ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಜೆಪಿ ಆಡಳಿತಕ್ಕೆ ಬಂದಿಲ್ಲ ದೇಶದ ಮೇಲೆ ದಂಡೆತ್ತಿ ಬಂದಿದ್ದಾರೆ: ಪ್ರಕಾಶ್ ರೈ

By Manjunatha
|
Google Oneindia Kannada News

ಬೆಂಗಳೂರು, ಏಪ್ರಿಲ್ 20: ಪ್ರೆಸ್ ಕ್ಲಬ್‌ನಲ್ಲಿ ಆಯೋಜಿಸಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ನಟ ಪ್ರಕಾಶ್ ರೈ, ಹಿಂದಿನಂತೆ ಇಂದೂ ಕೂಡ ಬಿಜೆಪಿಯ ಧರ್ಮ ರಾಜಕಾರಣದ ಮೇಲೆ ಹರಿಹಾಯ್ದರು.

ನೈಲ್ ನದಿ ಹಂಚಿಕೊಂಡಿರುವಾಗ ಕಾವೇರಿ ಹಂಚಿಕೊಳ್ಳಲು ಏಕೆ ಸಾಧ್ಯವಿಲ್ಲ?ನೈಲ್ ನದಿ ಹಂಚಿಕೊಂಡಿರುವಾಗ ಕಾವೇರಿ ಹಂಚಿಕೊಳ್ಳಲು ಏಕೆ ಸಾಧ್ಯವಿಲ್ಲ?

ಮಾತು ಹತ್ತಿಕ್ಕುವ ಕಾರ್ಯದಲ್ಲಿ ಬಿಜೆಪಿಯ ಕಾಲಾಳುಗಳು ನಿರತರಾಗಿದ್ದಾರೆ, ಪ್ರಶ್ನೆ ಮಾಡುವವರ ಮೇಲೆ ಮಾನಸಿಕ, ದೈಹಿಕ ದಾಳಿಗಳನ್ನು ವ್ಯವಸ್ಥಿತವಾಗಿ ಸಂಘಟಿಸಲಾಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್

ಕಲಬುರಗಿಯಲ್ಲಿ ತಮ್ಮ ಮೇಲೆ ಆದ ದಾಳಿಯನ್ನು ಅನಾಗರೀಕ ಎಂದು ಕರೆದ ಅವರು, ಬೇಕೆಂದೆ ನಾನೊಬ್ಬನೇ ಇರುವ ವೇಳೆ ನೋಡಿ ದಾಳಿ ಮಾಡಲಾಗಿತ್ತು, ಹೊಡಿ-ಬಡಿ ಮಾತುಗಳೂ ಕೇಳಿ ಬಂದವು, ಅವರ ಬಳಿ ಕಲ್ಲುಗಳು ಸಹ ಇದ್ದವು ಎಂದರು.

ದೇಶ ಆಳಲು ಬಂದಿಲ್ಲ ದಂಡೆತ್ತಿ ಬಂದಿದ್ದಾರೆ

ದೇಶ ಆಳಲು ಬಂದಿಲ್ಲ ದಂಡೆತ್ತಿ ಬಂದಿದ್ದಾರೆ

ಬಿಜೆಪಿಯ ಧ್ಯೇಯಗಳು ಹೆದರಿಸುವಂತಿವೆ ಎಂದ ಪ್ರಕಾಶ್ ರೈ, ಬಿಜೆಪಿಯವರು ಕಾಂಗ್ರೆಸ್‌ ಮುಕ್ತ ಮಾಡಿ ಹಿಟ್ಲರ್ ಆಡಳಿತ ಹೇರಲು ಪ್ರಯತ್ನಿಸುತ್ತಿದ್ದಾರೆ. ಬಿಜೆಪಿಯವರು ಇಡೀ ದೇಶ ಗೆಲ್ಲುವ ಕನಸು ಕಣಾತ್ತಿದ್ದಾರೆ, ಎಲ್ಲಾ ರಾಜ್ಯಗಳಲ್ಲಿ ನಮ್ಮದೇ ಆಡಳಿತ ಇರಬೇಕೆಂದು ಹಠ ತೊಟ್ಟಿದ್ದಾರೆ. ಇವರೇನು ಆಡಳಿತ ಮಾಡಲು ಬಂದಿದ್ದಾರೊ ಅಥವಾ ದೇಶದ ಮೇಲೆ ದಂಡೆತ್ತಿ ಬಂದಿದ್ದಾರೊ ಗೊತ್ತಾಗುತ್ತಿಲ್ಲ ಎಂದು ಪ್ರಕಾಶ್ ರೈ ಹೇಳಿದರು.

ಬಿಜೆಪಿ ಕ್ಯಾನ್ಸರ್, ಜೆಡಿಎಸ್ ಮತ್ತು ಕಾಂಗ್ರೆಸ್ ಕೆಮ್ಮು ನೆಗಡಿಬಿಜೆಪಿ ಕ್ಯಾನ್ಸರ್, ಜೆಡಿಎಸ್ ಮತ್ತು ಕಾಂಗ್ರೆಸ್ ಕೆಮ್ಮು ನೆಗಡಿ

'ರಾಜಕೀಯ ನನ್ನ ಜೀವನ ವಿಧಾನ'

'ರಾಜಕೀಯ ನನ್ನ ಜೀವನ ವಿಧಾನ'

ನಿಮಗೆ ರಾಜಕೀಯದ ಉಸಾಬರಿ ಏಕೆ? ಎಂಬ ಪ್ರಶ್ನೆಗೆ ಉತ್ತರಿಸಿದ ಪ್ರಕಾಶ್ ರೈ, ಪ್ರತಿಯೊಬ್ಬ ವ್ಯಕ್ತಿಯೂ ರಾಜಕಾರಣಿಯೇ , ರಾಜಕೀಯದ ಪ್ರಭಾವದಿಂದ ಯಾರೂ ತಪ್ಪಿಸಿಕೊಳ್ಳಲಾಗದು, ಪ್ರತಿಯೊಬ್ಬ ಮತದಾರನೂ ರಾಜಕೀಯ ಮತಿ ಹೊಂದಿರಲೇ ಬೇಕು. ನಾನು ಕೂಡಾ ರಾಜಕೀಯ ಜೀವಿಯೇ. ರಾಜಕೀಯ ನನ್ನ ಜೀವನ ವಿಧಾನ ಎಂದು ಪ್ರಕಾಶ್ ಉತ್ತರಿಸಿದರು.

ಅತ್ಯಾಚಾರ, ಅನಂತ್‌ಕುಮಾರ್ ಹೆಗ್ಡೆ, ಸಿಂಹ ಎಲ್ಲರ ಮಾತೂ

ಅತ್ಯಾಚಾರ, ಅನಂತ್‌ಕುಮಾರ್ ಹೆಗ್ಡೆ, ಸಿಂಹ ಎಲ್ಲರ ಮಾತೂ

ಇತ್ತೀಚಿನ ದಿನಗಳಲ್ಲಿ ಘಟಿಸಿದ ಅತ್ಯಾಚಾರ ಪ್ರಕರಣಗಳನ್ನು ನೆನೆದ ಪ್ರಕಾಶ್ ರೈ, ಆ ಮಗುವಿನ ಧರ್ಮ, ಅತ್ಯಾಚಾರ ಮಾಡಿದವರ ಎರಡೂ ನಮಗೆ ಅನಗತ್ಯ ಆದರೆ ಅತ್ಯಾಚಾರಿಗಳ ಪರ ನಿಂತವರ ಬಗ್ಗೆ ಪ್ರಶ್ನಿಸದೇ ಸುಮ್ಮನಿರಲಾಗದು. ಬಿಜೆಪಿಯ ಇಬ್ಬರು ಸಚಿವರು ಇದೇ ಪ್ರಕರಣ ಸಂಬಂಧ ರಾಜಿನಾಮೆ ನೀಡಿದ್ದಾರೆ ಇದು ಏನನ್ನು ಸೂಚಿಸುತ್ತದೆ, ಅತ್ಯಾಚಾರಿಗಳ ಬೆಂಬಲಕ್ಕೆ ನಿಂತವರು ಯಾರು ಎಂದು ಅವರು ಪ್ರಶ್ನಿಸಿದರು.

ಅಪಘಾತ ಒಂದು ಅಪಘಾತವಷ್ಟೆ

ಅಪಘಾತ ಒಂದು ಅಪಘಾತವಷ್ಟೆ

ಅನಂತ್‌ಕುಮಾರ್ ಹೆಗಡೆ ಅವರ ಬೆಂಗಾವಲು ಪಡೆಗಾದ ಅಪಘಾತದ ಬಗ್ಗೆ ಮಾತನಾಡಿದ ಅವರು, 'ಅಪಘಾತ ಕೇವಲ ಅಪಘಾತವಷ್ಟೆ ಆದರೆ ಆ ವ್ಯಕ್ತಿ ಅದಕ್ಕೂ ಧರ್ಮ ತುಂಬಲು ನೋಡಿದರು, ಡ್ರೈವರ್‌ ಮುಸ್ಲಿಂ ಆದ್ದರಿಂದ ತನ್ನನ್ನು ಕೊಲೆ ಮಾಡಲು ಪ್ರಯತ್ನ ಮಾಡಿದ್ದಾರೆ ಎಂದು ಬೊಬ್ಬೆ ಹೊಡೆದರು. ಆದರೆ ಆಮೇಲೆ ತಿಳಿಯಿತು ಆ ಲಾರಿ ಬಿಜೆಪಿ ಮುಖಂಡನೊಬ್ಬನ ತಮ್ಮನದೇ ಎಂದು, ವಿಷಯ ತಿಳಿಯುತ್ತಿದ್ದಂತೆ ಅನಂತ್‌ಕುಮಾರ್ ಹೆಗಡೆ ಕರೆದಿದ್ದ ಪತ್ರಿಕಾಗೋಷ್ಠಿಯನ್ನು ರದ್ದು ಮಾಡಿ ಓಡಿ ಹೋದರು ಎಂದರು.

ಅನಾರೋಗ್ಯಕರ ಸಮಾಜದ ನಿರ್ಮಾಣ

ಅನಾರೋಗ್ಯಕರ ಸಮಾಜದ ನಿರ್ಮಾಣ

'ನಾನು ಯುವಕನಾಗಿದ್ದ ಸಮಯದಲ್ಲಿ ಆರೋಗ್ಯಕರ ವಾತಾವರಣವಿತ್ತು, ಯಾವುದೋ ಒಂದು ಘಟನೆ ಘಟಿಸುತ್ತಲೆ, ಕಾರಂತರೊ, ಪೂರ್ಣಚಂದ್ರ ತೇಜಸ್ವಿಯೊ, ಲಂಕೇಶರೊ, ಯಾರೊ ಒಬ್ಬರು ಎಚ್ಚರಿಕೆಯ ಮಾತುಗಳನ್ನು ಹೇಳುತ್ತಿದ್ದರು. ಪ್ರಸನ್ನ ತಮ್ಮ ನಾಟಕಗಳ ಮೂಲಕ ಎಚ್ಚರಿಕೆ ಮೂಡಿಸುತ್ತಿದ್ದರು, ನಾವೆಲ್ಲಾ ಸದಾ ಜಾಗೃತರಾಗಿರುವಂತೆ ಅವರು ನೋಡಿಕೊಳ್ಳುತ್ತಿದ್ದರು. ಆದರೆ ಇಂದು ಆ ರೀತಿಯ ಜಾಗೃತಿ ಮೂಡಿಸುವವರನ್ನೆ ಮುಗಿಸಲಾಗುತ್ತಿದೆ. ಇದರ ಭಾಗವೇ ಗೌರಿ ಹತ್ಯೆ ಎಂದು ಅವರು ಹೇಳಿದರು.

ನಾನು ದೇವಸ್ಥಾನಕ್ಕೆ ಹೋಗ್ತೀನಿ

ನಾನು ದೇವಸ್ಥಾನಕ್ಕೆ ಹೋಗ್ತೀನಿ

ರಾಹುಲ್ ಗಾಂಧಿ ಮಠ, ದೇವಸ್ಥಾನ ಸುತ್ತುತ್ತಿರುವ ಬಗ್ಗೆ ಅಭಿಪ್ರಾಯ ಕೇಳಿದಾಗ, 'ರಾಹುಲ್ ಗಾಂಧಿ, ನರೇಂದ್ರ ಮೋದಿ, ಅಮಿತ್ ಶಾ, ಸಿದ್ದರಾಮಯ್ಯ ಯಾರೇ ಮಠ, ಮಾನ್ಯ ಸುತ್ತಿದರೂ ನಂದೇನೂ ತಕರಾರಿಲ್ಲ. ಆದರೆ ಧರ್ಮ ಕೇಂದ್ರಿತ ರಾಜಕಾರಣಕ್ಕೆ ನನ್ನ ಆಕ್ಷೇಪಣೆ ಇದೆ. ನಾನೂ ಸಹ ದೇವಸ್ಥಾನಕ್ಕೆ ಹೋಗುತ್ತೇನೆ, ಚರ್ಚ್‌ಗೂ ಹೋಗುತ್ತೇನೆ, ಮಸೀದಿಗೂ ಹೋಗುತ್ತೇನೆ ವೈಯಕ್ತಿಕ ನಂಬಿಕೆಯನ್ನು ಪ್ರಶ್ನಿಸುವ ಅಧಿಕಾರ ನನಗಿಲ್ಲ ಎಂದು ಅವರು ಹೇಳಿದರು.

English summary
Actor Prakash Rai lambasted BJP party for its religion based politics. He said BJP trying to destroy democracy, it will destroy constitution. He also lambasted on BJP MP ANanthkumar Hegde.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X