• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅತ್ಯಾಚಾರಿಗಳ ಎನ್ ಕೌಂಟರ್ ಬಗ್ಗೆ ಉಪ್ಪಿ ''ರಿಯಾಲಿಟಿ'' ಚೆಕ್ ಟ್ವೀಟ್

|

ಹೈದರಾಬಾದ್, ಡಿಸೆಂಬರ್ 06: 27 ವರ್ಷ ವಯಸ್ಸಿನ ಪಶುವೈದ್ಯೆ ಅತ್ಯಾಚಾರ, ಹತ್ಯೆ ಪ್ರಕರಣದ ನಾಲ್ವರು ಆರೋಪಿಗಳನ್ನು ಸೈಬರಾಬಾದ್ ಪೊಲೀಸ್ ಆಯುಕ್ತ ವಿಶ್ವನಾಥ್ ಸಜ್ಜನರ್ ಅವರ ತಂಡ ಎನ್ ಕೌಂಟರ್ ಮಾಡಿ ಹತ್ಯೆಗೈದಿರುವ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಭಾರಿ ಚರ್ಚೆಯಾಗುತ್ತಿದೆ.

ಸಿನಿಮಾ ಜಗತ್ತಿನ ಸೆಲೆಬ್ರಿಟಿಗಳು ಪ್ರತಿಕ್ರಿಯಿಸಿದ್ದು ಬಹುತೇಕ ಎಲ್ಲರೂ ಪೊಲೀಸರ ಕ್ರಮವನ್ನು ಸ್ವಾಗತಿಸಿದ್ದಾರೆ. ಆದರೆ, ರಿಯಲ್ ಸ್ಟಾರ್ ಉಪೇಂದ್ರ ಅವರು ನೀಡಿರುವ ''ರಿಯಾಲಿಟಿ'' ಚೆಕ್ ಟ್ವೀಟ್ ಅನೇಕರ ಹುಬ್ಬೇರಿಸಿದೆ.

ಅತ್ಯಾಚಾರಿಗಳ ಎನ್ಕೌಂಟರ್ ಸಮಗ್ರ ತನಿಖೆಗೆ ಚಿದಂಬರಂ ಆಗ್ರಹ

ಹೈದರಾಬಾದಿನ ಚೆರ್ಲಪಲ್ಲಿ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದರು, ಘಟನಾ ಸ್ಥಳದ ಮಹಜರು ನಡೆಸುವಾಗ ಎನ್ ಕೌಂಟರ್ ನಲ್ಲಿ ಹತ್ಯೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಸತ್ಯಾಸತ್ಯತೆ ಜನರ ಮುಂದಿಡಬೇಕಿದೆ ಎಂದು ಅನೇಕ ಮಂದಿ ಎನ್ ಕೌಂಟರ್ ಬಗ್ಗೆ ಪ್ರಶ್ನೆ ಎತ್ತಿದ್ದಾರೆ.

ಎನ್ಕೌಂಟರ್ ನೈಜ ಕಾರಣ ಬಿಚ್ಚಿಟ್ಟ ಪೊಲೀಸ್ ಆಯುಕ್ತ ವಿಶ್ವನಾಥ್

ಎನ್ ಕೌಂಟರ್ ಮಾಡುವ ಮೂಲಕ ಅಧಿಕಾರ ದುರುಪಯೋಗ ಮಾಡಿಲ್ಲ, ಕಾನೂನು ಮೀರಿಲ್ಲ ಎಂದು ಪೊಲೀಸ್ ಅಯುಕ್ತ ವಿಶ್ವನಾಥ್ ಸಜ್ಜನರ್ ಹೇಳಿದ್ದಾರೆ.

ಒಟ್ಟಾರೆ, ಎನ್ ಕೌಂಟರ್ ಬಗ್ಗೆ ದೇಶದೆಲ್ಲೆಡೆ ಚರ್ಚೆಯಾಗುತ್ತಿದೆ. ಈ ಬಗ್ಗೆ ಸತ್ಯ ಎಲ್ಲರಿಗೂ ತಿಳಿಯಬೇಕಿದೆ. ಇಡೀ ಘಟನೆ ಸತ್ಯಾಸತ್ಯತೆ, ಪ್ರಮುಖ ವ್ಯಕ್ತಿಗಳ ಕೈವಾಡ, ಎನ್ ಕೌಂಟರ್ ನಡೆದ ಬಗ್ಗೆ, ವಿಚಾರಣೆ ಬಗ್ಗೆ, ಪ್ರಭಾವಶಾಲೀ ಭ್ರಷ್ಟ ರೇಪಿಸ್ಟ್ ಗಳಿಗೆ ಹೇಗೆ ಈ ಪ್ರಕರಣ ಲಾಭವಾಗಬಹುದು ಎಂದು ಆತಂಕ ವ್ಯಕ್ತಪಡಿಸಿ, ಉಪೇಂದ್ರ ಟ್ವೀಟ್ ಮಾಡಿದ್ದಾರೆ.

ರಾಜಕಾರಣಿಗಳ ಕೈಗೂಂಬೆಯಂತೆ ವರ್ತಿಸುತ್ತಾರೆ

ಇಲ್ಲ ಎಲ್ಲಾ ಅಧಿಕಾರಿಗಳು ಒಂದೆ ರೀತಿ ಇರುವುದಿಲ್ಲ ಕೆಲ ಅಧಿಕಾರಿಗಳು ರಾಜಕಾರಣಿಗಳು ಕೈಗೂಂಬೆಯಂತೆ ವರ್ತಿಸುತ್ತಾರೆ ಅವರಿಂದ ಇದನ್ನು ನಿರೀಕ್ಷಿಸಲು ಸಾಧ್ಯವಿಲ್ಲ... ಉದಾಹರಣೆಗೆ IMA ಪ್ರಕರಣ ನೋಡ್ತಾ ಇರಿ ಏನ್ ಆಗುತ್ತೆ ಅಂತ ಎಂದು ಮಂಜು ಹನೂರ್ ಟ್ವೀಟ್.

ಪ್ರಭಾವಶಾಲಿ ಕಾಣದ ಕೈಗಳಲ್ಲಿ ಕಾನೂನು

ಈ ಟ್ವೀಟ್ ಗೆ ರೀಪ್ಲೇ ಮಾಡುವವರು 1st ಟ್ವೀಟ್ ಸರಿಯಾಗಿ ಅರ್ಥ ಮಾಡ್ಕೋಳಿ.. ಉಪೇಂದ್ರರವರ ನಿಲುವು ಆ ಹೆಣ್ಣಿಗೆ ನ್ಯಾಯ ಸಿಗಬೇಕು ಎಂದಿದೆ. ಪ್ರಭಾವಶಾಲಿ ಕಾಣದ ಕೈಗಳು ಕಾನೂನನ್ನು ದುರುಪಯೋಗ ಪಡಿಸಿಕೊಳ್ಳಬಾರದು & ನಿರಪರಾಧಿಗಳಿಗೆ ಶಿಕ್ಷೆಯಾಗಬಾರದು. ಅಪರಾಧಿಗಳೆಂದು ಸಾಭೀತಾದಲ್ಲಿ ಈ ಎನ್ಕೌಂಟರ್ ಸಂಭ್ರಮಿಸೋಣ.

ನಿಮ್ಮ ದೌರ್ಬಲ್ಯವಾಗಿ ಬಳಸಿಕೊಳ್ಳುತ್ತಾರೆ

''ನೀವು ಟ್ವೀಟ್ ಮಾಡುವುದನ್ನೆ ಕೆಲವರು ನಿಮ್ಮ ದೌರ್ಬಲ್ಯವಾಗಿ ಬಳಸಿಕೊಳ್ಳುತ್ತಾರೆ 20% ಇದರಲ್ಲಾ ಅವರೆ ಆದ್ದರಿಂದ ಒಂದು ವೀಡಿಯೋ ಮುಖಾಂತರ ವಿವರವಾಗಿ ಹೇಳಿ... ಜನರಿಗೆ ವಿಚಾರ ಮುಟ್ಟಿಸಲು ಸತ್ತಿದ್ದ ಮಾಧ್ಯಮಗಳು ಈಗ ಎಚ್ಚರ ಆಗುತ್ತವೆ ನೋಡ್ತಾ ಇರಿ'' ಎಂದು ಉಪೇಂದ್ರನಿಗೆ ತಿಳಿ ಹೇಳಿದ್ದಾರೆ.

ನಿಮ್ಮನ್ನು ಇದನ್ನು ನಿರೀಕ್ಷಿಸಿರಲಿಲ್ಲ

ನಿಮ್ಮನ್ನು ಇದನ್ನು ನಿರೀಕ್ಷಿಸಿರಲಿಲ್ಲ, ರೇಪಿಸ್ಟ್ ಗಳು ಕ್ರೈಂ ಮಾಡಿದ್ದನ್ನು ಒಪ್ಪಿಕೊಂಡಿದ್ದರು. ಪೊಲೀಸ್ ದೋಷರೋಪಣ ಪಟ್ಟಿ ಹಾಕಿದ್ದರು. ಎನ್ ಕೌಂಟರ್ ಪ್ರಕ್ರಿಯೆಯ ಭಾಗವಾಗಿದೆ, ಸಂತ್ರಸ್ತೆಗೆ ಸರಿಯಾದ ನ್ಯಾಯ ಸಿಕ್ಕಿದೆ. ನೀವ್ಯಾಕೆ ಈ ರೀತಿ ಟ್ವೀಟ್ ಮಾಡಿದ್ದೀರಿ ಎಂದು ಟ್ವೀಟ್ ಮಾಡಿದ್ದಾರೆ.

ಮೊದನೆಯದಾಗಿ ಪ್ರಭಾವಿಗಳು ಈ ಕೇಸಿನಲ್ಲಿಲ್ಲ

ಮೊದನೆಯದಾಗಿ ಪ್ರಭಾವಿಗಳು ವೆಹಿಕಲ್ ಪಂಕ್ಚರ್ ಮಾಡಿ ರಸ್ತೆಯಲ್ಲಿ ರೇಪ್ ಮಾಡುವುದಿಲ್ಲ ಮತ್ತು ಬಹುತೇಕ ಪರಿಚಯ ಇರುವವರನ್ನು ಬಳಸಿಕೊಳ್ಳುತ್ತಾರೆ. ಇಲ್ಲದ ಅನುಮಾನ ಹುಟ್ಟುಹಾಕಬೇಡಿ ಎಂದು ಚಂದ್ರಿಕಾ ಅವರು ಎಚ್ಚರಿಸಿದ್ದಾರೆ.

English summary
Actor Politician Upendra twitter reaction to Hyderabad rape case accused Encounter raised many eyebrows. Upendra has asked government equal justice to all the rape victims.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X