ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಏಳು ತಿಂಗಳ ಬಳಿಕ ಚಿತ್ರಮಂದಿರದಲ್ಲಿ ಕನ್ನಡದ ಮೊದಲ ಸಿನಿಮಾ ಬಿಡುಗಡೆ

|
Google Oneindia Kannada News

ಬೆಂಗಳೂರು, ನವೆಂಬರ್ 20: ಲಾಕ್‌ಡೌನ್ ಆರಂಭಕ್ಕೂ ಮುನ್ನ ಬಂದ್ ಆಗಿದ್ದ ಚಿತ್ರಮಂದಿರಗಳು ಕೊನೆಗೂ ಬಾಗಿಲು ತೆರೆಯುತ್ತಿವೆ. ಸುದೀರ್ಘ ಸಮಯದಿಂದ ಚಿತ್ರಮಂದಿರದಲ್ಲಿ ಸಿನಿಮಾ ನೋಡಲಾಗದೆ, ಒಟಿಟಿಯಂತಹ ವೇದಿಕೆಗಳನ್ನು ಅವಲಂಬಿಸಿದ್ದ ಚಿತ್ರ ಪ್ರೇಮಿಗಳಿಗೆ ಖುಷಿ ಸುದ್ದಿ ಸಿಕ್ಕಿದೆ. ಕನ್ನಡದ 'ಆಕ್ಟ್-1978' ಚಿತ್ರ ಶುಕ್ರವಾರದಿಂದ ರಾಜ್ಯಾದ್ಯಂತ ಪ್ರದರ್ಶನ ಕಾಣುತ್ತಿದೆ. ಲಾಕ್‌ಡೌನ್ ಬಳಿಕ ಬಿಡುಗಡೆಯಾಗುತ್ತಿರುವ ಮೊದಲ ಹೊಸ ಚಿತ್ರ ಇದು.

Recommended Video

ಯಾವುದೇ ಡೌಟ್ ಬೇಡ ಎಲ್ಲರೂ ಬಂದು ಸಿನಿಮಾ ನೋಡಿ | Garuda Ram | Act 1978 | Filmibeat Kannada

ಮಲ್ಟಿಪ್ಲೆಕ್ಸ್‌ಗಳು ಸೇರಿದಂತೆ ಸುಮಾರು 50 ಚಿತ್ರಮಂದಿರಗಳಲ್ಲಿ 'ಆಕ್ಟ್ 1978' ಚಿತ್ರ ತೆರೆಕಾಣುತ್ತಿದೆ. 'ಹರಿವು', 'ನಾತಿಚರಾಮಿ'ಯಂತಹ ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರಗಳನ್ನು ನೀಡಿರುವ ನಿರ್ದೇಶಕ ಮಂಸೋರೆ ಅವರ ಈ ಚಿತ್ರ ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ವೀರೇಶ್ ಚಿತ್ರಮಂದಿರದಲ್ಲಿ ಗುರುವಾರ ಪ್ರೀಮಿಯರ್ ಪ್ರದರ್ಶನ ಕಂಡಿದೆ. ಚಿತ್ರರಂಗದ ಅನೇಕ ಗಣ್ಯರು ಚಿತ್ರಮಂದಿರಕ್ಕೆ ಆಗಮಿಸಿ ಸಿನಿಮಾ ವೀಕ್ಷಿಸಿದ್ದಾರೆ.

Act-1978 The First New Kannada Movie Released After 7 Months

ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಭಾರತದಲ್ಲಿ ಆರಂಭವಾಗುತ್ತಿದ್ದಂತೆಯೇ ಮೊದಲು ಮುಚ್ಚಿದ್ದು ಚಿತ್ರಮಂದಿರಗಳನ್ನು. ಹೀಗಾಗಿ ಅಂದಿನಿಂದ ಮನರಂಜನಾ ಜಗತ್ತು ಅಕ್ಷರಶಃ ಸ್ತಬ್ಧಗೊಂಡಿತ್ತು. ಚಿತ್ರಮಂದಿರಗಳಲ್ಲಿ ಸೋಂಕು ಹರಡಲು ಹೆಚ್ಚಿನ ಸಂಭವ ಇರುವುದರಿಂದ ಅವುಗಳನ್ನು ತೆರೆಯಲು ಸರ್ಕಾರ ಅನುಮತಿ ನೀಡಿರಲಿಲ್ಲ.

ಈಗ ಕರ್ನಾಟಕ ಸೇರಿದಂತೆ ಬಹುತೇಕ ರಾಜ್ಯಗಳಲ್ಲಿ ಚಿತ್ರಮಂದಿರಗಳನ್ನುತೆರೆಯಲಾಗಿದೆ. ಲಾಕ್‌ಡೌನ್‌ಗೂ ಮುನ್ನ ಚಿತ್ರಮಂದಿರಗಳು ಮುಚ್ಚುವಾಗ ಓಡುತ್ತಿದ್ದ ಸಿನಿಮಾಗಳನ್ನು ಮೊದಲು ಬಿಡುಗಡೆ ಮಾಡಲು ಅವಕಾಶ ನೀಡಲಾಗಿತ್ತು. ಆದರೆ ಇದುವರೆಗೂ ಯಾವುದೇ ಹೊಸ ಸಿನಿಮಾಗಳು ಬಿಡುಗಡೆಯಾಗಿರಲಿಲ್ಲ.

Act-1978 The First New Kannada Movie Released After 7 Months

'ಆಕ್ಟ್ 1978' ಚಿತ್ರದ ಮೂಲಕ ಕನ್ನಡದಲ್ಲಿ ಸಿನಿಮಾ ಮನರಂಜನೆ ಲೋಕ ಮತ್ತೆ ಚಿಗುರಿದೆ. ಚಿತ್ರಮಂದಿರದಲ್ಲಿ ಒಂದು ಸೀಟಿನ ಅಂತರ, ಮಾಸ್ಕ್ ಧರಿಸುವಿಕೆ, ಸ್ಯಾನಿಸೈಸರ್ ಬಳಕೆ, ಥರ್ಮಲ್ ಸ್ಕ್ರೀನಿಂಗ್ ಮತ್ತು ದೈಹಿಕ ಅಂತರ ಕಾಪಾಡಿಕೊಳ್ಳುವಿಕೆಯ ಕಡ್ಡಾಯ ನಿಯಮಗಳ ಪಾಲನೆಯ ಜತೆಯಲ್ಲಿ ಸಿನಿಮಾವನ್ನು ಅನಂದಿಸಬಹುದು.

ಯಜ್ಞಾ ಶೆಟ್ಟಿ, ಬಿ.ಸುರೇಶ್, ಪ್ರಮೋದ್ ಶೆಟ್ಟಿ, ಶ್ರುತಿ, ಅಚ್ಯುತ್ ಕುಮಾರ್, ಸಂಚಾರಿ ವಿಜಯ್, ಅವಿನಾಶ್ ಮುಂತಾದವರು 'ಆಕ್ಟ್-1978' ಚಿತ್ರದ ತಾರಾಬಳಗದಲ್ಲಿದ್ದಾರೆ.

English summary
Mansore directed Act-1978 is released on Nov 20, the first new Kannada movie 7 months after theaters shuts down due to coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X