ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲೋಕಸಭಾ ಚುನಾವಣೆಯಲ್ಲಿ ಪ್ರಕಾಶ್ ರೈ ಕಣಕ್ಕೆ, ಕ್ಷೇತ್ರ ಯಾವುದು?

|
Google Oneindia Kannada News

Recommended Video

Lok Sabha elections 2019: ಲೋಕಸಭಾ ಚುನಾವಣೆಯಲ್ಲಿ ಪ್ರಕಾಶ್ ರೈ ಕಣಕ್ಕೆ, ಕ್ಷೇತ್ರ ಯಾವುದು? | Oneindia Kannada

ಬೆಂಗಳೂರು, ಜನವರಿ 01: ಬಹುಭಾಷಾ ನಟ ಪ್ರಕಾಶ್ ರಾಜ್ 2019 ರ ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಯಲಿದ್ದಾರೆ. ಹಾಗೆಂದು ಅವರೇ ಟ್ವಿಟ್ಟರ್ ನಲ್ಲಿ ಖಚಿತಪಡಿಸಿದ್ದಾರೆ.

ಹೊಸ ವರ್ಷಕ್ಕೆ ಶುಭಾಶಯ ಕೋರಿರುವ ಅವರು ತಾವು ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದು ಖಚಿತ ಎಂದು ಸ್ಪಷ್ಟಪಡಿಸಿದ್ದಾರೆ. ಕ್ಷೇತ್ರ ಯಾವುದು ಎಂಬುದನ್ನು ಸದ್ಯದಲ್ಲೇ ತಿಳಿಸುತ್ತೇನೆ ಎಂದು ಅವರು ಟ್ವೀಟ್ ನಲ್ಲಿ ಹೇಳಿದ್ದಾರೆ.

ಕಲಾವಿದರನ್ನು ಪ್ರಶ್ನಿಸುವ ಹಕ್ಕು ಪತ್ರಕರ್ತರಿಗಿದೆ: ಪ್ರಕಾಶ್ ರೈಕಲಾವಿದರನ್ನು ಪ್ರಶ್ನಿಸುವ ಹಕ್ಕು ಪತ್ರಕರ್ತರಿಗಿದೆ: ಪ್ರಕಾಶ್ ರೈ

ಇತ್ತೀಚೆಗೆ ಹಲವು ವಿವಾದಾತ್ಮಕ ಹೇಳಿಕೆಗಳಿಂದ ಸುದ್ದಿಯಲ್ಲಿದ್ದ ಪ್ರಕಾಶ್ ರಾಜ್, ಜಸ್ಟ್ ಆಸ್ಕಿಂಗ್ ಎಂಬ ಆನ್ ಲೈನ್ ಅಭಿಯಾನ ಆರಂಭಿಸಿ, ಕೇಂದ್ರದ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದರು. ತಮ್ಮ ಆಪ್ತ ಸ್ನೇಹಿತೆ ಗೌರಿ ಹತ್ಯೆಯ ನಂತರ ಕೊಂಚ ಹೆಚ್ಚೇ ಸಾಮಾಜಿಕ ಬದುಕಿನಲ್ಲಿ ಕಾಣಿಸಿಕೊಂಡ ಪ್ರಕಾಶ್ ರಾಜ್ ಚುನಾವಣೆಗೆ ಸ್ಪರ್ಧಿಸುತ್ತಿರುವುದು ರಾಜಕೀಯ ವಲಯದಲ್ಲಿ ತಲ್ಲಣ ಸೃಷ್ಟಿಸುವ ನಿರೀಕ್ಷೆ ಇದೆ.

ಲೋಕಸಭಾ ಚುನಾಚಣೆಯಲ್ಲಿ ಸ್ಪರ್ಧೆ ಏಕೆ?

ಲೋಕಸಭಾ ಚುನಾಚಣೆಯಲ್ಲಿ ಸ್ಪರ್ಧೆ ಏಕೆ?

ಅಷ್ಟಕ್ಕೂ ಚಿತ್ರರಂಗದಲ್ಲಿ ಒಂದಾದನಂತರ ಒಂದು ಮೈಲಿಗಲ್ಲು ನಿರ್ಮಿಸಿ ಪ್ರಸಿದ್ಧಿ ಪಡೆದ ಪ್ರಕಾಶ್ ರಾಜ್ ಇದೀಗ ರಾಜಕೀಯ ಪ್ರವೇಶಿಸುತ್ತಿರುವುದಕ್ಕೆ ಕಾರಣವೇನು? ಅವರೇ ಹೇಳಿರುವಂತೆ... "ಹೊಸ ವರ್ಷದ ಶುಭಾಶಯಗಳು. ಹೊಸ ಆರಂಭ ಎಂದರೆ ಹೆಚ್ಚಿನ ಜವಾಬ್ದಾರಿ. ನಿಮ್ಮೆಲ್ಲರ ಬೆಂಬಲದಿಂದ ನಾನು ಈ ವರ್ಷ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತೇನೆ. ಈ ಬಾರಿ ಜನತಾ ಸರ್ಕಾರ್" ಎಂದು ಪ್ರಕಾಶ್ ರಾಜ್ ಟ್ವೀಟ್ ಮಾಡಿದ್ದಾರೆ.

Array

ಯಾವ ಕ್ಷೇತ್ರದಿಂದ ಸ್ಪರ್ಧೆ?

ಚುನಾವಣೆಗೆ ಸ್ಪರ್ಧಿಸುವುದೇನೋ ಸರಿ. ಆದರೆ ಪ್ರಕಾಶ್ ರಾಜ್ ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬುದು ಕುತೂಹಲದ ವಿಷಯ. ಆದರೆ ಈ ಬಗ್ಗೆ ಅವರು ಗುಟ್ಟು ಬಿಟ್ಟುಕೊಟ್ಟಿಲ್ಲ. ಸದ್ಯದಲ್ಲೇ ಈ ಬಗ್ಗೆ ತಿಳಿಸುವುದಾಗಿ ಅವರು ಹೇಳಿದ್ದಾರೆ.

ಬೆಂಗಳೂರು: ನಟ ಪ್ರಕಾಶ್ ರಾಜ್ ವಿರುದ್ಧ ದೂರುಬೆಂಗಳೂರು: ನಟ ಪ್ರಕಾಶ್ ರಾಜ್ ವಿರುದ್ಧ ದೂರು

ಪಕ್ಷ ಯಾವುದು?

ಪಕ್ಷ ಯಾವುದು?

ಪ್ರಕಾಶ್ ರೈ ಚುನಾವಣೆಗೆ ಸ್ಪರ್ಧಿಸುವುದು ಯಾವ ಪಕ್ಷದಿಂದ? ಅವರು ಯಾವ ಪಕ್ಷದಿಂದಲೂ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ. ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ.

ಮೋದಿ ಮೇಲೆ ಮುನಿಸು

ಮೋದಿ ಮೇಲೆ ಮುನಿಸು

ಬಲಪಂಥೀಯ ವಿಚಾರಧಾರೆ ಮತ್ತು ಮೋದಿಯವರ ವಿರುದ್ಧ ಪ್ರಕಾಶ್ ರಾಜ್ ಸತತವಾಗಿ ದನಿ ಎತ್ತುತ್ತಲೇ ಇದ್ದಾರೆ. ಈ ಕಾರಣಕ್ಕಾಗಿಯೇ ಪ್ರಕಾಶ್ ರಾಜ್ ಸಾಕಷ್ಟು ಅಭಿಮಾನಿಗಳ ವಿರೋಧ ಕಟ್ಟಿಕೊಳ್ಳಬೇಕಾಗಿದೆ ಕೂಡ. ಇದೀಗ 2019 ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದರೆ ಸರಿ, ಅಕಸ್ಮಾತ್ ಸೋತರೆ ಅದು ಅವರ ಚಿತ್ರರಂಗದ ಬದುಕಿನ ಮೇಲೂ ಪರಿಣಾಮ ಬೀರಿದರೆ ಅಚ್ಚರಿಯಿಲ್ಲ.

ಪ್ರಕಾಶ್ ರೈ ಹತ್ಯೆಗೆ ಸಂಚು?!ಸ್ಫೋಟಕ ಸುದ್ದಿಗೆ ರೈ ಪ್ರತಿಕ್ರಿಯೆ ಏನು?ಪ್ರಕಾಶ್ ರೈ ಹತ್ಯೆಗೆ ಸಂಚು?!ಸ್ಫೋಟಕ ಸುದ್ದಿಗೆ ರೈ ಪ್ರತಿಕ್ರಿಯೆ ಏನು?

English summary
Lok Sabha elections 2019: Actor Prakash Raj will be contesting for upcoming Parliament elections as an independent candidate. Constituency yet to be decided. He confirms this on his twitter account.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X