ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ 4 ಸರ್ಕಾರಿ ಅಧಿಕಾರಿಗಳ ಮೇಲೆ ಎಸಿಬಿ ದಾಳಿ

|
Google Oneindia Kannada News

ಬೆಂಗಳೂರು, ಜೂನ್ 21: ಕರ್ನಾಟಕ ರಾಜ್ಯ ಭ್ರಷ್ಟಾಚಾರ ನಿಗ್ರಹ ದಳವು ನಾಲ್ಕು ವಿವಿಧ ಸರ್ಕಾರಿ ಅಧಿಕಾರಿಗಳ ಆಸ್ತಿ ಪಾಸ್ತಿಗಳ ಮೇಲೆ ಶುಕ್ರವಾರ ದಾಳಿ ನಡೆಸಿದೆ.
ಒಟ್ಟು 14 ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ.

-ವಾಣಿಜ್ಯ ತೆರಿಗೆ ಜಂಟಿ ಆಯುಕ್ತ ಎಂಬಿ ನಾರಾಯಣಸ್ವಾಮಿ ಅವರ ವಿಭಾಗೀಯ ಸರಕು ಮತ್ತು ಸೇವಾ ಕಚೇರಿ, ಅವರ ಜಯನಗರದಲ್ಲಿನ ವಾಸದ ಮನೆ, ಸಂಬಂಧಿಕರ ಮನೆ, ವಿನಾಯಕನಗರದಲ್ಲಿರುವ ಮೇಡಹಳ್ಳಿಯಲ್ಲಿನ ಮನೆ, ಕೋಲಾರದಲ್ಲಿನ ಎರಡು ಮನೆ, ಹಾಗೂ ಇವರು ಕರ್ತವ್ಯ ನಿರ್ವಹಿಸುತ್ತಿರುವ ವಾಣಿಜ್ಯ ತೆರಿಗೆಗಳ ವಿಭಾಗೀಯ ಸರಕು ಮತ್ತು ಸೇವಾ ಕಛೇರಿ ಮೇಲೆ ದಾಳಿ ನಡೆಸಲಾಗಿದೆ.

ಲಂಚ ಸ್ವೀಕರಿಸುತ್ತಿದ್ದಾಗ ಪುತ್ತೂರು ತಹಶೀಲ್ದಾರ್ ಎಸಿಬಿ ಬಲೆಗೆಲಂಚ ಸ್ವೀಕರಿಸುತ್ತಿದ್ದಾಗ ಪುತ್ತೂರು ತಹಶೀಲ್ದಾರ್ ಎಸಿಬಿ ಬಲೆಗೆ

-ಡಾ.ಶಿವಶಂಕರ್, ಮ್ಯಾನೇಜರ್, (ಉಪ ವ್ಯವಸ್ಥಾಪಕರು) ಬಮೂಲ್ (ಬೆಂಗಳೂರು ಮಿಲ್ಕ್ ಯೂನಿಯನ್) ರಾಮನಗರ ಜಿಲ್ಲೆ.ಇವರ ಅರ್ಕಾವತಿ ಬಡಾವಣೆ ರಾಮನಗರದಲ್ಲಿನ ನಿವಾಸ, ಹಾಗೂ ಇವರ ಸಂಬಂಧಿಕರ ದೊಡ್ಡಬಳ್ಳಾಪುರದಲ್ಲಿನ ವಾಸದ ಮನೆ ಮತ್ತು ಇವರು ಕರ್ತವ್ಯ ನಿರ್ವಹಿಸುತ್ತಿರುವ ಉಪ ವ್ಯವಸ್ಥಾಪಕರ ಕಛೇರಿ, ಬಮೂಲ್ ರಾಮನಗರ ಶಿಬಿರ, ರಾಮನಗರ.

ACB raids four government officials across Bengaluru

- ಆರ್ಷದ್ ಪಾಷ, ಸಹಾಯಕ ಅಭಿಯಂತರರು, ಪಂಚಾಯತ್ ರಾಜ್ ಇಲಾಖೆ, ಪಿರಿಯಾಪಟ್ಟಣ ಉಪ ವಿಭಾಗ, ಮೈಸೂರು. ಇವರ ಮೈಸೂರು ನಗರದ ಉದಯಗಿರಿಯಲ್ಲಿನ ವಾಸದ ಮನೆ ಹಾಗು ಇವರು ಕಾರ್ಯನಿರ್ವಹಿಸುತ್ತಿರುವ ಸಹಾಯಕ ಅಭಿಯಂತರರ ಕಛೇರಿ, ಪಂಚಾಯತ್ ರಾಜ್ ಇಲಾಖೆ, ಪಿರಿಯಾಪಟ್ಟಣ ಉಪ ವಿಭಾಗ, ಮೈಸೂರು.

-ಚೆನ್ನೇಗೌಡ ಎಚ್‌.ಎಸ್ ಸಹಾಯಕ ಅಭಿಯಂತರರು, ಪಿಬ್ಲ್ಯೂಡಿ ಇಲಾಖೆ, ಹಾಸನ ವಿಶೇಷ ವಿಭಾಗ, ಹಾಸನ. ಇವರ ಹಾಸನ ಹೇಮಾವತಿ ನಗರದಲ್ಲಿನ ನಿವಾಸ ಮತ್ತು ಹಾಸನ ನಗರದಲ್ಲಿನ ಇವರ ಸಂಬಂಧಿಕರ ಮನೆ ಹಾಗೂ ಇವರು ಕರ್ತವ್ಯ ನಿರ್ವಹಿಸುತ್ತಿರುವ ಸಹಾಯಕ ಅಭಿಯಂತರರ ಕಛೇರಿ, ಲೋಕೋಪಯೋಗಿ ಇಲಾಖೆ ವಿಶೇಷ ವಿಭಾಗ, ಹಾಸನ.

ಬೆಂಗಳೂರು: ಭಾರಿ ಹಗರಣ ಗುಮಾನಿ ಐದು ಕಡೆ ಎಸಿಬಿ ದಾಳಿಬೆಂಗಳೂರು: ಭಾರಿ ಹಗರಣ ಗುಮಾನಿ ಐದು ಕಡೆ ಎಸಿಬಿ ದಾಳಿ

ಕರ್ನಾಟಕ ರಾಜ್ಯ ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆಯ ವಿವಿಧ ತಂಡಗಳಿಂದ ಮೇಲ್ಕಂಡ ಆರೋಪಿತ ಸರ್ಕಾರಿ ನೌಕರರ ವಿರುದ್ದ ದಾಳಿ ಮುಂದುವರೆದಿದ್ದು, ಸದರಿ ಸರ್ಕಾರಿ ನೌಕರರು ಹೊಂದಿರುವ ಆಸ್ತಿ-ಪಾಸ್ತಿಗಳ ಮೂಲದ ಬಗ್ಗೆ ತನಿಖೆ ಮುಂದುವರೆದಿದೆ.

English summary
Anti corruption bureau In early morning operation on Friday. Raided the houses of Four Government officials in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X