ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ಬಿಡಿಎ ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ

|
Google Oneindia Kannada News

ಬೆಂಗಳೂರು, ಏ.26: ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ವು ಬೆಂಗಳೂರಿನ ಬಿಡಿಎ ಹಾಗೂ ಬಿಬಿಎಂಪಿ ಅಧಿಕಾರಿಗಳ ಮನೆ ಮೇಲೆ ಶುಕ್ರವಾರ ಬೆಳಗ್ಗೆ ದಾಳಿ ನಡೆಸಿದೆ.

ಅಧಿಕಾರ ದುರುಪಯೋಗ ಪಡಿಸಿಕೊಂಡು ಬಿಬಿಎಂಪಿ ರಸ್ತೆ ಅಗಲೀಕರಣಕ್ಕೆ ವಶಪಡಿಸಿಕೊಳ್ಳಲಾದ ಸೈಟುಗಳು ಮತ್ತು ಬಿಲ್ಡಿಂಗ್ ಗಳ ಜಾಗಕ್ಕಿಂತ ಹೆಚ್ಚು ಜಾಗಕ್ಕೆ ಬೆಲೆ ನಿಗದಿಪಡಿಸಿದ್ದರು.

ಆಪರೇಷನ್ ಕಮಲ ಕುರಿತು ಶ್ರೀನಿವಾಸ ಗೌಡ ಹೇಳಿಕೆ : ಎಸಿಬಿಗೆ ಪ್ರಶ್ನೆಗಳುಆಪರೇಷನ್ ಕಮಲ ಕುರಿತು ಶ್ರೀನಿವಾಸ ಗೌಡ ಹೇಳಿಕೆ : ಎಸಿಬಿಗೆ ಪ್ರಶ್ನೆಗಳು

ಅಷ್ಟೇ ಅಲ್ಲದೆ ಸಿಎಂಸಿ ಮತ್ತು ಬಿಬಿಎಂಪಿ ಅಭಿವೃದ್ಧಿಪಡಿಸಿರುವ ಆಸ್ತಿಯನ್ನು ಖಾಸಗಿ ವ್ಯಕ್ತಿಗಳ ಆಸ್ತಿಯೆಂದು ಬಿಂಬಿಸಿ ಅವರಿಗೆ ಅಪಾರ ಪ್ರಮಾಣದ ಅಕ್ರಮ ಲಾಭ ಮಾಡಿಕೊಟ್ಟಿದ್ದಾರೆ. ಬಿಬಿಎಂಪಿಗೆ ಮತ್ತು ಸರ್ಕಾರಕ್ಕೆ ಕೋಟ್ಯಂತರ ರೂ ನಷ್ಟ ಮಾಡಿದ್ದಾರೆ.

Acb raids at locations of government officials in Bengaluru

ಈ ಆರೋಪವನ್ನು ಆಧಾರವಾಗಿಟ್ಟುಕೊಂಡು ಎಸಿಬಿ ಪೊಲೀಸರು ಒಟ್ಟು ಐದು ಸ್ಥಳಗಳಲ್ಲಿ ದಾಳಿ ಮಾಡಿದ್ದಾರೆ
.
- ಕೃಷ್ಣಲಾಲ್-ಸಹಾಯಕ ಅಭಿಯಂತರ, ಸಂಜಯನಗರ, ಬೆಂಗಳೂರಿನ ವಾಸದ ಮನೆ
-ಕೃಷ್ಣಲಾಲ್ -ಸಹಾಯಕ ಅಭಿಯಂತರ- ಈ ಹಿಂದೆ ಕರ್ತವ್ಯ ನಿರ್ವಹಿಸಿದ್ದ ಸಹಾಯಕ ಅಭಿಯಂತರರ ಕಚೇರಿ, ಮಹದೇವಪುರ ವಲಯ
-ಕೃಷ್ಣಲಾಲ್-ಸಹಾಯಕ ಅಭಿಯಂತರ, ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಬಿಡಿಎ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಕಚೇರಿ
-ದೀಪಕ್ ಕುಮಾರ್- ಟೆಲಿಕಾಂ ಲೇಔಟ್, ಭುವನೇಶ್ವರಿನಗರ ವಾಸದ ಮನೆ
-ಅಮಿತ್ ರಿಕಬ್ ಚಂದ್ ಜೈನ್-ಗಾಂಧಿನಗರ, ಬೆಂಗಳೂರಿನ ನಿವಾಸ
-ಅಮಿತ್ ರಿಕಬ್ ಚಂದ್ ಜೈನ್-ಚಿಕ್ಕಪೇಟೆ, ಕಚೇರಿ ದಾಳಿ ನಡೆಸಿದೆ.

English summary
ACB officials conduct raids at Mahadevpura, Sanjaynagar and 6 other places in Bengaluru
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X