ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: ಭಾರಿ ಹಗರಣ ಗುಮಾನಿ ಐದು ಕಡೆ ಎಸಿಬಿ ದಾಳಿ

|
Google Oneindia Kannada News

ಬೆಂಗಳೂರು, ಮೇ 04: ನಗರದಲ್ಲಿ ಶನಿವಾರ ಬೆಳಿಗ್ಗೆ ಐದು ಕಡೆ ಎಸಿಬಿ ದಾಳಿ ನಡೆದಿದೆ. ಅಭಿವೃದ್ಧಿ ಹಕ್ಕು ವರ್ಗಾವಣೆ (ಟಿಡಿಆರ್‌) ಹಗರಣಕ್ಕೆ ಸಂಬಂಧಪಟ್ಟಂತೆ ಈ ದಾಳಿ ನಡೆದಿದೆ ಎನ್ನಲಾಗಿದೆ.

ಸರ್ಕಾರಕ್ಕೆ ಹಣ ವಂಚಿಸಿದ ಗುಮಾನಿಯ ಮೇಲೆ ರತನ್ ಲಾಲ್, ಅಮಿತ್ ಬೋಳಾರ್, ಕೆ ಗೌತಮ್, ಮುನಿರಾಜಪ್ಪ ಎಂಬುವರ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆದಿದೆ.

ತಿಪಟೂರು ಕೋರ್ಟ್‌ನಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ ಎಸಿಬಿ ಬಲೆಗೆ!ತಿಪಟೂರು ಕೋರ್ಟ್‌ನಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ ಎಸಿಬಿ ಬಲೆಗೆ!

ಬಿಬಿಎಂಪಿ ಹಾಗೂ ಬಿಡಿಎಯಿಂದ ವಾಲ್ ಮಾರ್ಕ್ ಕಂಪನಿ ಅಕ್ರಮವಾಗಿ ಟಿಡಿಆರ್ ಪಡೆದಿತ್ತು ಎನ್ನಲಾಗಿದೆ. ಹೀಗಾಗಿ ವಾಲ್ ಮಾರ್ಕ್ ಕಂಪನಿ ಮಾಲೀಕ ರತನ್ ಲಾಲ್ ಕಚೇರಿ ಹಾಗೂ ನಿವಾಸಗಳ ಮೇಲೆ ದಾಳಿ ನಡೆಸಲಾಗಿದೆ. ಎಸ್‌ಪಿ, ಎಸಿಪಿ ಮತ್ತು ಐದು ಡಿವೈಎಸ್‌ಪಿಗಳ ತಂಡ ಈ ದಾಳಿ ನಡೆಸಿದೆ.

ACB raid on five places of Bengaluru doubting big scam

ಬೆಂಗಳೂರು : ಆಟೋ ಚಾಲಕನ ಮನೆ ಮೇಲಿನ ಐಟಿ ದಾಳಿಗೆ ಟ್ವಿಸ್ಟ್!ಬೆಂಗಳೂರು : ಆಟೋ ಚಾಲಕನ ಮನೆ ಮೇಲಿನ ಐಟಿ ದಾಳಿಗೆ ಟ್ವಿಸ್ಟ್!

ಇಂದಿರಾನಗರ, ಕೆಆರ್ ಪುರ ಹಾಗೂ ಹೆಚ್ಎಎಲ್ ನಲ್ಲಿ, ವಾಲ್ ಮಾರ್ಕ್ ಕಂಪನಿ ಸೇರಿದಂತೆ ಒಟ್ಟು ಐದು ಕಂಪನಿಗಳ ಮೇಲೆ ದಾಳಿ ನಡೆದಿದೆ. ರೆಸಿಡೆನ್ಸಿ ರಸ್ತೆಯಲ್ಲಿ ರತನ್ ಲಾಲ್ ನಿವಾಸ, ಹಾಗೂ ಎಚ್ಎಎಲ್ ಬಳಿಯಿರುವ ಅವರ ಕಚೇರಿ ಮೇಲೆ ಎಸಿಬಿ ದಾಳಿ ನಡೆಸಿದೆ.

English summary
ACB raids on five people in Bengaluru including Rathan Lal a TDR scam accused. a big team of police officers conducted raid.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X