ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಪೊಲೀಸರ 'ನಮ್ಮ ಹಿರಿಯರು' ಯೋಜನೆಗೆ ಕೈ ಜೋಡಿಸಿದ ರಮೇಶ್

|
Google Oneindia Kannada News

ಬೆಂಗಳೂರು, ಜೂನ್ 8: ಬೆಂಗಳೂರು ಪೊಲೀಸರು ಇತ್ತೀಚಿಗಷ್ಟೆ 'ನಮ್ಮ ಹಿರಿಯರು' ಯೋಜನೆಯನ್ನು ಪ್ರಾರಂಭ ಮಾಡಿದ್ದು, ಸಾರ್ವಜನಿಕರ ಮೆಚ್ಚುಗೆ ಕಾರಣವಾಗಿತ್ತು. ಇದೀಗ ಈ ಯೋಜನೆಗೆ ನಟ ರಮೇಶ್ ಅರವಿಂದ್ ಕೈ ಜೋಡಿಸಿದ್ದಾರೆ.

ಬೆಂಗಳೂರು ದಕ್ಷಿಣ ವಲಯದ ಡಿಸಿಪಿ ಡಾ ರೋಹಿಣಿ ಕಟೋಚ್ ಈ ಬಗ್ಗೆ ಟ್ವೀಟ್ ಮಾಡಿದ್ದು, ರಮೇಶ್ ಅರವಿಂದ್ ಅವರ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಬೆಂಗಳೂರು ದಕ್ಷಿಣ ಭಾಗದಲ್ಲಿರುವ ಹಿರಿಯರಿಗೆ ಇದರ ಉಪಯೋಗವನ್ನು ಬಳಸಿಕೊಳ್ಳುವಂತೆ ರಮೇಶ್ ಅರವಿಂದ್ ಮನವಿ ಮಾಡಿದ್ದಾರೆ.

 Actor Ramesh Aravind Supports Namma Hiriyaru Program

'ನಮ್ಮ ಹಿರಿಯರು': ಹಿರಿ ಜೀವಗಳಿಗೆ ಬೆಂಗಳೂರು ಪೊಲೀಸರ ಶಕ್ತಿ 'ನಮ್ಮ ಹಿರಿಯರು': ಹಿರಿ ಜೀವಗಳಿಗೆ ಬೆಂಗಳೂರು ಪೊಲೀಸರ ಶಕ್ತಿ

''ಪೊಲೀಸರು ಕಾನೂನನ್ನು ಕಾಯುವ ಕರ್ಮಮೀರರಂತೆ ಕಾಣುತ್ತಾರೆ. ರಕ್ಷಕರಂತೆ ಕಾಣುತ್ತಾರೆ. ಈಗ ಹಿರಿಯರ ಆಪ್ತ ಮಿತ್ರರಾಗಿ ಕಾಣುತ್ತಿದ್ದಾರೆ. ಕಾರಣ ಪೊಲೀಸರು ಒಂದು ಹೊಸ ಸಹಾಯ ವಾಣಿಯನ್ನು ಶುರು ಮಾಡಿದ್ದಾರೆ. ಅದರ ಹೆಸರು ನಮ್ಮ ಹಿರಿಯರು'' ಎಂದು ರಮೇಶ್ ಅವರ ಬಗ್ಗೆ ಮಾಹಿತಿ ನೀಡಿದ್ದಾರೆ.

ಹಿರಿಯರಿಗೆ ಯಾವುದೇ ಸಮಸ್ಯೆ ಇದ್ದರೂ, ನೀವು ನಮ್ಮ ಹಿರಿಯರು ಕಾರ್ಯಕ್ರಮದ ಮೂಲಕ ಪೊಲೀಸರನ್ನು ಸಂಪರ್ಕ ಮಾಡಬಹುದು. ಮನೆಯಲ್ಲಿ ಇರುವ ಹಿರಿಯರು ತಮಗೆ ಬೇಕಾದ ಸಹಾಯವನ್ನು, ರಕ್ಷಣೆಯನ್ನು ಪೊಲೀಸರ ಮೂಲಕ ಪಡೆಯಬಹುದಾಗಿದೆ ಎಂದು ರಮೇಶ್ ಹೇಳದ್ದಾರೆ.

8277946994 & 8277946995 ಈ ಎರಡು ವಾಟ್ಸ್‌ ಅಪ್‌ ನಂಬರ್‌ಗಳಿಗೆ ಕರೆ ಅಥವಾ ಸಂದೇಶಗಳ ಮೂಲಕ ಹಿರಿಯರು ಸದಸ್ಯರಾಗಬೇಕಿದೆ. ಆ ಡಾಟಾ ಪೊಲೀಸರ ಬಳಿ ಸದಾ ಇರುತ್ತದೆ.

English summary
Kannada actor Ramesh Aravind supports Namma Hiriyaru program. He requests elder citizens to join the Nammahiriyaru initiative.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X