ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ನಿಂದ ಸಾಲ ಪಡೆದವರಿಗೆ ನಡುಕ

|
Google Oneindia Kannada News

ಬೆಂಗಳೂರು, ಜೂನ್ 22 : ಶ್ರೀ ಗುರುರಾಘವೇಂದ್ರ ಸಹಕಾರ ಬ್ಯಾಂಕ್‌ ಮೇಲೆ ಜೂನ್ 18ರಂದು ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದರು. ಬ್ಯಾಂಕ್‌ನಿಂದ ಕೋಟ್ಯಾಂತರ ರೂಪಾಯಿ ಸಾಲವನ್ನು ಪಡೆದ ವ್ಯಕ್ತಿಗಳ ಮನೆಗಳ ಮೇಲೆ ಈಗ ದಾಳಿ ನಡೆದಿದೆ.

Recommended Video

Galwan Faceoff : ಭಾರತ ಸೇನೆಗೆ ಬಂತು ಸೂಪರ್ ಪವರ್ | Full power For IAF & Army | Oneindia Kannadda

ಸೋಮವಾರ ಭ್ರಷ್ಟಾಚಾರ ನಿಗ್ರಹದಳದ ಅಧಿಕಾರಿಗಳು ಯಶವಂತಪುರ, ಹೆಚ್. ಬಿ. ಆರ್. ಲೇಔಟ್ ಸೇರಿದಂತೆ ಬೆಂಗಳೂರು ನಗರದ ವಿವಿಧ ಕಡೆಗಳಲ್ಲಿ ದಾಳಿ ಮಾಡಿದ್ದಾರೆ. ಬ್ಯಾಂಕ್‌ನಿಂದ ಸಾಲ ಪಡೆದವರ ಮನೆಯಲ್ಲಿ ತಪಾಸಣೆ ನಡೆಸಿದ್ದಾರೆ.

ಗುರುರಾಘವೇಂದ್ರ ಸಹಕಾರ ಬ್ಯಾಂಕ್‌ ಮೇಲೆ ಎಸಿಬಿ ದಾಳಿಗುರುರಾಘವೇಂದ್ರ ಸಹಕಾರ ಬ್ಯಾಂಕ್‌ ಮೇಲೆ ಎಸಿಬಿ ದಾಳಿ

ಯಶವಂತಪುರದ ನಿವಾಸಿಯೊಬ್ಬರು ಬ್ಯಾಂಕ್‌ನಿಂದ 140 ಕೋಟಿ ಸಾಲ ಪಡೆದಿದ್ದರು. ಹೆಚ್‌. ಬಿ. ಆರ್. ಲೇಔಟ್ ನಿವಾಸಿಯೊಬ್ಬರು 150 ಕೋಟಿ, 40 ಕೋಟಿ ಸಾಲ ಪಡೆದ ಮತ್ತೊಬ್ಬರ ಮನೆಯ ಮೇಲೂ ದಾಳಿ ಮಾಡಲಾಗಿದೆ.

ಆರ್‌ಬಿಐ ಜೊತೆ ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ ಸಭೆ ಆರ್‌ಬಿಐ ಜೊತೆ ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ ಸಭೆ

ACB Raid On People Who Taken Loan From Guru Raghavendra Bank

ಶ್ರೀ ಗುರುರಾಘವೇಂದ್ರ ಸಹಕಾರ ಬ್ಯಾಂಕ್‌ನಲ್ಲಿ ಹಲವಾರು ಅಕ್ರಮ ನಡೆದಿದೆ ಎಂಬ ಆರೋಪವಿದೆ. ಇದೇ ಮೊದಲ ಬಾರಿಗೆ ಬ್ಯಾಂಕ್‌ನಿಂದ ಸಾಲ ಪಡೆದವರ ಮನೆಗಳ ಮೇಲೆ ದಾಳಿ ಮಾಡಲಾಗಿದೆ. ಇದರಿಂದಾಗಿ ಸಾಲ ಪಡೆದವರಿಗೆ ನಡುಕ ಶುರುವಾಗಿದೆ.

ಮುಖೇಶ್ ಅಂಬಾನಿ RIL ಈಗ ಸಂಪೂರ್ಣ ಸಾಲ ಮುಕ್ತ ಸಂಸ್ಥೆ! ಮುಖೇಶ್ ಅಂಬಾನಿ RIL ಈಗ ಸಂಪೂರ್ಣ ಸಾಲ ಮುಕ್ತ ಸಂಸ್ಥೆ!

ಜೂನ್ 18ರಂದು ಎಸಿಬಿ ಅಧಿಕಾರಿಗಳು ಬಸವನಗುಡಿಯಲ್ಲಿರುವ ಬ್ಯಾಂಕ್ ಮೇಲೆ ದಾಳಿ ಮಾಡಿದ್ದರು. ಹಲವಾರು ದಾಖಲೆ ಪತ್ರಗಳನ್ನು ವಶಕ್ಕೆ ಪಡೆದಿದ್ದರು. ಈ ದಾಖಲೆಗಳ ಆಧಾರದ ಮೇಲೆ ಇಂದು ಸಾಲ ಪಡೆದವರ ಮನೆ ಮೇಲೆ ದಾಳಿ ಮಾಡಲಾಗಿದೆ.

ಆರ್‌ಬಿಐ ನಿಯಮಗಳನ್ನು ಪಾಲನೆ ಮಾಡದೆ ಶ್ರೀ ಗುರುರಾಘವೇಂದ್ರ ಬ್ಯಾಂಕ್ 1,700 ಕೋಟಿ ರೂ. ಸಾಲ ನೀಡಿದೆ ಎಂಬ ಆರೋಪವಿದೆ. ಬ್ಯಾಂಕ್ ಅವ್ಯವಹಾರದ ಕುರಿತು ಕರ್ನಾಟಕ ಹೈಕೋರ್ಟ್‌ನಲ್ಲಿಯೂ ಠೇವಣಿದಾರರು ದೂರು ಸಲ್ಲಿಸಿದ್ದಾರೆ.

English summary
The Anti Corruption Bureau police have conducted simultaneous raids on the house of people who taken loan form Sri Guru Raghavendra Sahakara Bank, Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X