ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಚಿತ್ರ ಘಟನೆ: ಜಯನಗರದಲ್ಲಿ ಅಶ್ವತ್ಥ ಮರಕ್ಕೆ ವಿಷವುಣಿಸಿದ ಕಿಡಿಗೇಡಿಗಳು

|
Google Oneindia Kannada News

ಬೆಂಗಳೂರು, ಜನವರಿ 24: ಮನುಷ್ಯ ಜೀವಿಸಲು ಪ್ರಮುಖ ಕಾರಣವಾಗಿರುವ ಮರಕ್ಕೇ ಮನುಷ್ಯ ವಿಷುಣಿಸಿದ ಘಟನೆ ಜಯನಗರದಲ್ಲಿ ನಡೆದಿದೆ.

ನೀರಿಗೆ ವಿಷ ಬೆರೆಸಿದ್ದು, ಕೇಳಿದ್ದೇವೆ, ತಿನ್ನುವ ಪ್ರಸಾದಕ್ಕೆ ವಿಷಯ ಬರೆಸಿದ್ದನ್ನೂ ಕೇಳಿದ್ದೇವೆ ಆದರೆ ಮರಕ್ಕೆ ವಿಷ ಹಾಕಿದ ಘಟನೆಯನ್ನು ಇದೇ ಮೊದಲ ಬಾರಿಗೆ ನೋಡುತ್ತಿದ್ದೇವೆ.

ಜಯನಗರದ ನಾಲ್ಕನೇ ಟಿ ಬ್ಲಾಕ್‌ನ 18ನೇ ಮುಖ್ಯರಸ್ತೆಯ 2 ನೇ ಅಡ್ಡ ರಸ್ತೆಬಳಿ ಕಿಡಿಗೇಡಿಗಳು ಮರವೊಂದಕ್ಕೆ ಐದು ಕಡೆ ರಂಧ್ರ ಕೊರೆದು ವಿಷ ಉಣಿಸಿದ್ದಾರೆ. ಅದೃಷ್ಟ ವಷಾತ್ ಇದನ್ನು ಸ್ಥಳೀಯ ಸದಸ್ಯರೊಬ್ಬರು ಗಮನಿಸಿದ್ದು ಸಸ್ಯವೈದ್ಯ ವಿಜಯ್ ನಿಶಾಂತ್ ಅವರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಅವರು ಮರಕ್ಕೆ ಪೋಷಕಾಂಶಗಳನ್ನುಣಿಸಿ ಚಿಕಿತ್ಸೆ ನೀಡಿದ್ದಾರೆ.

Activists and residents rescue the tree some one was trying to kill

ಅನೇಕ ಅಬಿವೃದ್ಧಿ ಕಾಮಗಾರಿ ಹೆಸರಿನಲ್ಲಿ ಬೆಂಗಳೂರಲ್ಲಿರುವ ಬಹುತೇಕ ಮರಗಳು ನಾಶವಾಗಿವೆ, ಆದರೆ ಇದೀಗ ಕಾರಣವಿಲ್ಲದೇ ಮರಗಳನ್ನು ಹಾಳು ಮಾಡುವ ಪ್ರವೃತ್ತಿ ಬಂದಿದೆ. ಅಶ್ವತ್ಥ ಮರಗಳು ಕೇವಲ ಬೆರಳೆಣಿಕೆಯಷ್ಟು ಕಾಣಸಿಗುತ್ತದೆ ಈ ಮರಗಳನ್ನು ಕಾಪಾಡಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ವಿಜಯ್ ನಿಶಾಂತ್ ತಿಳಿಸಿದ್ದಾರೆ.

English summary
Peepal Tree has been poisened at jayanagar, treatment is done. When lakshmi poornima a resident of jayanagar spotted unusually big holes on a peepal tree near her home, she suspected something amiss .
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X