ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಟ ಚೇತನ್ ಬಂಧನ: ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ

|
Google Oneindia Kannada News

ಬೆಂಗಳೂರು, ಫೆಬ್ರವರಿ 22: ಹಿಜಾಬ್‌ ವಿಚಾರದಲ್ಲಿ ವಿವಾದಾತ್ಮಕ ಪೋಸ್ಟ್ ಹಾಕಿದ ಅರೋಪದ ಹಿನ್ನೆಲೆಯಲ್ಲಿ ನಟ ಚೇತನ್ ಕುಮಾರ್ ಅವರನ್ನು ಶೇಷಾದ್ರಿಪುರಂ ಪೊಲೀಸರು ವಶಕ್ಕೆ ಪಡೆದ ಬೆನ್ನಲ್ಲೇ ಚೇತನ್‌ ಪತ್ನಿ ಮೇಘಾ ಫೇಸ್‌ ಬುಕ್ ಲೈವ್‌ ಮೂಲಕ ತನ್ನ ಪತಿಯ ಬಗ್ಗೆ ಯಾವ ಮಾಹಿತಿಯೂ ನಮಗೆ ನೀಡಿಲ್ಲ. ಪತಿಯನ್ನು ಬಂಧನ ಮಾಡಿದಂತಾಗಿದೆ ಎಂದಿದ್ದರು. ಈ ಬಗ್ಗೆ ಡಿಸಿಪಿ ಕೇಂದ್ರ ವಿಭಾಗ ಎಂ.ಎನ್.ಅನುಚೇತ್ ಸ್ಪಷ್ಟನೆಯನ್ನು ನೀಡಿದ್ದಾರೆ.

ಚೇತನ್‌ ಪತ್ನಿ ಹಾಗೂ ವಲೀಕ ಎಸ್‌ ಬಾಲನ್‌ ಅವರಿಗೆ ಈ ಬಗ್ಗೆ ಡಿಸಿಪಿ ಕೇಂದ್ರ ವಿಭಾಗ ಎಂ.ಎನ್.ಅನುಚೇತ್ ಅವರು ಮಾಹಿತಿ ನೀಡಿದ್ದಾರೆ. ಆಕ್ಷೇಪಾರ್ಹ ಪೋಸ್ಟ್ ಸಂಬಂಧ ಚೇತನ್ ವಿರುದ್ಧ ಪೊಲೀಸರು ಸುಮೋಟೋ ಕೇಸ್ ದಾಖಲಿಸಿಕೊಂಡಿದ್ದು, ಐಪಿಸಿ ಸೆಕ್ಷನ್ 505(2) ಮತ್ತು 504 ಅಡಿ ಕೇಸ್ ದಾಖಲು ಮಾಡಲಾಗಿದೆ.

ಶೇಷಾದ್ರಿಪುರ ಪೊಲೀಸರ ವಶಕ್ಕೆ ನಟ ಚೇತನ್ ಕುಮಾರ್, ಕಾರಣ ಏನು?ಶೇಷಾದ್ರಿಪುರ ಪೊಲೀಸರ ವಶಕ್ಕೆ ನಟ ಚೇತನ್ ಕುಮಾರ್, ಕಾರಣ ಏನು?

ಚೇತನ್‌ ಅವರನ್ನು ಇಂದು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಬಳಿಕ ಅವರನ್ನು ಅರೆಸ್ಟ್ ಮಾಡಲಾಗಿದೆ. ಪೊಲೀಸರು ಚೇತನ್ ಅವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇನ್ನು ಇದಕ್ಕೂ ಮುನ್ನ ಮಾತನಾಡಿದ್ದ ಚೇತನ್‌ ಪತ್ನಿ ಮೇಘಾ, ಇದು ಅಪಹರಣ ಎಂದು ಹೇಳಿದ್ದರು.

ಎರಡು ವರ್ಷಗಳ ಹಿಂದೆ ನಟ ಚೇತನ್‌ ಅತ್ಯಾಚಾರ ಪ್ರಕರಣವೊಂದರ ಬಗ್ಗೆ ನ್ಯಾಯಮೂರ್ತಿಗಳನ್ನು ಪ್ರಶ್ನಿಸಿ ಟ್ವೀಟ್ ಮಾಡಿದ್ದರು. ಅದನ್ನು ಉಲ್ಲೇಖ ಮಾಡಿ ಫೆಬ್ರವರಿ 16 ರಂದು ನ್ಯಾಯಮೂರ್ತಿಗಳ ಹಿಜಾಬ್ ವಿಚಾರಣೆ ಪೀಠದಲ್ಲಿ ಇದ್ದಾಗ ಟೀಕೆ ಮಾಡಿದ್ದರು. ಈ ಹಿನ್ನೆಲೆಯಿಂದಾಗಿ ಚೇತನ್‌ ಬಂಧನ ಮಾಡಲಾಗಿದೆ. ಇನ್ನು ವಕೀಲ ಎಸ್‌ ಬಾಲನ್‌, "ಒಂದು ಟ್ವೀಟ್‌ ಆಧಾರದಲ್ಲಿ ಬಂಧನ ಮಾಡಿದ್ದಾರೆಯೇ? ಯಾರ ದೂರಿನ ಆಧಾರದಲ್ಲಿ ಬಂಧನ ಮಾಡಲಾಗಿದೆ," ಎಂಬ ಬಗ್ಗೆಯೂ ಹೇಳಿಲ್ಲ ಎಂದಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಚೇತನ್‌ ಪರ-ವಿರೋಧ ಚರ್ಚೆ

ನಟ ಚೇತನ್‌ ಬಂಧನದ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಈ ಬಂಧನದ ವಿರುದ್ಧವಾಗಿ ಹಾಗೂ ಪರವಾಗಿ ಚರ್ಚೆಗಳು ನಡೆಯುತ್ತಿದೆ. "ನಾವು ಯಾವುದೇ ವಿರೋಧವನ್ನು ಮಾಡಿದರೂ ನಮ್ಮನ್ನು ಭಯೋತ್ಪಾದಕರಂತೆ ಬಿಂಬಿಸುವ ಸಮಾಜ ಈಗ ಇದೆ. ನಮ್ಮ ಭಾರತದಲ್ಲಿ ರಾಜಕಾರಣಿಗಳು ಇನ್ನೂ ಬುದ್ಧಿಯಲ್ಲಿ ಬೆಳೆಯಬೇಕಾಗಿದೆ," ಎಂದಿದ್ದಾರೆ.

Actor Chetan Ahimsa Arrested, Clarifies DCP: Here’s Reaction in Social Media

"ಇವತ್ತು ಚೇತನ್‌ ಹೇಳದೆ ಕೇಳದೆ ಅರೆಸ್ಟ್ ಆಗಿರೋದು ಏನ್ ತೋರಿಸುತ್ತೆ ಅಂದ್ರೇ...!!, ನಿಮ್ಮನ್ನು ವರ್ಗಗಳನ್ನ ತುಳಿಯೋದಕ್ಕೆ ರಣಹದ್ದುಗಳು ಹೇಗೆಲ್ಲಾ ಹೊಂಚಾಕ್ತಿದಾವೆ ಅನ್ನೋದನ್ನು ತೋರಿಸುತ್ತಿದೆ. ಸಣ್ಣ ಕಾರಣ ಸಿಕ್ರೂ ಮೈ ಕೊಡುವುತಾವೆ!!," ಎಂದು ಕೂಡಾ ಹೇಳಿದ್ದಾರೆ. ಇನ್ನು ಚೇತನ್‌ ಅಹಿಂಸಾರನ್ನು ಬಿಡುಗಡೆ ಮಾಡಿ ಎಂದು ಕೂಡಾ ಸಾಮಾಜಿಕ ಜಾಲತಾಣದಲ್ಲಿ ಆಗ್ರಹ ಕೇಳಿ ಬಂದಿದೆ. ಟ್ವೀಟ್‌ನಲ್ಲಿ #ChetanAhimsa ಟ್ಯಾ‌ಗ್‌ ಮೂಲಕ ಟ್ವೀಟ್‌ಗಳು ಹಾಕಲಾಗುತ್ತಿದೆ. ಇನ್ನೂ ಕೆಲವರು ಮುತ್ತಾಲಿಕ್‌ರನ್ನು ಮೊದಲು ಬಂಧನ ಮಾಡಿ, ಚೇತನ್‌ಗೆ ಯಾಕೆ ತೊಂದರೆ ಕೊಡುತ್ತಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾರೆ. "ಚೇತನ್‌ ಅವರನ್ನು ಅವರನ್ನು ಬಂಧಿಸಿರುವುದು ದಲಿತರನ್ನು ಭಯದಿಂದ ಉಳಿಸಲು ಮಾಡಿದ ಕುತಂತ್ರ," ಎಂದು ನಿರಂಜನ್‌ ಕುಮಾರ್‌ ಎಂ ಎಂಬವರು ಹೇಳಿದ್ದಾರೆ. (ಒನ್‌ಇಂಡಿಯಾ ಸುದ್ದಿ)

Recommended Video

ಹರ್ಷ ಕೊಲೆ‌ ನಂತರ ಹಿಟ್ ಲಿಸ್ಟ್ ನಲ್ಲಿರೋ ಹಿಂದೂ ಮುಖಂಡರು ಯಾರ್ಯಾರು? | Oneindia Kannada

English summary
Actor Chetan Ahimsa Detained by Police: Chetan Wife Megha Accused Abduction. Here’s Reaction in Social Media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X