ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking; ಆಸಿಡ್ ದಾಳಿ, ಆಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷರ ಭೇಟಿ

|
Google Oneindia Kannada News

ಮುಂಬೈ, ಏಪ್ರಿಲ್ 28; ಬೆಂಗಳೂರು ನಗರದಲ್ಲಿ ಯುವತಿ ಮೇಲೆ ಆಸಿಡ್ ದಾಳಿ ನಡೆದಿದೆ. ಯುವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸಿಡ್ ದಾಳಿ ನಡೆಸಿದ ಆರೋಪಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.

ನಗರದ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಾಗೇಶ್ ಎಂಬ ಆರೋಪಿ ಯುವತಿ ಮೇಲೆ ಆಸಿಡ್ ದಾಳಿ ನಡೆಸಿದ್ದಾನೆ. ಯುವತಿಯನ್ನು ಸೆಂಟ್ ಜಾನ್ಸ್‌ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಸಿಲಿಕಾನ್ ಸಿಟಿಯಲ್ಲಿ ಯುವತಿ ಮೇಲೆ ಆಸಿಡ್ ಅಟ್ಯಾಕ್..ಸೈಕೋ ಲವರ್‌ನಿಂದ ಕೃತ್ಯ..! ಸಿಲಿಕಾನ್ ಸಿಟಿಯಲ್ಲಿ ಯುವತಿ ಮೇಲೆ ಆಸಿಡ್ ಅಟ್ಯಾಕ್..ಸೈಕೋ ಲವರ್‌ನಿಂದ ಕೃತ್ಯ..!

ಮಹಿಳಾ ಆಯೋಗದ ಅಧ್ಯಕ್ಷೆ ಆರ್. ಪ್ರಮೀಳಾ ನಾಯ್ಡು ಗುರುವಾರ ಮಧ್ಯಾಹ್ನ ಆಸ್ಪತ್ರೆಗೆ ಭೇಟಿ ನೀಡಿ ಯುವತಿಯನ್ನು ಭೇಟಿ ಮಾಡಿದರು. ಆಸ್ಪತ್ರೆಗೆ ಭೇಟಿ ನೀಡುವ ಮೊದಲು ಆರ್. ಪ್ರಮೀಳಾ ನಾಯ್ಡು ಪೊಲೀಸರಿಂದ ಘಟನೆ ಬಗ್ಗೆ ಮಾಹಿತಿ ಪಡೆದರು.

Breaking; ಬೆಂಗಳೂರಿನಲ್ಲಿ ಮಹಿಳೆ ಮೇಲೆ ಆಸಿಡ್ ದಾಳಿ Breaking; ಬೆಂಗಳೂರಿನಲ್ಲಿ ಮಹಿಳೆ ಮೇಲೆ ಆಸಿಡ್ ದಾಳಿ

Acid Attack On Woman Pramila Naidu Visits Hospital

ನಾಗೇಶ್‌ ಎನ್ನುವ ಆರೋಪಿ ಯುವತಿಯನ್ನು ಪ್ರೀತಿಸುತ್ತಿದ್ದ. ಬುಧವಾರ ಸಂಜೆ ಭೇಟಿಯಾಗಿ ಮದುವೆಯ ಪ್ರಸ್ತಾಪ ಇಟ್ಟಿದ್ದ. ಆದರೆ ಯುವತಿ ಇದನ್ನು ನಿರಾಕರಿಸಿದ್ದಳು. ಇಂದು ಬೆಳಗ್ಗೆ ಸುಂಕದಕಟ್ಟೆ ಬಳಿ ಯುವತಿ ಕೆಲಸಕ್ಕೆ ಹೋಗುವಾಗ ಆರೋಪಿ ಆಸಿಡ್ ದಾಳಿ ನಡೆಸಿದ್ದಾನೆ.

ಶೃಂಗೇರಿ ಆಸಿಡ್ ದಾಳಿ ಪ್ರಕರಣ, ಜೀವಾವಧಿ ಶಿಕ್ಷೆ, 5 ಲಕ್ಷ ದಂಡ ಶೃಂಗೇರಿ ಆಸಿಡ್ ದಾಳಿ ಪ್ರಕರಣ, ಜೀವಾವಧಿ ಶಿಕ್ಷೆ, 5 ಲಕ್ಷ ದಂಡ

ಯುವತಿ ಆರೋಗ್ಯ ವಿಚಾರಿಸಿದ ಬಳಿಕ ಮಾತನಾಡಿದ ಆರ್. ಪ್ರಮೀಳಾ ನಾಯ್ಡು, "ಸಂತ್ರಸ್ತೆಯ ಆರೋಗ್ಯದ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದಿದ್ದೇನೆ. ಯುವತಿಗೆ ಶೇ 40 ರಿಂದ 50ರಷ್ಟು ಗಾಯಗಳಾಗಿವೆ. ಆದರೂ ಸಹ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಐಸಿಯುನಲ್ಲಿ‌ ಚಿಕಿತ್ಸೆ ಮುಂದುವರೆಸಲಾಗಿದೆ" ಎಂದರು.

"ಯುವತಿಯ ದೊಡ್ಡಮ್ಮನ ಬಳಿ ಘಟನೆ ಬಗ್ಗೆ ಮಾಹಿತಿ ಪಡೆದ್ದೀನೆ. ಆರೋಪಿ ಒಮ್ಮೆ ಯುವತಿಯನ್ನು ವಿವಾಹವಾಗುತ್ತೇನೆ ಎಂದು ಆಕೆಯ ದೊಡ್ಡಮ್ಮನ ಕೇಳಿದ್ದ. ಆಕೆಗೆ ಇನ್ನೊಂದು ತಿಂಗಳಿನಲ್ಲಿ ಮದುವೆಯಿದೆ, ಅವಳ ತಂಟೆಗೆ ಬಾರದಂತೆ ಸೂಚಿಸಲಾಗಿತ್ತು. ಆದರೆ ಇವತ್ತು ಈ ರೀತಿಯ ಘಟನೆ ಆಗಿದೆ ಎಂದು ಹೇಳಿದರು" ಎಂದು ಪ್ರಮೀಳಾ ನಾಯ್ಡು ಹೇಳಿದರು.

Recommended Video

ಪಂತ್ ಗಾಗಿ IPL ನಿಯಮವನ್ನೇ ಚೇಂಜ್ ಮಾಡಿ ಎಂದ ಮುಂಬೈ ಇಂಡಿಯನ್ಸ್ | Oneindia Kannada

"ಈಗಾಗಲೇ ಆರೋಪಿಯ ಪತ್ತೆಯ ಮೂರು ತಂಡ ರಚನೆ ಮಾಡಿದ್ದಾರೆ ಡಿಸಿಪಿಯವರ ಬಳಿ ಈಗಾಗಲೇ ಮಾತನಾಡಿದ್ದೇನೆ. ಆರೋಪಿಗೆ ಶಿಕ್ಷೆಯಾಗಲೇ ಬೇಕು. ಮುಂದೆ ಯಾರಿಗೂ ಈ ರೀತಿ‌ ಆಗಬಾರದು ಸಂತ್ರಸ್ತೆಯ ಜೊತೆ ಮಹಿಳಾ ಆಯೋಗ ಇರಲಿದೆ" ಎಂದು ಭರವಸೆ ನೀಡಿದರು.

English summary
Karnataka state commission for women chairperson R. Pramila Naidu visited hospital and met victim of acid attack. Acid attack on woman at Bengaluru Kamakshipalya police station limits.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X