ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾ ಕಾಲದಲ್ಲಿ ಕರಕುಶಲಕರ್ಮಿಗಳಿಗೆ ಪ್ರೋತ್ಸಾಹ ಅಗತ್ಯ: ನಟಿ ಗ್ರೀಷ್ಮಾ

|
Google Oneindia Kannada News

ಬೆಂಗಳೂರು ಏಪ್ರಿಲ್‌ 2: ಕರೋನಾ ಸಂಕಷ್ಟ ಕಾಲದಲ್ಲಿ ಕರಕುಶಲಕರ್ಮಿಗಳಿಗೆ ಪ್ರೋತ್ಸಾಹ ನೀಡುವುದು ಅಗತ್ಯವಿದೆ ಎಂದು ನಟಿ ಗ್ರೀಷ್ಮಾ ಅಭಿಪ್ರಾಯಪಟ್ಟರು.

ಇಂದು ನಗರದ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಗ್ರಾಂಡ್‌ ಫ್ಲಿಯಾ ಮಾರ್ಕೆಟ್ ಯುಗಾದಿ ಹಬ್ಬಕ್ಕೆ ಮತ್ತಷ್ಟು ಮೆರಗು ನೀಡುವ ಉದ್ದೇಶದಿಂದ ಆಯೋಜಿಸಿರುವ ಬೆಂಗಳೂರು ಉತ್ಸವ ಕ್ಕೆ ಚಾಲನೆ ನೀಡಿ ಮಾತನಾಡಿದರು.

ಕೊರೊನಾ ಸಂಕಷ್ಟ ಕಾಲದಲ್ಲಿ ದೇಶದಾದ್ಯಂತ ಕರಕುಶಲ ಕರ್ಮಿಗಳು ಬಹಳ ಸಂಕಷ್ಟ ಅನುಭವಿಸಿದ್ದಾರೆ. ಅವರಿಗೆ ಸಿಗಬೇಕಾದಂತಹ ವೇದಿಕೆ ಸಿಗದೆ ಬಹಳ ತೊಂದರೆ ಅಗಿದೆ. ಜೀವನಾವಶ್ಯಕ ವಸ್ತುಗಳನ್ನು ಖರೀದಿಸಲು ತೊಂದರೆ ಅನುಭವಿಸಿದ್ದನ್ನು ನೋಡಿದ್ದೇವೆ. ಇಂತಹ ಕರಕುಶಲ ಕರ್ಮಿಗಳಿಗೆ ವೇದಿಕೆ ಒದಗಿಸುವ ಉದ್ದೇಶದಿಂದ ಬೆಂಗಳೂರಿನ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಆಯೋಜಿಸಿರುವ ಬೆಂಗಳೂರು ಉತ್ಸವದಂತಹ ಕಾರ್ಯಕ್ರಮಗಳು ಬಹಳ ಒಳ್ಳೆಯ ವೇದಿಕೆಯನ್ನು ಒದಗಿಸುತ್ತವೆ. ಇಂತಹ ಕರಕುಶಲ ಕರ್ಮಿಗಳಿಗೆ ಪ್ರೋತ್ಸಾಹ ನೀಡುವುದು ಅಗತ್ಯವಾಗಿದೆ ಎಂದರು.

Actress Greeshma Grand Flea Market Ugadi Shopping Carnival Chitrakal Parishat


ಮೇಳದ ಆಯೋಜಕರಾದ ಅಫ್ತಾಬ್‌ ಮಾತನಾಡಿ, ಯುಗಾದಿ ಹಬ್ಬಕ್ಕೆ ಮತ್ತಷ್ಟು ಮೆರಗು ನೀಡುವ ಉದ್ದೇಶದಿಂದ ಗ್ರಾಂಡ್‌ ಫ್ಲಿಯಾ ಮಾರ್ಕೇಟ್‌ ಏಪ್ರಿಲ್‌ 2 ರಿಂದ 11 ರ ವರೆಗೆ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಆವರಣದಲ್ಲಿ "ಬೆಂಗಳೂರು ಉತ್ಸವ" ಯುಗಾದಿ ಶಾಪಿಂಗ್‌ ಕಾರ್ನಿವಲ್‌ ನ್ನು ಆಯೋಜಿಸಿದ್ದೇವೆ.

Actress Greeshma Grand Flea Market Ugadi Shopping Carnival Chitrakal Parishat

ಈ ಪ್ರದರ್ಶನ ಹಾಗೂ ಮಾರಾಟ ಮೇಳದಲ್ಲಿ ದೇಶದ ಎಲ್ಲಾ ಭಾಗಗಳಿಂದಲೂ ಆಗಮಿಸಲಿರುವ ಕರಕುಶಲ ಕರ್ಮಿಗಳು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲಿದ್ದಾರೆ. ಕಾಶ್ಮೀರಿ ಸೀರೆಗಳು ಮತ್ತು ಶಾಲುಗಳು, ಮಣಿಪುರಿ, ಆಂಧ್ರಪ್ರದೇಶ, ತಮಿಳುನಾಡಿನ ಪ್ರಸಿದ್ದ ರೇಷ್ಮೇ ಸೀರೆಗಳು ಹಾಗೂ ಈಶಾನ್ಯ ರಾಜ್ಯಗಳ ಕಲಾಕಾರರು ತಯಾರಿಸಿರುವ ಉತ್ಪನ್ನಗಳು ಎಲ್ಲರ ಗಮನ ಸೆಳೆಯಲಿವೆ.

Actress Greeshma Grand Flea Market Ugadi Shopping Carnival Chitrakal Parishat

ಕರಕುಶಲ ಕರ್ಮಿಗಳ ಜೊತೆಯಲ್ಲಿಯೇ ರಾಜ್ಯದ ವಿವಿಧ ಭಾಗಗಳ ಜಾನಪದ ಕಲಾಕಾರರಿಗೂ ವೇದಿಕೆ ಒದಗಿಸುವ ಉದ್ದೇಶದಿಂದ ಲೈವ್‌ ಡಾನ್ಸ್‌ ಪರ್ಫಾನ್‌ಮೆನ್ಸ್‌ ಕೂಡಾ ಆಯೋಜಿಸಲಾಗಿದೆ. ಏಪ್ರಿಲ್‌ 3 ರಂದು ಡೊಳ್ಳುಕುಣಿತ, ಏಪ್ರಿಲ್‌ 4 ರಂದು ಹುಲಿವೇಶ ಕುಣಿತ, 10 ನೇ ಏಪ್ರಿಲ್‌ ನಂದು ಕಂಗಿಲು ಕುಣಿತಾ ಹಾಗೂ ಏಪ್ರಿಲ್‌ 11 ರಂದು ಯಕ್ಷಗಾನ ಪ್ರದರ್ಶನ ಏರ್ಪಡಿಸಲಾಗಿದೆ ಎಂದರು.

English summary
Actress Greeshma visited Grand Flea Market organises as a part of Bengaluru Utsav, the Ugadi Shopping Carnival at Chitrakal Parishat from April 2nd.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X