಂತೆ. ಇದನ್ನು ನಟಿ ರಮ್ಯಾ ನಡೆಸಿದ ಸಮೀಕ್ಷೆಯ ಫಲಿತಾಂಶವನ್ನು ತನ್ನ ಇನ್‌ಸ್ಟಾ ಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಜೋರ್ಡನ್‌ನಲ್ಲಿ ಆಕ್ಸಿಜನ್ ಸಿಗದೇ ಆರು ಮಂದಿ ಸಾವನ್ನಪ್ಪಿದ್ದಕ್ಕೆ ಅಲ್ಲಿನ ಆರೋಗ್ಯ ಸಚಿವ ಅದರ ಜವಾಬ್ಧಾರಿ ಹೊತ್ತು ರಾಜೀನಾಮೆ ನೀಡಿದ್ದಾರೆ. ನಮ್ಮ ದೇಶದಲ್ಲಿ ಸಾವಿರಾರು ಮಂದಿ ವೆಂಟಿಲೇಟರ್ ಸಿಗದೆ, ಆಕ್ಸಿಜನ್ ಸಿಗದೇ ಸಾವಿಗೀಡಾಗುತ್ತಿದ್ದಾರೆ. ಇದಕ್ಕೂ ನನಗೂ ಸಂಬಂಧವೇ ಇಲ್ಲದಂತೆ ಪ್ರಧಾನಿ ಮೋದಿ ತನ್ನ ದಿನ ನಿತ್ಯದ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಸರ್ಕಾರದ ನಿರ್ಲಕ್ಷ್ಯದಿಂದ ಸಾವಿರಾರು ಮಂದಿ ಆಕ್ಸಿಜನ್ ಸಿಗದೇ ಸಾವನ್ನಪ್ಪಿದ್ದಾರೆ. ಇದಕ್ಕೂ ನನಗೂ ಸಂಬಂಧವೇ ಇಲ್ಲದಂತೆ ನಡೆದುಕೊಳ್ಳುತ್ತಿರುವ ಪ್ರಧಾನಿ ಮೋದಿಯ ರಾಜೀನಾಮೆ ನೀಡುವಂತೆ ಕೇಳ ಬೇಕಿದೆ ಎಂದು ದಿವ್ಯ ಸ್ಪಂದನಾ ಬರೆದುಕೊಂಡಿದ್ದಾರೆ.

ಇದರ ಜತೆಗೆ ಪ್ರಧಾನಿ ಮೋದಿ ಹಾಗೂ ಆರೋಗ್ಯ ಸಚಿವ ಹರ್ಷವರ್ಧನ್ ಕುರಿತು ನಡೆಸಿದ ಸಮೀಕ್ಷೆಯ ಫಲಿತಾಂಶವನ್ನು ಹಂಚಿಕೊಂಡಿದ್ದಾರೆ. ನಟಿ ರಮ್ಯಾ ಸಮೀಕ್ಷೆಯಲ್ಲಿ 89,615 ಮಂದಿ ಮತ ಚಲಾಯಿಸಿದ್ದು, ಶೇ. 64 ರಷ್ಟು ಮಂದಿ ಪ್ರಧಾನಿ ಮೋದಿ ಅವರು ರಾಜೀನಾಮೆ ನೀಡಬೇಕು ಎಂದು ಸಮ್ಮತಿ ಸೂಚಿಸಿದ್ದಾರೆ. ಉಳಿದ 36 ರಷ್ಟು ಮಂದಿ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ರಾಜೀನಾಮೆ ನೀಡಬೇಕು ಎಂದು ಕೋರಿದ್ದಾರೆ. ಈ ಇಬ್ಬರು ನಾಯಕರು ರಾಜೀನಾಮೆ ನೀಡಬೇಕು ಎಂದು ನಟಿ ರಮ್ಯ ಆಗ್ರಹಿಸಿದ್ದಾರೆ.

   ಸದ್ಯದಲ್ಲೇ ರಾಷ್ಟ್ರೀಯ ಪಕ್ಷಗಳ ವಿರುದ್ಧ JDS ಸೆಟೆದು ನಿಲ್ಲುತ್ತೆ ಅಂದ್ರು ಎಚ್ ಡಿ ಕುಮಾರಸ್ವಾಮಿ

   ಸಿನಿಮಾ ರಂಗ, ಮದುವೆ ಜೀವನ, ಭವಿಷ್ಯದ ಆಲೋಚನೆ ಕುರಿತು ತನ್ನ ಅಭಿಮಾನಿಗಳು ಕೇಳಿದ್ದ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ನಟಿ ರಮ್ಯಾ ಸುದ್ದಿ ಕೇಂದ್ರಕ್ಕೆ ಬಂದಿದ್ದಳು. ಇದೀಗ ಮೋದಿ ರಾಜೀನಾಮೆಗೆ ಆಗ್ರಹಿಸಿ ಮತ್ತೆ ಸುದ್ದಿ ಕೇಂದ್ರಕ್ಕೆ ಬಂದಿದ್ದಾರೆ ದಿವ್ಯ ಸ್ಪಂದನಾ.

   English summary
   Actress Ramya demands PM Narendra Modi's resignation know more
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X