Breaking: ಭೋವಿ ಅಭಿವೃದ್ಧಿ ನಿಗಮದ ಎಂಡಿ ಡಾ.ನಾಗರಾಜಪ್ಪ ಮನೆ, ಕಚೇರಿ ಮೇಲೆ ಎಸಿಬಿ ದಾಳಿ
ಬೆಂಗಳೂರು, ಮೇ 19: ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ. ನಾಗರಾಜಪ್ಪ ನಿವಾಸ, ಕಚೇರಿ ಸೇರಿದಂತೆ ಏಕಕಾಲಕ್ಕೆ 5 ಕಡೆ ಎಸಿಬಿ ಅಧಿಕಾರಿಗಳು ಏಕಾಏಕಿ ದಾಳಿ ನಡೆಸಿದ್ದಾರೆ.
NEP ಎಡವಟ್ಟು: ಪದವಿ 2 ಸೆಮಿಸ್ಟರ್ ದಾಖಲಾತಿ ಶುಲ್ಕ ಪಾವತಿಗೆ ಕೊನೆ ದಿನ
ಭ್ರಷ್ಟಾಚಾರದ ದೂರು ಬಂದ ಹಿನ್ನೆಲೆ ಬೆಂಗಳೂರು ವಿಜಯನಗರದ ಎಂಸಿ ಲೇಔಟ್ನಲ್ಲಿರುವ ಮನೆ ಸೇರಿ ನಾಗರಾಜಪ್ಪ ಸಹೋದರರ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆೆಸಿ ದಾಖಲೆಗಳ ಪರಿಶೀಲನೆ ನಡೆಸಿದರು.
ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ. ನಾಗರಾಜಪ್ಪ ಸಂಬಂಧಿಕರಷ್ಟೇ ಅಲ್ಲದೇ ಸನ್ ಫ್ಲವರ್ ಅಪಾರ್ಟ್ಮೆಂಟ್ ನಿವಾಸ, ಹೊಸಕೋಟೆ ತಾಲೂಕು ಬೆನ್ನಿಗಾನಹಳ್ಳಿಯಲ್ಲಿನ ಅವರ ಮನೆ ಹಾಗೂ ಚನ್ನಪಟ್ಟಣ ತಾಲೂಕಿನ ಹಾರೋಕೊಪ್ಪೆಯಲ್ಲಿರುವ ಸಂಬಂಧಿಕರ ಮನೆಗಳ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದರು.

ಎಸಿಬಿ ದಾಳಿ ವೇಳೆ ಸಿಕ್ಕಿದ್ದೇನು?: ಎಸಿಬಿ ಅಧಿಕಾರಿಗಳು ನಡೆಸಿದ ದಾಳಿ ವೇಳೆ ಹಣದ ಜೊತೆಗೆ ಚಿನ್ನಾಭರಣ ಹಾಗೂ ವಿವಿಧಡೆ ಗಳಿಸಿರುವ ಸಂಪತ್ತಿನ ಬಗ್ಗೆ ಮಾಹಿತಿ ಸಿಕ್ಕಿದ್ದು, ಈ ಕುರಿತು ತನಿಖೆ ಕೈಗೊಳ್ಳಲಾಗಿದೆ ಎಂದು ಎಸಿಬಿ ಮೂಲಗಳು ತಿಳಿಸಿವೆ.