ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮ್ಯೂಸಿಕ್ ಅಷ್ಟು ಜೋರಾಗಿ ಹಾಕಬೇಡ ಅಂದಿದ್ದಕ್ಕೆ ಪೊಲೀಸರ ಕೈ ಕಚ್ಚಿದ

|
Google Oneindia Kannada News

ಬೆಂಗಳೂರು, ಜೂನ್ 12: ಸಾಮಾನ್ಯ ಜನರು ಹಾಗಿರಲಿ ಪೊಲೀಸರ ಕಂಡರೂ ಕಿಂಚಿತ್ತಾದರೂ ಭಯ ಬೇಡವೇ, ಬೆಳಗಿನ ಜಾವ ಜೋರಾಗಿ ಮ್ಯೂಸಿಕ್ ಹಾಕಿಕೊಂಡು ದಾಂಧಲೆ ಮಾಡುತ್ತಿದುದನ್ನು ಪ್ರಶ್ನಿಸಿದ ಪೊಲೀಸರ ಕೈಕಚ್ಚಿದ ಪ್ರಸಂಗ ಬೆಂಗಳೂರಲ್ಲಿ ನಡೆದಿದೆ.

ಒಂದಷ್ಟು ಜನ ಬೆಳಗ್ಗೆ 3.30ರ ಹೊತ್ತಿಗೆ ರಸ್ತೆಯಲ್ಲಿ ಜೋರಾಗಿ ಮ್ಯೂಸಿಕ್ ಹಾಕಿಕೊಂಡು ಸಾಂಧಲೆ ನಡೆಸುತ್ತಿದ್ದರು. ಬುದ್ಧಿವಾದ ಹೇಳಲು ಹೋದ ಪೊಲೀಸರ ಕೈಕಚ್ಚಿ ಹಲ್ಲೆ ಮಾಡಿದ್ದಷ್ಟೆ ಅಲ್ಲದೆ, ಹೊಯ್ಸಳ ವಾಹನವನ್ನು ಗಾಜು ಒಡೆದು ಧ್ವಂಸಗೊಳಿಸಿರುವ ಘಟನೆ ಚೆನ್ನಸಂದ್ರದಲ್ಲಿ ನಡೆದಿದೆ.

ಹೆಣ್ಣೂರು ರಸ್ತೆಯಲ್ಲಿ ವೈಟ್ ಟಾಪಿಂಗ್, ಪ್ರಯಾಣಿಕರು ಸುಸ್ತೋ ಸುಸ್ತು ಹೆಣ್ಣೂರು ರಸ್ತೆಯಲ್ಲಿ ವೈಟ್ ಟಾಪಿಂಗ್, ಪ್ರಯಾಣಿಕರು ಸುಸ್ತೋ ಸುಸ್ತು

ಈ ಕುರಿತು ವಿವಿನ್ ಜತ್ ಸಿಂಗ್ ಸುಧಾನ್ ಅನ್ನುವವನನ್ನು ಕಾಡುಗೋಟಿ ಪೊಲೀಸರು ಬಂಧಿಸಿದ್ದಾರೆ.ರಾತ್ರಿ ಗಸ್ತು ತಿರುಗುತ್ತಿದ್ದ ರಾಘವೇಂದ್ರ, ಸಿದ್ದಲಿಂಗಪ್ಪ, ಶರಣಪ್ಪ ಮತ್ತು ಗೃಹರಕ್ಷಕ ಸಿಬ್ಬಂದಿ ಮುನಿರಾಜು ಅಲ್ಲಿಗೆ ತೆರಳಿದ್ದರು.

Accused bites the police hand in Road

ಆ ವೇಳೆ ಮನೆಯಲ್ಲಿ ಇಬ್ಬರು ಯುವತಿಯರು ಮತ್ತು ಐವರು ಯುವಕರು ಮ್ಯೂಸಿಕ್ ಹಾಕಿಕೊಂಡು ಗದ್ದಲವೆಬ್ಬಿಸುತ್ತಿದ್ದರು. ಅಕ್ಕಪಕ್ಕದ ಮನೆಯವರಿಗೆ ತೊಂದರೆಯಾಗುತ್ತಿದೆ ಎಂದು ಪೊಲೀಸರು ತಿಳಿ ಹೇಳಿದ್ದಕ್ಕೆ ಹಲ್ಲೆ ನಡೆಸಿದ್ದಾರೆ.

ಪೊಲೀಸ್ ಮ್ಯೂಸಿಕ್ ಸಿಸ್ಟಂ ಆಫ್ ಮಾಡಲು ಹೋದಾಗ ಅವರ ಸಮವಸ್ತ್ರ ಹಿಡಿದು ಎಳೆದಾಡಿದ ಆರೋಪಿ ಬಲಗೈ ಬೆರಳನ್ನು ಕಚ್ಚಿ ಗಾಯಗೊಳಿಸಿದ್ದಾರೆ. ಲಾಠಿ ಕಿತ್ತುಕೊಂಡು ಹಲ್ಲೆ ನಡೆಸಿದ್ದಾನೆ.

English summary
Driver and owner of the car arrested who bites thee police hand in a road.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X