ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಸಿಬಿ ದಾಳಿ; 28 ಮನೆ, 16 ನಿವೇಶನದ ಒಡೆಯ ವಾಸುದೇವ್ ಬಂಧನ

|
Google Oneindia Kannada News

ಬೆಂಗಳೂರು, ನವೆಂಬರ್ 28; ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದಾಳಿ ಬಳಿಕ ವಾಸುದೇವ್ ಆರ್. ಎನ್. ಬಂಧಿಸಿದ್ದಾರೆ. 28 ಮನೆ, 16 ನಿವೇಶನ, 5 ಐಷಾರಾಮಿ ಕಾರುಗಳನ್ನು ಹೊಂದಿರುವ ವಾಸುದೇವ ರಾವ್‌ರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಗುರುವಾರ ಎಸಿಬಿ ಅಧಿಕಾರಿಗಳು ರಾಜ್ಯದ 68 ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ಮಾಡಿದ್ದರು. ಆಗ ವಾಸುದೇವ್ ಆರ್. ಎನ್. ಮಾಜಿ ಪ್ರಾಜೆಕ್ಟ್ ಡೈರೆಕ್ಟರ್ (ಯೋಜನಾ ನಿರ್ದೇಶಕರು), ನಿರ್ಮಿತಿ ಕೇಂದ್ರ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಇವರ ನಿವಾಸದ ಮೇಲೂ ದಾಳಿ ನಡೆದಿತ್ತು.

ಇವರಿಗೆ ಸಂಬಂಧಿಸಿದಂತೆ ಈವರೆಗಿನ ತನಿಖೆಯಲ್ಲಿ ಸುಮಾರು 18,20,63,868 ರೂ.ಗಳ ಮೌಲ್ಯದ ಚಿನ್ನದ ಒಡವೆಗಳು, ನಗದು, ವಾಹನಗಳು, ನಿವೇಶನ, ಕಟ್ಟಡ, ಗೃಹಪೋಯೋಗಿ ವಸ್ತುಗಳು, ಭೂಮಿ, ಬ್ಯಾಂಕ್ ಠೇವಣಿ, ಇತ್ಯಾದಿಗಳು ಸಿಕ್ಕಿದೆ ಎಂದು ಶುಕ್ರವಾರ ಎಸಿಬಿ ಹೇಳಿತ್ತು.

Breaking; ಎಸಿಬಿ ದಾಳಿ, ರುದ್ರೇಶಪ್ಪಗೆ ಜೈಲು ವಾಸ! Breaking; ಎಸಿಬಿ ದಾಳಿ, ರುದ್ರೇಶಪ್ಪಗೆ ಜೈಲು ವಾಸ!

ACB Raid Vasudev RN Arrested And Sent For Judicial Custody

ಈಗ ಮತ್ತೊಂದು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಲಾಗಿದೆ. ಆರೋಪಿ ವಾಸುದೇವ್ ಆರ್. ಎನ್. ಕೆಂಗೇರಿ ಉಪನಗರದ ಬೆಥೆಸ್ಡ ಚರ್ಚ್ ಹಿಂಭಾಗ, ಶಾಂತಿ ವಿಲಾಸ್ ಲೇಔಟ್‌, 4ನೇ ಅಡ್ಡ ರಸ್ತೆ, ನಂ 100 ಮನೆಯಲ್ಲಿ ವಾಸವಾಗಿದ್ದರು.

68 ಕಡೆ ಎಸಿಬಿ ದಾಳಿ; ಪತ್ತೆಯಾದ ಅಕ್ರಮ ಆಸ್ತಿಗಳ ವಿವರ 68 ಕಡೆ ಎಸಿಬಿ ದಾಳಿ; ಪತ್ತೆಯಾದ ಅಕ್ರಮ ಆಸ್ತಿಗಳ ವಿವರ

5 ಕಡೆಗಳಲ್ಲಿ ಬಾಡಿಗೆಯ ಉದ್ದೇಶಕ್ಕಾಗಿ ಮನೆಗಳನ್ನು ನಿರ್ಮಾಣ ಮಾಡಿದ್ದಾರೆ. ಒಟ್ಟು 28 ವಾಸದ ಮನೆಗಳನ್ನು ಕಟ್ಟಿದ್ದಾರೆ. 16 ನಿವೇಶನಗಳನ್ನು ಹೊಂದಿದ್ದಾರೆ. ದಾಳಿಯ ವೇಳೆ ಸ್ಕೋಡ ಆಕ್ಟೋವಿಯಾ, ವೋಲ್ವೊ, ಬೆನ್ಜ್, ನೆಕ್ಸಾನ್ ಹಾಗೂ ಇನ್ನೋವಾ ಕಂಪನಿಯ 5 ಐಷಾರಾಮಿ ಕಾರುಗಳು ಪತ್ತೆಯಾಗಿವೆ.

68 ಸ್ಥಳಗಳಲ್ಲಿ ಎಸಿಬಿ ದಾಳಿ; ಸಿಕ್ಕಿದ ಹಣ, ಆಸ್ತಿಯ ಮಾಹಿತಿ 68 ಸ್ಥಳಗಳಲ್ಲಿ ಎಸಿಬಿ ದಾಳಿ; ಸಿಕ್ಕಿದ ಹಣ, ಆಸ್ತಿಯ ಮಾಹಿತಿ

ಚಿನ್ನದ ಒಡವೆಗಳು 925.69 ಗ್ರಾಂ, ಬೆಳ್ಳಿಯ ಸಾಮಾನುಗಳು 9 ಕೆಜಿ, ರೂ. 17,27,200 ನಗದು ಹಣ, ವಿವಿಧ ಬ್ಯಾಂಕ್‌ ಖಾತೆಗಳಲ್ಲಿ 1,31,00,000 ರೂ. ಹಣ ದೊರಕಿದೆ. ಒಟ್ಟು ಆಸ್ತಿ ಮೌಲ್ಯ 19,70,63,868 ರೂ. ಎಂದು ಅಂದಾಜಿಸಲಾಗಿದೆ. ಆರೋಪಿತರ ಅಕ್ರಮ ಆಸ್ತಿಯ ಪ್ರಮಾಣ ಶೇ 879.53 ಕಂಡುಬಂದಿದೆ.

ಸ್ಥಿರ ಆಸ್ತಿಗಳ ಅಂದಾಜು ಮೌಲ್ಯ ರೂ. 26,78,29,960 ಹಾಗೂ ಚರಾಸ್ಥಿ ಮೌಲ್ಯ ಅಂದಾಜು 3,87,09,908 ರೂ. ಎಂದು ಅಂದಾಜಿಸಿದೆ. ಆರೋಪಿತರ ಒಟ್ಟು ಆಸ್ತಿ ಮೌಲ್ಯ 30,65,39,868 ರೂ. ಗಳು. ಆಕ್ರಮ ಆಸ್ತಿ 29,15,39,868 ರೂ.ಗಳಾಗಿದ್ದು ಅಕ್ರಮ ಆಸ್ತಿ ಮೌಲ್ಯ ಶೇಕಡಾ 1408 ರಷ್ಟಾಗಿದೆ ಎಂದು ಎಸಿಬಿ ಹೇಳಿದೆ.

ಅರೋಪಿತ ಬಳಿ ಇನ್ನೂ ಹೆಚ್ಚಿನ ಅಕ್ರಮ ಆಸ್ತಿಯು ಕಂಡುಬರುವ ಸಾಧ್ಯತೆ ಇದ್ದು, ಆರೋಪಿತರ ವಿರುದ್ಧ ತನಿಖೆಯನ್ನು ಮುಂದುವರೆಸಲಾಗಿದೆ. ರಾಮನಗರ ಜಿಲ್ಲೆಯ ಮಾಗಡಿ ತಾಲೂಕು ಕಸಬಾ ಹೋಬಳಿ ಗೊಲ್ಲರಪಾಳ್ಯದಲ್ಲಿ 6-20 ಎಕರೆ ಜಮೀನು, ರಾಮನಗರ ತಾಲೂಕಿನ ಪಾಲಬೋವಿದೊಡ್ಡ ಗ್ರಾಮದಲ್ಲಿ 0.10 ಗುಂಟೆ ಜಮೀನು ಪತ್ತೆಯಾಗಿದೆ.

ಜಮೀನು; ಆರೋಪಿತರು ತನ್ನ ಮತ್ತು ಮಗ ಮನೋಹರ ಹೆಸರಿಗೆ ಜಂಟಿಯಾಗಿ ಖರೀದಿಸಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೊಡ್ಡ ಬಳ್ಳಾಪುರ ತಾಲೂಕು, ಕರೆಹಳ್ಳಿ ಗ್ರಾಮದ ವಿವಿಧ ಸರ್ವೆ ನಂಬರ್‌ಗಳಲ್ಲಿನ ಒಟ್ಟು 11 ಎಕರೆ 37 ಗುಂಟೆ ಜಮೀನು.

ಮಗ ನರೇಂದ್ರ ಹೆಸರಿನಲ್ಲಿ ಖರೀದಿಸಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕು ಮಾಕನಕುಪ್ಪೆ ಗ್ರಾಮದಲ್ಲಿ 13/3 ರಲ್ಲಿನ 1-38 ಎಕರೆ ಜಮೀನು ಪತ್ತೆಯಾಗಿದೆ.

ಆರೋಪಿತರ ಅವರ ಕುಟುಂಬ ಸದಸ್ಯರ ಸ್ಥಿರ ಆಸ್ತಿಗಳ ಅಂದಾಜು ಮೌಲ್ಯ ರೂ. 27,33,29,960 ಹಾಗೂ ಚರಾಸ್ಥಿ ಮೌಲ್ಯ ಅಂದಾಜು ರೂ.3,87,09,908 ಗಳೆಂದು ಕಂಡು ಬಂದಿದ್ದು, ಆರೋಪಿತರ ಒಟ್ಟು ಆಸ್ತಿಯು ರೂ. 31,20,39,868ಗಳೆಂದು ಕಂಡು ಬಂದಿದ್ದು, ಅಕ್ರಮ ಆಸ್ತಿಯು ರೂ. 29,70,39,868 ಗಳಾಗಿದ್ದು, ಅಕ್ರಮ ಆಸ್ತಿಯ ಪ್ರಮಾಣವು ಶೇಕಡ 1434 ರಷ್ಟಾಗಿರುತ್ತದೆ.

ಆರೋಪಿತರು ಇನ್ನೂ ಹೆಚ್ಚಿನ ಆಸ್ತಿಯನ್ನು ಹೊಂದಿರುವ ಶಂಕೆ ಇದ್ದು, ಆರೋಪಿತರ ವಿಚಾರಣೆಯಲ್ಲಿ ಹೆಚ್ಚಿನ ಆಸ್ತಿಗಳ ಮಾಹಿತಿಯನ್ನು ನಿಡದೇ ಇರುವ ಕಾರಣ ಹಾಗೂ ತನಿಖೆಯಲ್ಲಿ ಸಹಕರಿಸದೇ ಇರುವ ಕಾರಣ ಆರೋಪಿಯನ್ನು ಬಂಧಿಸಲಾಗಿದ್ದು, ಮುಂದಿನ ತನಿಖೆ ಕೈಗೊಳ್ಳಲಾಗಿದೆ.

English summary
After the raid ACB arrested Vasudev R. N. the former project director of nirmithi kendra in Bengaluru rural district. Accused sent to judicial custody.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X