ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅತಿ ವೇಗ ಥ್ರಿಲ್ ಕೊಡುತ್ತೆ, ಜೀವ ತೆಗೆಯುತ್ತೆ : ಯಶ್

ಹೈದರಾಬಾದ್ ಮೂಲದ ಲಾಭರಹಿತ ಸಂಸ್ಥೆ ಶ್ರೀಹರ್ಷ ಫೌಂಡೇಷನ್ ಆಯೋಜಿಸಿದ ಬೈಕ್ ಮೆರವಣಿಗೆ ಹಾಗೂ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ನಟ ಯಶ್ ಹಾಗೂ ಸುನಿಲ್ ಅವರು ಪಾಲ್ಗೊಂಡಿದ್ದರು.

By Mahesh
|
Google Oneindia Kannada News

ಬೆಂಗಳೂರು, ಮಾರ್ಚ್ 5: ಹೈದರಾಬಾದ್ ಮೂಲದ ಲಾಭರಹಿತ ಸಂಸ್ಥೆ ಶ್ರೀಹರ್ಷ ಫೌಂಡೇಷನ್ ವೇಗವಾಗಿ ಚಲಿಸುವ ಸಮರ್ಥ ಯುವ ಚಾಲಕರನ್ನು ದೃಷ್ಟಿಯಲ್ಲಿರಿಸಿಕೊಂಡು ವೇಗದ ಚಾಲನೆ ಕುರಿತು ಅರಿವನ್ನು ಹೆಚ್ಚಿಸಲು ಬೈಕ್ rally ಕಾರ್ಯಕ್ರಮ ಆಯೋಜಿಸಿತ್ತು.

ಖ್ಯಾತ ನಟ ಯಶ್ ಮತ್ತು ಸುನಿಲ್ ಅವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಅರಿವಿನ ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿದರು. ತೆಲುಗು ಚಿತ್ರನಟ ನಾಗ ಚೈತನ್ಯ ಕೂಡಾ ಈ ಕಾರ್ಯಕ್ರಮಕ್ಕೆ ತಮ್ಮ ಬೆಂಬಲ ಸೂಚಿಸಿದ್ದಾರೆ; ಅವರು ಈ ಅಭಿಯಾನದ ಬ್ರಾಂಡ್ ರಾಯಭಾರಿಯೂ ಆಗಿದ್ದಾರೆ.

Yash

ಈ ಚಾಲಕರು ನಿಗದಿಪಡಿಸಿದ ಮಿತಿಗಿಂತ ವೇಗವಾಗಿ ಚಲಿಸುತ್ತಾರೆ. ಆದರೆ ಅವರು ಅದನ್ನು ತಪ್ಪು ಎಂದು ಅಥವಾ ಸಮಾಜವಿರೋಧಿ ಎಂದು ಪರಿಗಣಿಸುವುದಿಲ್ಲ. ಈ ವೇಗದ ಭಾವನೆ ತೊಲಗಿಸುವುದು ಮುಖ್ಯ. ಅತಿವೇಗ ಥ್ರಿಲ್ ನೀಡಿದರೂ, ಜೀವ ತೆಗೆಯುತ್ತದೆ. ಒಮ್ಮೆ ಮನೆಯಲ್ಲಿರುವ ನಿಮ್ಮ ಅಪ್ಪ, ಅಮ್ಮ ,ಕುಟುಂಬದವರ ಬಗ್ಗೆ ಯೋಚಿಸಿ ನಂತರ ವಾಹನ ಚಲಾಯಿಸಿ ಎಂದು ಯಶ್ ಹೇಳಿದರು.

ಹರ್ಷ ಫೌಂಡೇಷನ್ ವೇಗದ ಚಾಲನೆ ಕುರಿತು ಅರಿವನ್ನು ನೀಡುವಲ್ಲಿ ಮಹತ್ತರ ಕಾರ್ಯ ನಿರ್ವಹಿಸುತ್ತಿದೆ ಮತ್ತು ಈಗಾಗಲೇ ಎರಡು ರಸ್ತೆ ಸುರಕ್ಷತೆಯ ಕಾರ್ಯಕ್ರಮಗಳನ್ನು ಹೈದರಾಬಾದ್‍ನಲ್ಲಿ ನಡೆಸಿದೆ. ಈಗ ಫೌಂಡೇಷನ್ ಈ ಕಾರ್ಯಕ್ರಮವನ್ನು ರಾಷ್ಟ್ರಮಟ್ಟದಲ್ಲಿ ಸ್ಟಾಪ್ ಸ್ಪೀಡ್' ಅರಿವಿನ ಅಭಿಯಾನವನ್ನು ಬೆಂಗಳೂರಿನಲ್ಲಿನ ಬೈಕ್ ರ್ಯಾಲಿಯ ಮೂಲಕ ಆಯೋಜಿಸಿತ್ತು.

Yash

ಈ ಸಂದರ್ಭ ಕುರಿತು ಶ್ರೀಹರ್ಷ ಫೌಂಡೇಷನ್‍ನ ಸಂಸ್ಥಾಪಕಿ ಮತ್ತು ನಿರ್ದೇಶಕಿ ಶ್ರೀಮತಿ ಹಿಮಬಿಂದು, ಭಾರತದಲ್ಲಿ ಪ್ರತಿ ನಾಲ್ಕು ನಿಮಿಷಕ್ಕೆ ಒಂದು ಮರಣ ಸಂಭವಿಸುತ್ತದೆ ಮತ್ತು ಪ್ರತಿನಿತ್ಯ ಇಪ್ಪತ್ತು ಮಕ್ಕಳು ರಸ್ತೆ ಅಪಘಾತಗಳಲ್ಲಿ ಮರಣಿಸುತ್ತಾರೆ. ಭಾರತದಲ್ಲಿ ಹಿಂದಿನ ಒಂದು ದಶಕದಲ್ಲಿ ಒಂದು ಮಿಲಿಯನ್‍ಗೂ ಹೆಚ್ಚು ಜನರು ರಸ್ತೆ ಅಪಘಾತಗಳಿದ ಮರಣಿಸಿದ್ದಾರೆ ಮತ್ತು ನ್ಯಾಷನಲ್ ಕ್ರೈಮ್ ರೆಕಾಡ್ರ್ಸ್ ಬ್ಯೂರೊ(ಎನ್‍ಸಿಆರ್ ಬಿ) ಇತ್ತೀಚೆಗೆ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ ವೇಗ ಮತ್ತು ಅಪಾಯಕಾರಿ ಚಾಲನೆ ರಸ್ತೆ ಅಪಘಾತಗಳಿಗೆ ಪ್ರಮುಖ ಕಾರಣ.

2015ರಲ್ಲಿ ನನ್ನ ಮಗ ಹರ್ಷನನ್ನು ಅಪಘಾತದಲ್ಲಿ ಕಳೆದುಕೊಂಡೆ; ನಾನು ಶ್ರೀಹರ್ಷ ಫೌಂಡೇಷನ್ ಪ್ರಾರಂಭಿಸಿ ಅಪಘಾತಗಳಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಬಡ ಕುಟುಂಬಗಳಿಗೆ ನೆರವಾಗುವ ಉದ್ದೇಶ ಹೊಂದಿದ್ದೇನೆ. ಈ ಕ್ರಮದಿಂದ ಹರ್ಷನ ಆತ್ಮ ಸಂತೋಷಿಸಬಹುದು' ಎಂದರು.

English summary
Actor Yash today (March 05) attended Stop Speed Program organised by Sri Harsha Foundation Hyderabad to promote road safety.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X