ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಶಿಕಲಾ ಜೈಲು ರಾಜಾತಿಥ್ಯಕ್ಕೆ ಸಿದ್ದರಾಮಯ್ಯ ಅವರದ್ದೇ ಆದೇಶ!

By Manjunatha
|
Google Oneindia Kannada News

Recommended Video

ಶಶಿಕಲಾ ನಟರಾಜನ್ ಗೆ ರಾಯಲ್ ಟ್ರೀಟ್ಮೆಂಟ್ ಕೊಡೋಕೆ ಸಿದ್ದು ಹೇಳಿದ್ರಂತೆ ಹೌದಾ? | Oneindia Kannada

ಬೆಂಗಳೂರು, ಮಾರ್ಚ್‌ 07: ಅಕ್ರಮ ಆಸ್ತಿ ಆರೋಪಿ ತಮಿಳುನಾಡಿನ ಶಶಿಕಲಾ ನಟರಾಜನ್‌ಗೆ ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ ನೀಡಲು ಸ್ವತಃ ಮುಖ್ಯಮಂತ್ರಿಗಳೇ ಮೌಖಿಕ ಆದೇಶ ನೀಡಿದ್ದರು ಎಂದು ನಿವೃತ್ತ ಡಿಜಿಪಿ ಸತ್ಯನರಾಯಣ್ ಅವರು ತನಿಖಾ ಸಮಿತಿಗೆ ಹೇಳಿದ್ದಾರೆ.

ತಮ್ಮನ್ನು ಕುಮಾರಕೃಪಾ ಅತಿಥಿ ಗೃಹಕ್ಕೆ ಕರೆಸಿಕೊಂಡು ಸ್ವತಃ ಮುಖ್ಯಮಂತ್ರಿ ಅವರೇ ಶಶಿಕಲಾಗೆ 'ಫಸ್ಟ್ ಕ್ಲಾಸ್ ಫೆಸಿಲಿಟಿ' ಕೊಡಲು ಮೌಖಿಕವಾಗಿ ಆದೇಶ ಮಾಡಿದ್ದರು, ನಾನು ಅವರ ಆದೇಶ ಪಾಲಿಸಿದ್ದೇನೆ ಅಷ್ಟೆ ಎಂದು ಅವರು ನಿವೃತ್ತ ಮುಖ್ಯ ಕಾರ್ಯದರ್ಶಿ ವಿಜಯ್ ಕುಮಾರ್ ಅವರ ನೇತೃತ್ವದ ಸಮಿತಿಯ ಮುಂದೆ ಹೇಳಿದ್ದಾರೆ.

ಶಶಿಕಲಾಗೆ ವಿಶೇಷ ಸವಲತ್ತು ನೀಡಲು ಸೂಚಿಸಿರಲಿಲ್ಲ: ಸಿದ್ದರಾಮಯ್ಯಶಶಿಕಲಾಗೆ ವಿಶೇಷ ಸವಲತ್ತು ನೀಡಲು ಸೂಚಿಸಿರಲಿಲ್ಲ: ಸಿದ್ದರಾಮಯ್ಯ

ಮುಖ್ಯಮಂತ್ರಿಗಳ ಆದೇಶವನ್ನು ಮಾತ್ರ ನಾನು ಪಾಲಿಸಿರುವು ಕಾರಣ ಎಸಿಬಿಯು ತನ್ನ ವಿರುದ್ಧ ದಾಖಲಿಸಿರುವ ಎಫ್‌ಐಆರ್‌ ಅನ್ನು ರದ್ದು ಮಾಡಬೇಕು ಎಂದು ಅವರು ಹೈಕೋರ್ಟ್‌ನಲ್ಲಿ ಅವರು ಮನವಿ ಸಹ ಮಾಡಿದ್ದಾರೆ.

accused Sathyanarayan says he only following CM orders.

ಜೈಲಿನಲ್ಲಿ ಶಶಿಕಲಾಗೆ ರಾಜಮರ್ಯಾದೆ ಕೊಡುತ್ತಿರುವ ಬಗ್ಗೆ ಆಗಿನ ಡಿಐಜಿ ಡಿ.ರೂಪಾ ಅವರು ಸರ್ಕಾರಕ್ಕೆ ವರದಿ ನೀಡಿದ್ದರು. ಇದು ರಾಷ್ಟ್ರಮಟ್ಟದಲ್ಲಿ ಚರ್ಚೆ ಆಯಿತು. ಸರ್ಕಾರ ಕೂಡ ತನಿಖೆಗೆ ಆದೇಶಿಸಿತು. ಆಗ ಸತ್ಯನಾರಾಯಣ ರಾವ್ ಮೇಲೆ ಲಂಚ ಪಡೆದು ಐಶಾರಾಮಿ ಸವಲತ್ತು ಒದಗಿಸಿರುವುದಾಗಿ ಆರೋಪ ಹೊರಿಸಲಾಗಿತ್ತು.

ಆದರೆ ಇದೀಗ ಸತ್ಯನಾರಾಯಣ್ ಅವರು 'ನನ್ನ ಸ್ವಹಿತಾಸಕ್ತಿಯಿಂದ ನಾನು ಶಶಿಕಲಾ ಅವರಿಗೆ ಐಶಾರಾಮಿ ಸೌಲಭ್ಯ ನೀಡಿಲ್ಲ, ಆದೇಶ ಪಾಲಿಸಿದ್ದೇನೆ ಅಷ್ಟೆ, ಹಾಗಾಗಿ ನನ್ನ ಮೇಲಿನ ಎಫ್‌ಐಆರ್ ತೆಗೆಯಬೇಕು' ಎಂದು ಮನವಿ ಮಾಡಿದ್ದಾರೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸತ್ಯನಾರಾಯಣ್ ಅವರ ಮಾತನ್ನು ಅಲ್ಲಗಳೆದದ್ದು, ನಾನು ಯಾವುದೇ ಆದೇಶ ನೀಡಿಲ್ಲ ಎಂದಿದ್ದಾರೆ.

English summary
Retired DJP Sathyanarayan who is accused Shashikala royal treat in Jail issue said He only followed CM Siddaramaiah's orders. But CM Siddaramaiah refuses it and said i wont give any orders.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X