ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪೊಲೀಸರಿಂದ ಆರೋಪಿಗೆ ಜೈಲು; ಆರೋಪಿಯಿಂದ ಖಾಕಿಗೆ ಕ್ವಾರೆಂಟೈನ್!

|
Google Oneindia Kannada News

ಬೆಂಗಳೂರು, ಜೂನ್.06: ಸಿಲಿಕಾನ್ ಸಿಟಿಯಲ್ಲಿ ಆರೋಪಿಯಿಂದ ಖಾಕಿಗಳು ಕ್ವಾರೆಂಟೈನ್ ಆಗುವಂತಾ ಘಟನೆಯೊಂದು ನಡೆದಿದೆ. ಪೊಲೀಸರು ಬಂಧಿಸಿದ ಆರೋಪಿಯಲ್ಲಿ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದ್ದು, 24 ಕಾನ್ಸ್ ಟೇಬಲ್ ಗಳಲ್ಲಿ ಆತಂಕ ಹುಟ್ಟಿಸಿದೆ.

Recommended Video

Sanitizer company claiming to destroy corona fined by high court| Devtol Sanitizer |Oneindia Kannada

ಕಳೆದ ಮೇ.31ರಂದು ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಜೀವನ್ ಭೀಮಾ ನಗರ ಠಾಣೆಯ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದರು. ಮೂವರು ಆರೋಪಿಗಳ ಪೈಕಿ ಒಬ್ಬನಿಗೆ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದೆ.

ಗರ್ಭಕೋಶದ ಆಪರೇಶನ್ ಗಾಗಿ ದಾಖಲಾದ ಶಿಕ್ಷಕಿಗೆ ಕೊರೊನಾ ವೈರಸ್!ಗರ್ಭಕೋಶದ ಆಪರೇಶನ್ ಗಾಗಿ ದಾಖಲಾದ ಶಿಕ್ಷಕಿಗೆ ಕೊರೊನಾ ವೈರಸ್!

ಒಬ್ಬ ಆರೋಪಿಯ ಜೊತೆಗೆ ಪ್ರಾಥಮಿಕ ಸಂಪರ್ಕವನ್ನು ಹೊಂದಿರುವ ಠಾಣೆಯ 24 ಮಂದಿ ಕಾನ್ಸ್ ಟೇಬಲ್ ಗಳನ್ನು 14 ದಿನಗಳ ಕಾಲ ಹೋಟೆಲ್ ಕ್ವಾರೆಂಟೈನ್ ನಲ್ಲಿ ಇರಿಸಲಾಗಿದೆ. ಪೊಲೀಸ್ ಠಾಣೆಗೆ ಸ್ಯಾನಿಟೈಸ್ ಮಾಡಲಾಗಿದೆ.

 Hotel Quarantine for 24 Cops of Bangalore Jeevan Bhima nagara police Station

ಐದು ದಿನ ಪೊಲೀಸ್ ಠಾಣೆಯಲ್ಲಿದ್ದ ಆರೋಪಿ:

ಕಳೆದ ಮೇ.31ರಂದು ಬಂಧಿಸಲ್ಪಟ್ಟಿದ್ದ ಮೂವರು ಆರೋಪಿಗಳು ಜೀವನ್ ಭೀಮಾ ನಗರ ಪೊಲೀಸ್ ಠಾಣೆಯಲ್ಲೇ ಇರಿಸಿಕೊಳ್ಳಲಾಗಿತ್ತು. ಈ ವೇಳೆ ಸೋಂಕಿತ ಆರೋಪಿ ಜೊತೆಗೆ ಕನಿಷ್ಠ 24 ಮಂದಿ ಪೊಲೀಸರು ಪ್ರಾಥಮಿಕ ಸಂಪರ್ಕವನ್ನು ಹೊಂದಿರುವುದು ಪತ್ತೆಯಾಗಿದೆ. ಹೀಗಾಗಿ ಎಲ್ಲ 24 ಮಂದಿಯನ್ನು ಹೋಟೆಲ್ ಕ್ವಾರೆಂಟೈನ್ ನಲ್ಲಿ ಇರಿಸಲಾಗಿದೆ. ಬಾಕಿ ಉಳಿದ ಪೊಲೀಸ್ ಠಾಣೆಯ ಸಿಬ್ಬಂದಿಗೆ ಗೃಹ ದಿಗ್ಬಂಧನದಲ್ಲಿ ಇರುವಂತೆ ಸೂಚನೆ ನೀಡಲಾಗಿದೆ.

English summary
Hotel Quarantine for the police who had contact with the accused Infected with the coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X