ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಡಿಸಿ ಕಚೇರಿ ಲಂಚ ಪ್ರಕರಣ; ಜಿಲ್ಲಾಧಿಕಾರಿ ಮಂಜುನಾಥ್ ಹೇಳಿಕೆ ದಾಖಲು

|
Google Oneindia Kannada News

ಬೆಂಗಳೂರು, ಜೂ.24: ಬೆಂಗಳೂರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ದಾಳಿ ಮಾಡಿ ಲಂಚ ಸ್ವೀಕರಿಸುವಾಗ ಕಚೇರಿಯ ಅಧಿಕಾರಿಗಳನ್ನು ಹಿಡಿದಿದ್ದರು. ಈ ವೇಳೆ ಜಿಲ್ಲಾಧಿಕಾರಿಗಳ ಸೂಚನೆಯ ಲಂಚವನ್ನು ಕೊಟ್ಟಿದ್ದೆ ಎಂದು ದೂರುದಾರ ಆರೋಪವನ್ನು ಮಾಡಿದ್ದರು. ಈ ಪ್ರಕರಣ ಸಂಬಂಧ ಎಸಿಬಿ ಅಧಿಕಾರಿಗಳು ಬೆಂಗಳೂರು ನಗರ ಜಿಲ್ಲಾಧಿಕಾರಿಗಳನ್ನು ಕರೆದು ವಿಚಾರಣೆಯನ್ನು ನಡೆಸಿ ಹೇಳಿಕೆಯನ್ನು ಪಡೆದಿದ್ದಾರೆ.

ಬೆಂಗಳೂರು ನಗರ ಜಿಲ್ಲಾಧಿಕಾರಿ ಮಂಜುನಾಥ್‌ಗೆ ಕೆಲ ದಿನಗಳ ಹಿಂದೆ ವಿಚಾರಣೆ ಹಾಜರಾಗುವಂತೆ ನೀಡಿದ್ದ ನೊಟೀಸ್‌ ನೀಡಿದ್ದರು. ಜಿಲ್ಲಾಧಿಕಾರಿಗಳು ಸ್ವತಃ ವಿಚಾರಣೆಗೆ ಹಾಜರಾಗಿ ಎಸಿಬಿ ಅಧಿಕಾರಿಗಳ ಪ್ರಶ್ನೆಗಳಿಗೆ ಉತ್ತರಿಸಿ ತಮ್ಮ ಹೇಳಿಕೆಯನ್ನು ನೀಡಿದ್ದಾರೆ. ತನಿಖೆಗೆ ಅಗತ್ಯ ಬಿದ್ದರೆ ಮತ್ತೊಮ್ಮೆ ವಿಚಾರಣೆಗೆ ಹಾಜರಾಗುವಂತೆ ಡಿಸಿ ಅವರಿಗೆ‌ ಅಧಿಕಾರಿಗಳು ಸೂಚನೆ‌ ನೀಡಿದ್ದಾರೆ ಎನ್ನಲಾಗಿದೆ.

ಮೇ 21 ರಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೆಲಸ ಮಾಡುವ ಉಪ ತಹಶೀಲ್ದಾರ್ / ಮ್ಯಾನೇಜರ್ ಮಹೇಶ್ ಗುತ್ತಿಗೆ ನೌಕರ ಚೇತನ್ ಆಲಿಯಾಸ್ ಚಂದ್ರು ದೂರುದಾರರಿಂದ 5 ಲಕ್ಷ ರೂಪಾಯಿ ಲಂಚ ಪಡೆದ ಪ್ರಕರಣದಲ್ಲಿ ಎಸಿಬಿ ಅಧಿಕಾರಿಗಳ ತೋಡಿದ್ದ ಹಳ್ಳಕ್ಕೆ ಸಿಕ್ಕಿಬಿದ್ದಿದ್ದರು. ಈ ವೇಳೆ ಜಿಲ್ಲಾಧಿಕಾರಿ ಪಾತ್ರದ ಬಗ್ಗೆ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ‌ ಎಸಿಬಿ‌ ತನಿಖಾಧಿಕಾರಿಗಳು ಡಿಸಿ ಅವರ ವಿಚಾರಣೆ‌ ನಡೆಸಿ ಹೇಳಿಕೆ ಪಡೆದುಕೊಂಡಿರುವುದಾಗಿ ಮೂಲಗಳಿಂದ ತಿಳಿದುಬಂದಿದೆ.

ಲಂಚ ಸ್ವೀಕರಿಸುವಾಗಲೇ ಅರೆಸ್ಟ್

ಲಂಚ ಸ್ವೀಕರಿಸುವಾಗಲೇ ಅರೆಸ್ಟ್

ಬೇಗೂರಿನ ನಿವಾಸಿಯೊಬ್ಬರು ಆನೇಕಲ್‌ನ‌ ಕೂಡ್ಲು ಗ್ರಾಮದಲ್ಲಿ 38 ಗುಂಟೆ ಜಮೀನು ಹೊಂದಿದ್ದರು. ಈ ಸಂಬಂಧ ಡಿಸಿ ಕೋರ್ಟ್ ನಲ್ಲಿ ವ್ಯಾಜ್ಯವಿತ್ತು. ಅರ್ಜಿದಾರರ ಅರ್ಜಿ ಕ್ಲಿಯರ್ ಮಾಡಿಕೊಡಬೇಕಾದರೆ ಆರೋಪಿ ಮಹೇಶ್ ಆರಂಭದಲ್ಲಿ15 ಲಕ್ಷಕ್ಕೆ ಲಂಚಕ್ಕೆ ಬೇಡಿಕೆಯಿಟ್ಟು ನಂತರ 5 ಲಕ್ಷಕ್ಕೆ ಒಪ್ಪಿಕೊಂಡಿದ್ದರು. ಲಂಚ ಪಡೆಯುವಾಗ ರೆಡ್ ಹ್ಯಾಂಡಾಗಿ ಎಸಿಬಿ ಅಧಿಕಾರಿಗಳು ಬಂಧಿಸಿದ್ದರು‌. ಜಮೀನು ವಿಚಾರ ಸಂಬಂಧ ದೂರುದಾರರು ಎರಡು ಬಾರಿ ಜಿಲ್ಲಾಧಿಕಾರಿಯನ್ನು ಭೇಟಿ‌ ಮಾಡಿದ್ದರು ಎನ್ನಲಾಗಿದೆ.

ಎಸಿಬಿ ಅಧಿಕಾರಿಗಳು ಕೇಳಿದ ಪ್ರಶ್ನೆಗೆ ಉತ್ತರ

ಎಸಿಬಿ ಅಧಿಕಾರಿಗಳು ಕೇಳಿದ ಪ್ರಶ್ನೆಗೆ ಉತ್ತರ

ದೂರುದಾರರು ಭೇಟಿಯಾಗಿದ್ದು ನಿಜವೇ? ಆರೋಪಿಗಳ ಲಂಚ ಪಡೆದಿದ್ದು ನಿಮ್ಮ ಗಮನಕ್ಕೆ ಬಂದಿತ್ತಾ ? ಎಂಬುದು ಸೇರಿದಂತೆ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಗಳ ಬಗ್ಗೆ ವಿಚಾರಣೆ ವೇಳೆ ಡಿಸಿ ಅವರಿಂದ ಎಸಿಬಿ ಹೇಳಿಕೆ ಪಡೆದುಕೊಂಡಿದೆ ಎಂದು ಹೇಳಲಾಗಿದೆ. ವಿಚಾರಣೆಗೆ ಹಾಜರಾಗಿವುದರ ಬಗ್ಗೆ ಜಿಲ್ಲಾಧಿಕಾರಿ ಮಂಜುನಾಥ್ ಅವರನ್ನು ಕರೆ ಮಾಡಿದಾಗ ಸಂಪರ್ಕ ಮಾಡಲು ಪ್ರಯತ್ನಿಸಿರೂ ಸಂಪರ್ಕಕ್ಕೆ ಸಿಕ್ಕಿಲ್ಲ.

ದೂರು ದಾರ ಆಜಂ ಪಾಷ ಡಿಸಿ ಮೇಲೆ ನೇರ ಆರೋಪ

ದೂರು ದಾರ ಆಜಂ ಪಾಷ ಡಿಸಿ ಮೇಲೆ ನೇರ ಆರೋಪ

ಎಸಿಬಿಯ ಡಿವೈಎಸ್ಪಿ ರವಿಶಂಕರ್ ನೇತೃತ್ವದಲ್ಲಿ ದಾಳಿಯನ್ನು ನಡೆಸಲಾಗಿತ್ತು. ಆಜಾಂ ಪಾಷ ಎಂದುವವರು ಕೊಟ್ಟ ದೂರಿನ ಮೇರೆಗೆ ಎಸಿಬಿ ಟ್ರಾಪ್ ಮಾಡಿತ್ತು. ಜಮೀನಿಗೆ ಸಂಬಂಧಿಸಿದಂತೆ ಎಸಿ ನ್ಯಾಯಾಲಯ ತೀರ್ಪು ನೀಡಿದ್ದು ಡಿಸಿ ನ್ಯಾಯಾಲಯಕ್ಕೆ ವರ್ಗಾವಣೆಯಾಗಿರುತ್ತದೆ. ಈ ಕೇಸ್ ಫೈಲ್ ಅನ್ನು ಕ್ಲಿಯರ್ ಮಾಡುವ ಸಲುವಾಗಿ ಹದಿನೈದು ಲಕ್ಷಕ್ಕೆ ಬೇಡಿಕೆ ಇಡಲಾಗಿತ್ತಂತೆ. ಹದಿನೈದು ಲಕ್ಷದ ಪೈಕಿ 5 ಲಕ್ಷವನ್ನು ಲಂಚವಾಗಿ ಸ್ವೀಕರಿಸುವ ವೇಳೆ ಎಸಿಬಿ ಅಧಿಕಾರಿಗಳು ಟ್ರಾಪ್ ಮಾಡಿ ನೇರವಾಗಿಯೇ ಹಿಡಿದಿದ್ದರು. ಈ ವೇಳೆ ಮಾತನಾಡಿದ್ದ ಆಜಂ ಪಾಷ ಡಿಸಿ ಮಂಜುನಾಥ್‌ ಮೇಲೆ ಸಹ ಆರೋಪವನ್ನು ಮಾಡಿದ್ದರು.

ಡಿಸಿ ತನಿಖೆ ಅಗತ್ಯ ಬಿದ್ದರೇ ಮತ್ತೊಮ್ಮೆ ವಿಚಾರಣೆ

ಡಿಸಿ ತನಿಖೆ ಅಗತ್ಯ ಬಿದ್ದರೇ ಮತ್ತೊಮ್ಮೆ ವಿಚಾರಣೆ

ಡಿಮ್ಯಾಂಡ್, ( demand) , ವರ್ಕ್ ಪೆಂಡಿಂಗ್( work pending)ಅಕ್ಸೆಪೆನ್ಸಿ (acceptancy)ಯ ಆಧಾರದಲ್ಲಿ ಎಸಿಬಿ ತನಿಖೆಯನ್ನು ನಡೆಸುತ್ತಿದೆ. ಸದ್ಯ ಉಪತಹಸೀಲ್ದಾರ್ ಮಹೇಶ್ ಮತ್ತು ಕ್ಲರ್ಕ್ ಚಂದ್ರು ವಿಚಾರಣೆಯನ್ನು ನಡೆಸಿದ್ದ ಸಂದರ್ಭದಲ್ಲಿ ಡಿಸಿ ಮಂಜುನಾಥ್‌ವರ ಪಾತ್ರದ ಬಗ್ಗೆಯು ಮಾಹಿತಿ ಸಿಕ್ಕಿದ್ದ ಹಿನ್ನೆಲೆಯಲ್ಲಿ ಡಿಸಿಯವರ ವಿಚಾರಣೆಯನ್ನು ನಡೆಸಲಾಗಿದೆ.

English summary
ACB Trap case in DC office in Bengaluru: DC Manjunath Attend Acb Inquiry, ACB Caught 2 Govt Officials sub tahsildar and clerk Red Handed while taking bribe of Rs 5 Lakh from Azam Pasha for clearing his land related file case,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X