ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜ್ಯಾದ್ಯಂತ ನಾಳೆಯಿಂದ ಸಂಪೂರ್ಣ ನಾಕಾಬಂದಿ: ಸಿಎಂ

|
Google Oneindia Kannada News

ಬೆಂಗಳೂರು, ಮಾರ್ಚ್ 24: ನಾಳೆಯಿಂದ ಯಾವುದೇ ವಾಹನವನ್ನು ಹೊರಗಡೆ ಹೋಗಲು ಬಿಡುವುದಿಲ್ಲ, ಸಂಪೂರ್ಣ ನಾಕಾಬಂದಿ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸ್ಪಷ್ಟ ಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಮುಖ್ಯಮಂತ್ರಿ, ""ಮಾಧ್ಯಮಗಳು ಇಂತಹ ಸಂದಿಗ್ಧ ಸಮಯದಲ್ಲಿ ಸಂಯಮದಿಂದ ವರ್ತಿಸಿದರೆ ಒಳ್ಳೆಯದು. ಬಹಳ ಮಾಧ್ಯಮ ಮಿತ್ರರು ಸತ್ಯವನ್ನೇ ಭಿತ್ತರಿಸಿರುತ್ತಾರೆ. ಆದರೆ ಕೆಲವು ಮಾಧ್ಯಮ ಮಿತ್ರರು ಜನರಿಗೆ ಸುಳ್ಳು ಸುದ್ದಿಗಳ ಮೂಲಕ ತಪ್ಪು ಸಂದೇಶ ಭಿತ್ತರಿಸುತ್ತಿದ್ದಾರೆ.''

ಕೊರೊನಾ ವೈರಸ್ ನಿಯಂತ್ರಿಸಲು ಶಿವಮೊಗ್ಗ ಡಿಸಿ ಹೊಸ ಪ್ಲಾನ್ಕೊರೊನಾ ವೈರಸ್ ನಿಯಂತ್ರಿಸಲು ಶಿವಮೊಗ್ಗ ಡಿಸಿ ಹೊಸ ಪ್ಲಾನ್

ಇಂದು ಒಂದು ಮಾಧ್ಯಮದಲ್ಲಿ ಜನರನ್ನು ಬೆಂಗಳೂರಿನಿಂದ ಹೊರಗಡೆ ಹೋಗಲು ಸರ್ಕಾರ ಪ್ರೇರೇಪಿಸುತ್ತಿದೆ ಎಂದು ಪ್ರಸಾರವಾಯಿತು. ಸತ್ಯವೆಂದರೆ ರಾಜ್ಯದಲ್ಲಿ ಜನ ಜೀವನ ನಿಯಂತ್ರಿಸುವುದರೊಂದಿಗೆ ಬೇರೆ ಜಿಲ್ಲೆಗಳಿಂದ ಬಂದ ಕೆಲವು ಜನರು ತಮ್ಮ ವಾಹನಗಳಲ್ಲಿ ವಾಪಸ್ಸು ಹೋಗಲು ತಯಾರಾಗಿ ತಮ್ಮ ಊರಿನ ದಾರಿಯನ್ನು ಹಿಡಿದರು.

Across State Lockdown From Tomorrow: CM Yediyurappa

ಕೆಲವು ಕಡೆ ಸಂಚಾರ ದಟ್ಟಣೆ ಉಂಟಾದಾಗ, ಪೊಲೀಸರಿಗೆ ಜನರು ತಮ್ಮ ವಾಹನಗಳಲ್ಲಿ ಊರಿಗೆ ವಾಪಸ್ಸು ಹೋಗಲು ಬಿಡಿ ಎಂದು ಆದೇಶಿಸಲಾಯಿತು. ಯುಗಾದಿ ಹಬ್ಬಕ್ಕೆ ತಮ್ಮ ಊರಿಗೆ ಹೋಗಲು ಅನುವು ಮಾಡಿಕೊಡಲಾಯಿತು. ಇದನ್ನು ತಪ್ಪಾಗಿ ಗ್ರಹಿಸಿ ಜನರನ್ನು

ಕೋವಿಡ್-19 ಜವಾಬ್ದಾರಿಯಿಂದ ಸಚಿವ ಶ್ರೀರಾಮುಲುಗೆ ಕೊಕ್ ಕೋವಿಡ್-19 ಜವಾಬ್ದಾರಿಯಿಂದ ಸಚಿವ ಶ್ರೀರಾಮುಲುಗೆ ಕೊಕ್

ಬೇರೆ ಊರುಗಳಿಗೆ ಹೋಗಲು ಸರ್ಕಾರ ಪ್ರೇರೇಪಿಸುತ್ತಿದೆ ಎಂದು ಭತ್ತರಿಸಲಾಗಿದೆ.

""ಮಾಧ್ಯಮಗಳಿಗೆ ನನ್ನ ಕಳಕಳಿಯ ಮನವಿಯೆಂದರೆ ರಾಷ್ಟ್ರ ವಿಪತ್ತು ಎದುರಿಸುತ್ತಿದ್ದು, ಸಾರ್ವಜನಿಕರೆಲ್ಲರೂ ಅದರಲ್ಲೂ ಮಾಧ್ಯಮಗಳು ಸಹಕರಿಸಬೇಕು. ನಾಳೆಯಿಂದ ಯಾವುದೇ ವಾಹನವನ್ನು ಹೊರಗಡೆ ಹೋಗಲು ಬಿಡುವುದಿಲ್ಲ, ಸಂಪೂರ್ಣ ನಾಕಾಬಂದಿ ಮಾಡಲಾಗುತ್ತದೆ" ಎಂದು ಅವರು ತಿಳಿಸಿದ್ದಾರೆ.

English summary
CM Yediyurappa Made it clear will not leave any vehicle from tomorrow.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X