ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಪೊಲೋ ಆಸ್ಪತ್ರೆ ವಿರುದ್ಧ ಕ್ರಮ; ಕೆ. ಸುಧಾಕರ್ ಟ್ವೀಟ್

|
Google Oneindia Kannada News

ಬೆಂಗಳೂರು, ಜುಲೈ 28 : ಬೆಂಗಳೂರಿನ ಶೇಷಾದ್ರಿಪುರಂನಲ್ಲಿರುವ ಅಪೋಲೋ ಆಸ್ಪತ್ರೆ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಟ್ವೀಟ್ ಮಾಡಿದ್ದಾರೆ. ಖಾಸಗಿ ಆಸ್ಪತ್ರೆಗಳು ಸರ್ಕಾರದ ಸೂಚನೆ ಪಾಲಿಸುತ್ತಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

Recommended Video

Virat Kohli First Indian to Reach 70 Million Instagram followers | Oneindia Kannada

ಸೋಮವಾರ ತಡರಾತ್ರಿ ನಟಿ ಸುಧಾರಾಣಿ ಸಹೋದರನ ಪುತ್ರಿಯನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಅವರನ್ನು ಚಿಕಿತ್ಸೆಗೆ ದಾಖಲು ಮಾಡಿಕೊಳ್ಳದೇ ಆಸ್ಪತ್ರೆ ನಿರ್ಲಕ್ಷ್ಯ ತೋರಿತ್ತು. ಬಳಿಕ ಪೊಲೀಸ್ ಆಯುಕ್ತರು ಕರೆ ಮಾಡಿದ ಬಳಿಕ ಆಸ್ಪತ್ರೆಗೆ ದಾಖಲು ಮಾಡಿಕೊಳ್ಳಲಾಯಿತು.

ವೈದ್ಯ ಕೊರೊನಾ ಸೋಂಕಿಗೆ ಬಲಿ: ಆಸ್ಪತ್ರೆ ವೆಚ್ಚ ಭರಿಸಿದ ಸಹೋದ್ಯೋಗಿಗಳು ವೈದ್ಯ ಕೊರೊನಾ ಸೋಂಕಿಗೆ ಬಲಿ: ಆಸ್ಪತ್ರೆ ವೆಚ್ಚ ಭರಿಸಿದ ಸಹೋದ್ಯೋಗಿಗಳು

ಮಾಧ್ಯಮಗಳಲ್ಲಿ ಈ ವಿಚಾರ ಸುದ್ದಿಯಾಗಿತ್ತು. ಕರ್ನಾಟಕ ಸರ್ಕಾರ ನೀಡಿರುವ ಸೂಚನೆಗಳನ್ನು ಖಾಸಗಿ ಆಸ್ಪತ್ರೆಗಳು ಪಾಲನೆ ಮಾಡುತ್ತಿಲ್ಲ ಎಂಬುದು ಇದರಿಂದ ತಿಳಿದುಬಂದಿತ್ತು. ಇದರಿಂದಾಗಿ ಡಾ. ಕೆ. ಸುಧಾಕರ್ ಟ್ವೀಟ್ ಮಾಡಿದ್ದು, ಆಸ್ಪತ್ರೆ ವಿರುದ್ಧ ಕ್ರಮ ಕೈಗೊಳ್ಳುವ ಎಚ್ಚರಿಕೆ ಕೊಟ್ಟಿದ್ದಾರೆ.

ಬೆಂಗಳೂರಿನಲ್ಲಿ 22 ಕೊವಿಡ್ ರೋಗಿಗಳ ಆಸ್ಪತ್ರೆ ಶುಲ್ಕ ವಾಪಸ್ ಬೆಂಗಳೂರಿನಲ್ಲಿ 22 ಕೊವಿಡ್ ರೋಗಿಗಳ ಆಸ್ಪತ್ರೆ ಶುಲ್ಕ ವಾಪಸ್

ಸರ್ಕಾರದ ಸೂಚನೆ ಇದ್ದರೂ ಖಾಸಗಿ ಆಸ್ಪತ್ರೆಗಳು ಕೊರೊನಾ ರೋಗಿಗಳನ್ನು ಮಾತ್ರವಲ್ಲ ಸಾಮಾನ್ಯ ರೋಗಿಗಳನ್ನು ಆಸ್ಪತ್ರೆಗೆ ದಾಖಲು ಮಾಡಿಕೊಳ್ಳುತ್ತಿಲ್ಲ. ಈ ಬಗ್ಗೆ ಹಲವಾರು ವರದಿಗಳು ಮಾಧ್ಯಮಗಳಲ್ಲಿ ಬಂದಿದೆ. ಆದರೆ, ಸರ್ಕಾರ ಮಾತ್ರ ಸೂಚನೆ ಕೊಟ್ಟು ಕಣ್ಣುಮುಚ್ಚಿ ಕುಳಿತಿದೆ.

ಕೊವಿಡ್ ಮಧ್ಯೆ ವಿಶೇಷ ಮೈಲಿಗಲ್ಲು ಸಾಧಿಸಿದ ವಾಣಿವಿಲಾಸ ಆಸ್ಪತ್ರೆಕೊವಿಡ್ ಮಧ್ಯೆ ವಿಶೇಷ ಮೈಲಿಗಲ್ಲು ಸಾಧಿಸಿದ ವಾಣಿವಿಲಾಸ ಆಸ್ಪತ್ರೆ

ಡಾ.ಕೆ.ಸುಧಾಕರ್ ಟ್ವೀಟ್

ಶೇಷಾದ್ರಿಪುರಂನ ಅಪೋಲೋ ಆಸ್ಪತ್ರೆ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಟ್ವೀಟ್ ಮಾಡಿದ್ದಾರೆ.

ಆಸ್ಪತ್ರೆಗೆ ದಾಖಲಿಸಿಕೊಂಡಿಲ್ಲ

ಆಸ್ಪತ್ರೆಗೆ ದಾಖಲಿಸಿಕೊಂಡಿಲ್ಲ

ಸೋಮವಾರ ತಡರಾತ್ರಿ ನಟಿ ಸುಧಾರಾಣಿ ತಮ್ಮ ಸಹೋದರನ ಪುತ್ರಿ ಜೊತೆ ಶೇಷಾದ್ರಿಪುರಂನ ಅಪೋಲೋ ಆಸ್ಪತ್ರೆಗೆ ಬಂದಿದ್ದರು. ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಬಳಲುತ್ತಿದ್ದ ಸಹೋದರನ ಪುತ್ರಿಯನ್ನು ಆಸ್ಪತ್ರೆಗೆ ಸೇರಿಸಿಕೊಳ್ಳಲು ನಿರಾಕರಿಸಲಾಗಿತ್ತು. ಸುಮಾರು1 ಗಂಟೆ ಅವರನ್ನು ಆಸ್ಪತ್ರೆ ಮುಂಭಾಗ ಕಾಯಿಸಲಾಯಿತು. ಬಳಿಕ ಪೊಲೀಸ್ ಆಯುಕ್ತರು ಕರೆ ಮಾಡಿದ ಬಳಿಕ ದಾಖಲು ಮಾಡಿಕೊಳ್ಳಲಾಯಿತು.

ಸಾಮಾನ್ಯ ವ್ಯಕ್ತಿಗಳ ಕಥೆ ಏನು?

ಸಾಮಾನ್ಯ ವ್ಯಕ್ತಿಗಳ ಕಥೆ ಏನು?

ಪೊಲೀಸ್ ಆಯುಕ್ತರು ಕರೆ ಮಾಡಿದ ಬಳಿಕ ಸುಧಾರಾಣ ಸಹೋದರನ ಪುತ್ರಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತು. "ಆಸ್ಪತ್ರೆಗಳ ಸಮಸ್ಯೆ ನಮಗೂ ಅರ್ಥವಾಗುತ್ತದೆ. ಆದರೆ, ತುರ್ತು ಸಮಯದಲ್ಲಿ ಜನರು ಏನು ಮಾಡಬೇಕು?" ಎಂದು ಸುಧಾರಾಣಿ ಪ್ರಶ್ನೆ ಮಾಡಿದ್ದಾರೆ.

ಸಿಎಂ ಸೂಚನೆಗೂ ಇಲ್ಲ ಬೆಲೆ

ಸಿಎಂ ಸೂಚನೆಗೂ ಇಲ್ಲ ಬೆಲೆ

ಕೊರೊನಾ ವೈರಸ್ ಸೋಂಕು ಆರಂಭವಾದ ಬಳಿಕ ಖಾಸಗಿ ಆಸ್ಪತ್ರೆಗಳು ಸರ್ಕಾರದ ಸೂಚನೆಗಳನ್ನು ಧಿಕ್ಕರಿಸುತ್ತಿವೆ. ಸಾಮಾನ್ಯ ವ್ಯಕ್ತಿ ಯಾರೇ ಆಗಲಿ ಚಿಕಿತ್ಸೆ ಸಿಗದೇ ಪರದಾಡಬಾರದು. ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿಕೊಳ್ಳಬೇಕು ಎಂಬ ಸರ್ಕಾರದ ಸೂಚನೆಗೆ ಬೆಲೆಯೇ ಇಲ್ಲವಾಗಿದೆ.

English summary
Karnataka medical education minister Dr. K Sudhakar tweeted that action will take against Apollo hospital, Seshadripuram Bengaluru. Hospital denied treatment for the actress Sudharani relations on late night on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X