ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯುವತಿ ಮೇಲೆ ಆಸಿಡ್ ದಾಳಿ ಮಾಡಿ ಮಾಡಿದ ಆರೋಪಿ ನಾಗನ ಟ್ರಾವೆಲ್ ಹಿಸ್ಟರಿ

|
Google Oneindia Kannada News

ಬೆಂಗಳೂರು, ಮೇ. 14: ಸಂತ್ರಸ್ತ ಯುವತಿಯನ್ನು ಪ್ರೀತಿಸುವಂತೆ ಏಳು ವರ್ಷದಿಂದ ಹಿಂದೆ ಬಿದ್ದಿದ್ದ ಆಸಿಡ್ ದಾಳಿಕೋರ ನಾಗೇಶ್ ಏ.28 ರಂದು ಆಸಿಡ್ ಎರಚಿದ್ದ. ಅಪರಾಧಿಕ ಮನಸ್ಸು ಸುಮ್ಮನೆ ಇರಲು ಬಿಡಲ್ಲ. ಘಟನೆ ಬಳಿಕ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದ. ಆದರೆ ಮನಸು ಒಪ್ಪದೇ ಸನ್ಯಾಸಿಯಾಗಿ ತಿರುವಣ್ಣಾಮಲೈ ಸೇರಿಕೊಂಡಿದ್ದವ ಈಗ ಕೈದಿಯಾಗಿ ಪರಪ್ಪನ ಅಗ್ರಹಾರ ಸೇರಲಿದ್ದಾನೆ.

ಆಸಿಡ್ ದಾಳಿ ಬಳಿಕ ಆರೋಪಿ ಆಸಿಡ್ ನಾಗ ಏನೆಲ್ಲಾ ಪ್ರಯತ್ನ ಮಾಡಿ, ಪೊಲೀಸರಿಗೆ ಸುಳಿವು ಸಿಕ್ಕದಂತೆ ಪ್ಲಾನ್ ಮಾಡಿದ್ದ.ಅದನ್ನು ಹೇಗೆ ಕಾರ್ಯಗತ ಮಾಡಿ ತಿರುವಣ್ಣಾಮಲೈ ಸೇರಿಕೊಂಡಿದ್ದ ಎಂಬ ವಿವರ ಇಲ್ಲಿ ನೀಡಲಾಗಿದೆ.

ಬೈಕ್‌ನಲ್ಲಿ ಕೋರ್ಟ್‌ನತ್ತ ಪರಾರಿ:

ಸುಂಕದಕಟ್ಟೆ ಬಳಿ ಯುವತಿಗೆ ಆಸಿಡ್ ಹಾಕಿದ್ದ ಕಿರಾತಕ ಮರು ಕ್ಷಣವೇ ಬೈಕ್ ತೆಗೆದುಕೊಂಡು ಕೋರ್ಟ್ ಬಳಿ ಹೋಗಿದ್ದ. ಅಲ್ಲಿ ವಕೀಲರನ್ನು ಭೇಟಿ ಮಾಡಿ, ಬೇಲ್ ಕೊಡಿಸಿ ಎಂದು ಗೋಗರಿದಿದ್ದ. ನಿನ್ನ ಕೇಸು ತಗಳ್ಳೋದಿಲ್ಲ ಅಂತ ವಕೀಲರು ಹೇಳಿದ ಕೂಡಲೇ ಬೈಕನ್ನು ಅಲ್ಲಿಯೇ ಬಿಟ್ಟು ಆಟೋ ಹತ್ತಿ ನಾಗ ಎಸ್ಕೇಪ್ ಆಗಿದ್ದ.

Acid attack case: accused acid Naga travel history

ಆಟೋದಲ್ಲಿಯೇ ಹೊಸಕೋಟೆ ಟೋಲ್ ವರೆಗೂ ಹೋಗಿದ್ದ ಆಸಿಡ್ ನಾಗ ಅಲ್ಲಿ ಸಮೀಪದ ಕೆರೆ ಬಳಿ ಹೋಗಿದ್ದ. ಅಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಆಲೋಚನೆ ಮಾಡಿದ್ದ. ಆದರೆ ಮನಸು ಒಪ್ಪಿರಲಿಲ್ಲ. ಹೀಗಾಗಿ ಅಲ್ಲಿಂದ ಹೊಸೂರು ಮಾರ್ಗವಾಗಿ ಹೋಗಿದ್ದ. ಹೊಸಕೋಟೆ ಬಳಿಯೇ ಮೊಬೈಲ್ ಬಿಸಾಡಿದ್ದ.

ಆಸಿಡ್ ದಾಳಿ ವೇಳೆ ಕೈಗೆ ಸ್ವಲ್ಪ ಗಾಯ ಮಾಡಿಕೊಂಡಿದ್ದ ನಾಗ ಹೊಸಕೋಟೆ ಮಾರ್ಗವಾಗಿ ಹೊಸೂರು ತಲುಪಿ ಅಲ್ಲಿಂದ ಕೃಷ್ಣಗಿರಿಗೆ ಹೋಗಿದ್ದ. ಈ ಮಧ್ಯೆ ಕೈಗೆ ಗಾಯವಾಗಿದೆ ಎಂದು ಚಿಕಿತ್ಸೆ ಪಡೆದುಕೊಂಡಿದ್ದ. ಅದಾದ ಬಳಿಕ ತಿರುವಣ್ಣಾಮಲೈ ಸೇರಿಕೊಂಡಿದ್ದ. ಅಲ್ಲಿ ರಮಣರ್ ಆಶ್ರಮ ಸೇರಿಕೊಂಡು ಸನ್ಯಾಸಿಯಾಗಿ ಬಿಂಬಿಸಿಕೊಂಡಿದ್ದ.

Acid attack case: accused acid Naga travel history

ತಾಂತ್ರಿಕ ಸಾಕ್ಷಾಧಾರ ಪೊಲೀಸರಿಗೆ ಕೈಗೆ ಸಿಗದಂತೆ ಪ್ಲಾನ್ ರೂಪಿಸಿ ಎಲ್ಲವನ್ನೂ ಬಿಸಾಡಿದ್ದ. ತನ್ನ ಬಳಿಯಿದ್ದ ಎಟಿಎಂ ಕಾರ್ಡ್ ಬಳಿಸಿ ಕೂಡ ಕಿರಾತಕ ಹಣ ಡ್ರಾ ಮಾಡಿರಲಿಲ್ಲ. ಹೀಗಾಗಿ ಪೊಲೀಸರು ಹದಿನೈದು ಸಾವಿರ ಲಾಡ್ಜ್ ಗಳನ್ನು ಹುಡುಕಿದರೂ ಸಿಕ್ಕಿರಲಿಲ್ಲ. ಸಿಸಿಟಿವಿ ಪರಿಶೀಲನೆ ಮಾಡಿದರೂ ಪೊಲೀಸರಿಗೆ ಯಾವುದೇ ಪ್ರಯೋಜನ ಆಗಿರಲಿಲ್ಲ.

ಕರ ಪತ್ರಕ್ಕೆ ಮೂರು ಲಕ್ಷ ರೂ. ಖರ್ಚು:

ಇನ್ನು ಆಸಿಡ್ ನಾಗನ್ನು ಸಾಂಪ್ರದಾಯಿಕ ಪೊಲೀಸಿಂಗ್ ಮೂಲಕವೇ ಕಾಮಾಕ್ಷಿಪಾಳ್ಯ ಪೊಲೀಸರು ಪತ್ತೆ ಮಾಡಿದ್ದಾರೆ. ಆಸಿಡ್ ನಾಗನ ಚಹರೆ ಚಿತ್ರ ಆಧರಿಸಿದ ಕರಪತ್ರಗಳನ್ನು ಮುದ್ರಣ ಮಾಡಿ ಕರ್ನಾಟಕ, ಅಂಧ್ರ, ತಮಿಳುನಾಡು, ಕೇರಳ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಹಂಚಲಾಗಿತ್ತು. ಬರೋಬ್ಬರಿ 3 ಲಕ್ಷ ರೂ. ಮೊತ್ತದ ಕರಪತ್ರಗಳನ್ನು ಹಂಚಿದ್ದರು. ಆಯಾ ರಾಜ್ಯಗಳಲ್ಲಿ ಆಯಾ ಭಾಷೆಗಳಲ್ಲಿಯೇ ವಿವರ ಬರೆದು ಕರ ಪತ್ರ ಹಂಚಲಾಗಿತ್ತು. ಅಚ್ಚರಿ ಏನೆಂದರೆ ಕರ ಪತ್ರ ನೋಡಿಯೇ ವ್ಯಕ್ತಿಯೊಬ್ಬ ನೀಡಿದ ಮಾಹಿತಿ ಮೇರೆಗೆ ಆಸಿಡ್ ನಾಗನನ್ನು ಆಶ್ರಮದಲ್ಲಿ ಬಂಧಿಸಲಾಗಿದೆ.

Recommended Video

ಕ್ರಿಕೆಟ್ ಜಗತ್ತಿಗೆ ಆಘಾತ:ಆಸ್ಟ್ರೇಲಿಯಾ ಕ್ರಿಕೆಟ್ ನ ದಂತಕಥೆ ಆಂಡ್ರ್ಯೂ ಸೈಮಂಡ್ಸ್ ಇನ್ನಿಲ್ಲ | Oneindia Kannada

English summary
Travel history of accused of acid attack on young woman; bengaluru police spent 3 lakh rupees for hand bills in acid attack case. know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X