ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೃಂದಾವನ ಧ್ವಂಸ: ಕೃತ್ಯ ಮಾಡಿದವರ ವಂಶ ಸರ್ವನಾಶವಾಗಲಿ ಎಂದ ಜಗ್ಗೇಶ್

|
Google Oneindia Kannada News

ಬೆಂಗಳೂರು, ಜುಲೈ 18: ನಿಧಿಯ ಆಸೆಗಾಗಿ ಆನೆಗುಂದಿಯಲ್ಲಿರುವ ನವ ಬೃಂದಾವನವನ್ನು ಧ್ವಂಸಗೊಳಿಸಿದ್ದಕ್ಕೆ ಕನ್ನಡ ಚಿತ್ರ ನಟ ಜಗ್ಗೇಶ್ ಬೇಸರ ವ್ಯಕ್ತಪಡಿಸಿದ್ದಾರೆ.

ರಾಘವೇಂದ್ರ ರಾಯರ ಪರಮ ಭಕ್ತರಾಗಿರುವ ಜಗ್ಗೇಶ್ ಅವರು ಹಲವಾರು ಬಾರಿ ಇಲ್ಲಿಗೆ ಭೇಟಿ ನೀಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು ಅಯ್ಯೋ ದೇವರೆ ಎಂಥ ಹೀನ ಕೃತ್ಯ ಮಾಡಿದ್ದಾರೆ, ಸರ್ವನಾಶವಾಗುತ್ತೆ ಈಕೃತ್ಯ ಮಾಡಿದವರ ವಂಶ, ಸನಾತನ ನಮ್ಮ ಶ್ರೇಷ್ಟತೆಯ ಗುರುಪರಂಪರೆಗೆ ಕೈ ಹಾಕಿದ್ದಾರೆ ಕ್ಷಮೆಯಿರದಿರಲಿ ಪಾಪಿಗಳಿಗೆ! ಸಂಬಂಧಪಟ್ಟ ಅಧಿಕಾರಿವರ್ಗಕ್ಕೆ ಸೂಕ್ತಕ್ರಮಕ್ಕೆ ಒತ್ತಾಯ!ಗುರುಭಕ್ತರೆ ಪುನರ್ ನಿರ್ಮಾಣಕ್ಕೆ ಹಾಗು ಕಾನೂನು ಕ್ರಮಕ್ಕೆ ಒತ್ತಾಯಿಸಿ ಎಂದು ಹೇಳಿದ್ದಾರೆ.

ನಿಧಿಗಾಗಿ ಆನೆಗುಂದಿಯಲ್ಲಿ ವ್ಯಾಸರಾಜರ ಬೃಂದಾವನ ಧ್ವಂಸಗೊಳಿಸಿದ ದುಷ್ಕರ್ಮಿಗಳುನಿಧಿಗಾಗಿ ಆನೆಗುಂದಿಯಲ್ಲಿ ವ್ಯಾಸರಾಜರ ಬೃಂದಾವನ ಧ್ವಂಸಗೊಳಿಸಿದ ದುಷ್ಕರ್ಮಿಗಳು

ಗಂಗಾವತಿ ತಾಲೂಕಿನ ಆನೆಗೊಂದಿ ಗ್ರಾಮದ ತುಂಗಭದ್ರಾ ನದಿಯ ದಡದಲ್ಲಿರುವ ನವಬೃಂದಾವನದಲ್ಲಿ ವ್ಯಾಸರಾಜರ ಬೃಂದಾವನವೂ ಸೇರಿದಂತೆ ಒಟ್ಟು 9 ಬೃಂದಾವನಗಳಿವೆ.

Actor Jaggesh Reaction over Brindavana Demolition

ನಿಧಿಗಾಗಿ ಈ ಕೃತ್ಯವೆಸಗಿರುವ ಸಾಧ್ಯತೆಗಳಿವೆ, ಗಂಗಾವತಿ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಶ್ರೀ ಪೇಜಾವರ ಸ್ವಾಮೀಜಿ ನವವೃಂದವನದಲಿ ಆಗಮಿಸಲಿದ್ದಾರೆ, ಮತ್ತು ಎಲ್ಲಾ ಮಧ್ವ ಮಠದ ಯತಿಗಳು ಸೇರಲಿದ್ದಾರೆ, ಮೊದಲು ಶ್ರೀ ವ್ಯಾಸರಾಜ ಈ ವೃಂದಾವನ ಪುನಃ ಪ್ರತಿಷ್ಠಾಪನೆ ನಡೆಯಲಿದೆ.

English summary
Kannada Actor Jaggesh shows anger over miscreants who demolished the Nava Brindavana in Anegundi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X