ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಾಕ್ಷ್ಯವಿದ್ದರೆ ಮಾತ್ರ ಆರೋಪಿ: ಹೈಕೋರ್ಟ್ ಸ್ಪಷ್ಟನೆ

|
Google Oneindia Kannada News

ಬೆಂಗಳೂರು, ಡಿಸೆಂಬರ್ 15: ಅಪರಾಧ ಪ್ರಕರಣಗಳಲ್ಲಿ ಅರೋಪಿಗಳ ಹೇಳಿಕೆಗಳನ್ನು ಆಧರಿಸಿ ಮತ್ತೊಬ್ಬರನ್ನು ಅಪರಾಧಿ ಎಂದು ಹೇಳಲಾಗದು ಸಾಕ್ಷ್ಯವಿದ್ದರೆ ಮಾತ್ರ ಆರೋಪಿಯನ್ನು ಪರಿಗಣಿಸಲಾಗುವುದು ಎಂದು ಹೈಕೋರ್ಟ್ ಆದೇಶ ನೀಡಿದೆ.

ಕೊಲೆ ಪ್ರಕರಣವೊಂದರಲ್ಲಿ ಶವಸಾಗಣೆಗೆ ದ್ವಿಚಕ್ರ ವಾಹನ ನೀಡುವ ಮೂಲಕ ಕೊಲೆಗೆ ಸಹಕರಿಸಿದ್ದ ಆರೋಪದಲ್ಲಿ ಪೊಲೀಸರು ಬಂಧಿಸಿದ್ದ ಒಡಿಶಾ ಮೂಲದ ಧೀರನ್ ಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾ.ಬಿ.ಎ.ಪಾಟೀಲ್ ಅವರಿದ್ದ ಪೀಠ, ಅರ್ಜಿದಾರನನ್ನು ಖುಲಾಸೆಗೊಳಿಸಿದೆ.

ನಿತ್ಯಾನಂದ ಸ್ವಾಮೀಜಿ ವಿರುದ್ಧದ ವಿಚಾರಣೆಗೆ ಹೈಕೋರ್ಟ್ ತಡೆನಿತ್ಯಾನಂದ ಸ್ವಾಮೀಜಿ ವಿರುದ್ಧದ ವಿಚಾರಣೆಗೆ ಹೈಕೋರ್ಟ್ ತಡೆ

ಪ್ರಕರಣದ ಮೊದಲ ಹಾಗೂ ಐದನೇ ಆರೋಪಿಗಳ ಹೇಳಿಕೆ ಆಧರಿಸಿ, ಅರ್ಜಿದಾರರನ್ನು 6ನೇ ಆರೋಪಿಯಾಗಿ ಸೇರ್ಪಡಗೊಳಿಸಲಾಗಿದೆ. ಆದರೆ, ಆರೋಪಿಗಳಿಗೆ ಬೈಕ್ ನೀಡಿರುವ ಅರ್ಜಿದಾರ ಉದ್ದೇಶಪೂರ್ವಕವಾಗಿಯೇ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬುದನ್ನು ಸಾಬೀತುಪಡಿಸಲು ಬಲವಾದ ಸಾಕ್ಷ್ಯಗಳು ಇರಲಿಲ್ಲ.

Accused Is Only If There Is Evidence:High Court Clarity

ಆರೋಪಿಯ ತಪ್ಪೊಪ್ಪಿಗೆ ಹೇಳಿಕೆಯನ್ನಷ್ಟೇ ಸಾಕ್ಷ್ಯವೆಂದು ಪರಿಗಣಿಸಲಾಗದು, ಬಲವಾದ ಶಂಕೆಯಿದ್ದರೆ ವಿಚಾರಣೆ ನಡೆಸಬಹುದು, ಇಲ್ಲದಿದ್ದರೆ ಅಗತ್ಯವಿಲ್ಲ ಎಂದು ಹೈಕೋರ್ಟ್ ತನ್ನ ತೀರ್ಪಿನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದೆ.

ಅರ್ಜಿದಾರನ ವಾದವೇನು?

ಧೀರನ್ ಪರ ವಕೀಲ ಡಿ.ಮೋಹನ್ ಕುಮಾರ್ ವಾದ ಮಂಡಿಸಿ, ಅರ್ಜಿದಾರರ ಬೈಕ್ ಪಡೆವಾಗ ಆರೋಪಿಗಳು ತುರ್ತು ಕೆಲಸವಿದೆ ಎಂದಿದ್ದರು. ಹಿಂದಿರುಗಿ ಬಂದು ಸತ್ಯಾಂಶ ತಿಳಿಸಿದ್ದ ಆರೋಪಿಗಳು ಇದನ್ನು ಬಹಿರಂಗಪಡಿಸದಂತೆ ಬೆದರಿಕೆ ಒಡ್ಡಿದ್ದರು. ಶವ ಸಾಗಿಸಲೆಂದೇ ಬೈಕ್ ಕೊಟ್ಟಿದ್ದರು ಎಂಬುದನ್ನು ಸಾಬೀತುಪಡಿಸಲು ಸಾಕ್ಷ್ಯವಿಲ್ಲ.

ಲಷ್ಕರ್ ಉಗ್ರನಿಗೆ ಜೀವಾವಧಿ ಶಿಕ್ಷೆ ನೀಡಿದ ಕರ್ನಾಟಕ ಹೈಕೋರ್ಟ್‌ಲಷ್ಕರ್ ಉಗ್ರನಿಗೆ ಜೀವಾವಧಿ ಶಿಕ್ಷೆ ನೀಡಿದ ಕರ್ನಾಟಕ ಹೈಕೋರ್ಟ್‌

ಆರೋಪಿಗಳ ತಪ್ಪೊಪ್ಪಿಗೆ ಹೇಳಿಕೆಯನ್ನು ಸಾಕ್ಷ್ಯವಾಗಿ ಪರಿಗಣಿಸುವಂತಿಲ್ಲ ಎಂದು ಸಾಕ್ಷ್ಯಾಧಾರ ಕಾಯ್ದೆ ಸೆಕ್ಷನ್ 25 ಹಾಗೂ 26 ರಲ್ಲಿ ಹೇಳಲಾಗಿದೆ ಎಂದು ನ್ಯಾಯಪೀಠದ ಗಮನಕ್ಕೆ ತಂದಿದ್ದರು.

English summary
The High Court has ordered the accused to be considered only if there is evidence that another person cannot be found guilty on the basis of the statements of the accused in criminal cases.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X