ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗ್ರಾಹಕರಿಗೆ ಬೇಕಾದ ಪ್ರದೇಶದಲ್ಲಿ ಸೈಟು ಅಭಿವೃದ್ಧಿ ಹೊಸ ಯೋಜನೆ

|
Google Oneindia Kannada News

ಬೆಂಗಳೂರು ನವೆಂಬರ್‌ 18: ರಾಜ್ಯದ ಯಾವುದೇ ಭಾಗದಲ್ಲಾದರೂ ಕೂಡಾ ಗ್ರಾಹಕರಿಗೆ ಬೇಕಾಗಿರುವಂತಹ ಪ್ರದೇಶದಲ್ಲಿ ಸೈಟ್‌ಗಳನ್ನು ಅಭಿವೃದ್ದಿ ಪಡಿಸಿಕೊಡುವ 1 ಟು 100 ಡ್ರೀಂ ಪ್ರಾಜೆಕ್ಟ್‌ ಪ್ರೈವೇಟ್‌ ಲಿಮಿಟೆಡ್‌ ನ ನೂತನ ಯೋಜನೆಗೆ ಚಾಲನೆ ನೀಡಲಾಗಿದೆ.

ನಗರದ ಮಲ್ಲೇಶ್ವರಂ ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಈ ಯೋಜನೆಯಡಿಯಲ್ಲಿ ನಿರ್ಮಿಲಾಗಿರುವ ನೆಲಮಂಗಲದ ಲೇಔಟ್‌ ಪ್ರಾಜೆಕ್ಟಿನ ಮಾಗ್ ಜೀನ್ ನನ್ನು ಬಿಡುಗಡೆ ಮಾಡಲಾಯಿತು. ಗ್ರಾಹಕರ ಕೈಯಲ್ಲಿ ಪ್ರಾಜೆಕ್ಟ್‌ ಮ್ಯಾಗ್ ಜೀನ್ ಬಿಡುಗಡೆ ಮಾಡುವ ಮೂಲಕ ಗ್ರಾಹಕರಿಗೆ ಪ್ರಾಮುಖ್ಯತೆ ನೀಡಲಾಗುವುದು ಎಂದು ಸಂಸ್ಥೆ ಹೇಳಿದೆ.

ಬಿಲ್ಡರ್ಸ್ ಸಮಸ್ಯೆಗಳ ಪರಿಹಾರಕ್ಕೆ ಸಿಎಂ ಜೊತೆ ಸಭೆ: ಎಸ್‌ ಆರ್‌ ವಿಶ್ವನಾಥ್‌ಬಿಲ್ಡರ್ಸ್ ಸಮಸ್ಯೆಗಳ ಪರಿಹಾರಕ್ಕೆ ಸಿಎಂ ಜೊತೆ ಸಭೆ: ಎಸ್‌ ಆರ್‌ ವಿಶ್ವನಾಥ್‌

ಕಂಪನಿಯ ವ್ಯವಸ್ಥಾಪಕಿ ಸ್ವಾತಿ ಎ ಮಾತನಾಡಿ, ಈ ಯೋಜನೆಯ ಮೊದಲ ಹಂತವಾಗಿ ಗ್ರಾಹಕರು ರಾಜ್ಯದ ಯಾವುದೇ ಭಾಗದಲ್ಲಾದರೂ ಕೂಡಾ ಸೈಟನ್ನು ಖರೀದಿಸುವ ಆಸಕ್ತಿಯನ್ನು ತೋರಿಸಬಹುದಾಗಿದೆ ಎಂದರು.

ಸೈಟ್‌ ಕೊಳ್ಳುವಾಗಲೇ ಗ್ರಾಹಕರಿಗೆ ಆಯ್ಕೆ

ಸೈಟ್‌ ಕೊಳ್ಳುವಾಗಲೇ ಗ್ರಾಹಕರಿಗೆ ಆಯ್ಕೆ

ನಂತರ ಇದೇ ಪ್ರದೇಶದಲ್ಲಿ ಸೈಟ್‌ ಕೊಳ್ಳುವ ಬಗ್ಗೆ ಆಸಕ್ತಿಯನ್ನು ತೋರಿಸುವ 24 ಜನ ಗ್ರಾಹಕರನ್ನು ಜೊತೆಗೂಡಿಸಿ, ಅವರುಗಳಿಗೆ ಆಯಾ ಪ್ರದೇಶದಲ್ಲಿ ಲಭ್ಯವಿರುವ ಜಾಗಗಳನ್ನು ತೋರಿಸಲಾಗುತ್ತದೆ. ಅವರೆಲ್ಲರೂ ಒಪ್ಪಿದ ನಂತರ ಅಲ್ಲಿನ ಜಮೀನನ್ನು ಕಂಪನಿ ಖರೀದಿಸಿ ಅಗತ್ಯವಿರುವ ಸೌಕರ್ಯಗಳನ್ನು ಅಲ್ಲಿ ಅಳವಡಿಸುತ್ತದೆ. ಆ ನಂತರ ಗ್ರಾಹಕರಿಗೆ ಸೈಟನ್ನು ವರ್ಗಾಯಿಸಲಾಗುತ್ತದೆ.

ಇಷ್ಟದ ಪ್ರದೇಶಗಳಲ್ಲಿ ಲೇಔಟ್ ನಿರ್ಮಿಸಿ

ಇಷ್ಟದ ಪ್ರದೇಶಗಳಲ್ಲಿ ಲೇಔಟ್ ನಿರ್ಮಿಸಿ

ಈ ಯೋಜನೆಯಲ್ಲಿ ಜನ ಈಗಾಗಲೇ ಅಭಿವೃದ್ದಿಗೊಂಡಿರುವ ಸಾಂಪ್ರದಾಯಿಕ ಲೇಔಟ್‌ಗಳಲ್ಲದೆ ತಮ್ಮ ಇಷ್ಟದ ಪ್ರದೇಶಗಳಲ್ಲಿ ಲೇಔಟಗಳನ್ನು ನಿರ್ಮಿಸಿಕೊಳ್ಳವ ಸ್ವಾತಂತ್ರ್ಯವನ್ನು ಪಡೆದುಕೊಳ್ಳಲಿದ್ದಾರೆ. ಡೆವಲಪರ್‌ ಕಂಪನಿಯಾಗಿ ನಾವು ಕೇವಲ ಮೂಲಭೂತ ಸೌಕರ್ಯಗಳನ್ನು ಒದಗಿಸಿವ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸುತ್ತೇವೆ ಎಂದು ಹೇಳಿದರು.

ನಟ ಅಭಿಜಿತ್‌ ಮಾತನಾಡಿ

ನಟ ಅಭಿಜಿತ್‌ ಮಾತನಾಡಿ

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಟ ಅಭಿಜಿತ್‌ ಮಾತನಾಡಿ, ಇದು ವಿನೂತನ ಯೋಜನೆ. ಒಂದು ಸೈಟ್‌ ಕೊಳ್ಳಲು ಸಾಕಷ್ಟು ಶ್ರಮವನ್ನು ಹಾಗೂ ಹಣವನ್ನು ವ್ಯಯಿಸಬೇಕಾಗುತ್ತದೆ. ಈ ಶ್ರಮದ ಹಿಂದೆ ನಾವು ಸರಿಯಾದ ಮಾರ್ಗದಲ್ಲಿ ಇದ್ದೇವೆಯೇ ಎನ್ನುವುದು ಒಮ್ಮೊಮ್ಮೆ ಗೊತ್ತಾಗುವುದೇ ಇಲ್ಲ. ಈ ನಿಟ್ಟಿನಲ್ಲಿ ಡ್ರೀಂ ಪ್ರಾಜೆಕ್ಟ್‌ ಪ್ರೈ ಲಿಮಿಟೆಡ್‌ ನಮ್ಮ ಅನುಕೂಲಕ್ಕೆ ತಕ್ಕಂತೆ, ನಮ್ಮ ಇಷ್ಟದ ಪ್ರದೇಶಲ್ಲಿ ಸೈಟ್‌ ಗಳನ್ನು ನಿರ್ಮಿಸಿಕೊಡುವುದು ಬಹಳ ಸಂತಸದ ವಿಷಯವಾಗಿದೆ ಎಂದು ಹೇಳಿದರು.

1 ಟು 100 ಡ್ರೀಂ ಪ್ರಾಜೆಕ್ಟ್ಸ್‌

1 ಟು 100 ಡ್ರೀಂ ಪ್ರಾಜೆಕ್ಟ್ಸ್‌

ಕಾರ್ಯಕ್ರಮದಲ್ಲಿ ಖ್ಯಾತ ವಕೀಲರಾದ ದೊರೆ ರಾಜು, ನಟಿ ವೀಣಾ ಸುಂದರ್‌, 1 ಟು 100 ಡ್ರೀಂ ಪ್ರಾಜೆಕ್ಟ್ಸ್‌ ಪ್ರೈ ಲಿಮಿಟೆಡ್‌ ನ ಮಾರುಕಟ್ಟೆ ಮುಖ್ಯಸ್ಥರಾದ ಕುಮಾರ್‌ ಎಸ್‌, ನಿರ್ದೇಶಕರಾದ ಅಭಿಜಿತ್‌ ಜಿ ಸೇರಿದಂತೆ ನೂರಕ್ಕೂ ಹೆಚ್ಚು ಗ್ರಾಹಕರು ಪಾಲ್ಗೊಂಡಿದ್ದರು.

English summary
Actor Abhijit, Veena Sunder release Project 1 to 100 Magazine belong to Dream Project Pvt Ltd, Nelamangal, Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X