ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ಎಸಿಬಿ ದಾಳಿ: 3 ಅಧಿಕಾರಿಗಳ ಬಳಿ ಇದ್ದ ಆಸ್ತಿಯೆಷ್ಟು?

ಬೆಂಗಳೂರಿನಲ್ಲಿ ಮೂರು ಸರಕಾರಿ ಅಧಿಕಾರಿಗಳ ಮೇಲೆ ಗುರುವಾರ ಬೆಳಗ್ಗೆ ಎಸಿಬಿ ದಾಳಿ ನಡೆಸಿದ್ದು ಅವರು ಹೊಂದಿರುವ ನಿವೇಶನ, ವಾಹನ, ಆಸ್ತಿ, ಮನೆ, ಚಿನ್ನಾಭರಣಗಳ ಪೂರ್ಣ ವಿವರ ಇಲ್ಲಿದೆ.

By Ananthanag
|
Google Oneindia Kannada News

ಬೆಂಗಳೂರು, ಡಿಸೆಂಬರ್ 29: ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಮೂರು ಜನ ಸರ್ಕಾರಿ ಅಧಿಕಾರಿ ಮನೆ, ಕಚೇರಿಯ ಮೇಲೆ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ದಾಳಿ ನಡೆಸಿದ್ದು, ಅಧಿಕಾರಿಗಳ ಆಸ್ತಿ ಗಳಿಕೆ ಮತ್ತು ಅಕ್ರಮ ಹಣ ಸೇರಿದಂತೆ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ ಅದರ ಪೂರ್ಣ ಪಾಠ ಇಲ್ಲಿದೆ.

ಬೆಂಗಳೂರು ಗ್ರಾಮಾಂತ ಜಿಲ್ಲೆಯ ಭೂದಾಖಲೆಗಳ ಉಪನಿರ್ದೇಶಕ ಇ. ಪ್ರಕಾಶ್ ಅವರ ಬಸವೇಶ್ವರ ನಗರದಲ್ಲಿರುವ ನಿವಾಸದಲ್ಲಿ ಆಸ್ತಿ ಮತ್ತು ದಾಖಲೆಗಳ ಪರಿಶೀಲನೆ ನಡೆಸಲಾಯಿತು. ನಂತರ ಬನಶಂಕರಿಯಲ್ಲಿರುವ ಬಿಬಿಎಂಪಿ ಕಾರ್ಯ ನಿರ್ವಾಹಕ ಎಂಜಿನಿಯರ್ ಬಿ.ಆರ್. ಮುದ್ದುರಾಜು ಅವರ ಮನೆ ಮತ್ತು ಕಚೇರಿಯಲ್ಲಿ ಆಸ್ತಿ ದಾಖಲೆಗಳನ್ನು ತಪಾಸಣೆ ಮಾಡಲಾಯಿತು[ಬೆಂಗಳೂರಿನಲ್ಲಿ 3ಕಡೆ ಎಸಿಬಿ ದಾಳಿ, ದಾಖಲೆ ಪರಿಶೀಲನೆ]

ಬಳಿಕ ಮಹಾಲಕ್ಷ್ಮೀ ಪುರಂ ನಲ್ಲಿ ವಾಸವಿರುವ ನಗರ ಕೈಗಾರಿಕಾಭಿವೃದ್ಧಿ ಜಂಟಿ ನಿರ್ದೇಶಕ ಜಿ. ನಾಗರಾಜು ಅವರ ಕಚೇರಿ ಮತ್ತು ಮನೆಯಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು ಕೋಟ್ಯಂತರ ಮೌಲ್ಯದ ಆಸ್ತಿ, ನಗದು, ಚಿನ್ನಾಭರಣ ಗಳನ್ನು ವಶಪಡಿಸಿಕೊಂಡಿದ್ದಾರೆ.

acb

ಭೂ ದಾಖಲೆಗಳ ಉಪನಿರ್ದೇಶಕ ಇ. ಪ್ರಕಾಶ್ ಮನೆ ಪ್ರಕಾಶಗೊಂಡ ಗಳಿಕೆಯಿಷ್ಟು?

* ಬೆಂಗಳೂರಿನ ಕಾಮಾಕ್ಷಿಪಾಳ್ಯದಲ್ಲಿ 1 ನಿವೇಶನ ಮತ್ತು 3 ಅಂತಸ್ತಿನ ಮನೆ

* ಬೆಂಗಳೂರು ಉತ್ತರ ತಾಲ್ಲೂಕಿನ ದಾಸನಪುರ ಹೋಬಳಿಯಲ್ಲಿ 2 ಗುಂಟೆ ಕೃಷಿ ಭೂಮಿ

* ಹೇರೋಹಳ್ಳಿಯಲ್ಲಿರುವ ಬಿ.ಇ.ಎಲ್ ಲೇಔಟ್‌ನಲ್ಲಿ 2 ನಿವೇಶನಗಳು

* ಮಾಗಡಿಯ ಕನ್ನಸಂದ್ರ ಗ್ರಾಮದಲ್ಲಿ 2 ಎಕರೆ ಕೃಷಿ ಭೂಮಿ ಮತ್ತು ಕುದೂರು ಗ್ರಾಮದಲ್ಲಿ 23. 1/2 ಗುಂಟೆ ಕೃಷಿ ಭೂಮಿ

* ಒಂದು ದ್ವಿಚಕ್ರ ವಾಹನ, ವಿವಿಧ ಬ್ಯಾಂಕ್‌ಗಳಲ್ಲಿ ನಾಲ್ಕು ಸುರಕ್ಷಿತ ಠೇವಣಿ ಲಾಕರ್ ಗಳನ್ನು ಹೊಂದಿದ್ದು, ಪರೀಶಿಲನೆ ನಡೆಯಬೇಕಿದೆ.

ಬಿಬಿಎಂಪಿ ಕಾರ್ಯ ನಿರ್ವಾಹಕ ಎಂಜಿನಿಯರ್ ಬಿ.ಆರ್. ಮುದ್ದುರಾಜು ಗಳಿಕೆಯ ಮುದ್ದಾದ ವಿವರ
* ಬೆಂಗಳೂರು ನಗರದ ವಿಶ್ವೇಶ್ವರಯ್ಯ ಬಡಾವಣೆಯಲ್ಲಿ 1 ನಿವೇಶನ, ತಾವರೆಕೆರೆಯ ಎಸ್.ಎಲ್.ಎನ್ ಸಿಟಿಯಲ್ಲಿ 1 ನಿವೇಶನ, ವಡ್ಡರಪಾಳ್ಯದಲ್ಲಿ 1 ನಿವೇಶನ

* ಮಾಗಡಿ ತಾಲ್ಲೂಕಿನಲ್ಲಿ 4 ಎಕರೆ ಕೃಷಿ ಭೂಮಿ, ಸಾತನೂರು ಗ್ರಾಮದಲ್ಲಿ 4 ಎಕರೆ 9 ಗುಂಟೆ ಕೃಷಿ ಭೂಮಿ

* ರಾಮನಗರದಲ್ಲಿ 4 ಎಕರೆ ಕೃಷಿ ಭೂಮಿ

* ಬನಶಂಕರಿಯಲ್ಲಿ 2 ನಿವೇಶನಗಳು ಹಾಗೂ 3 ಅಂತಸ್ತಿನ ಮನೆ

* 2 ಕಾರುಗಳು, 1 ದ್ವಿಚಕ್ರ ವಾಹನ

* ನಗದು ಮತ್ತು ಬ್ಯಾಂಕ್ ಠೇವಣಿ ರೂ.20,೦೦,೦೦೦, 1.9 ಕೆಜಿ ಬಂಗಾರದ ಆಭರಣಗಳು, ಬೆಳ್ಳಿ ವಸ್ತುಗಳು ದೊರೆತಿವೆ.

ಬೆಂಗಳೂರು ಕೈಗಾರಿಕಾಭಿವೃದ್ಧಿ, ವಿಸ್ತರಣಾಧಿಕಾರಿ ಜಂಟಿ ನಿರ್ದೇಶಕ ಜಿ. ನಾಗರಾಜು ಮಾಡಿರುವ ಆಸ್ತಿ ವಿಸ್ತರಣೆ

* ಚಿತ್ರದುರ್ಗದಲ್ಲಿ 33 ಎಕರೆ ಕೃಷಿ ಭೂಮಿ, ತುಮಕೂರಿನ ಶಿರಾದಲ್ಲಿ 21 ಎಕರೆ ಮತ್ತೊಂದೆಡೆ 19 ಎಕರೆ 36 ಗುಂಟೆ ಕೃಷಿ ಭೂಮಿ

* ಬೆಂಗಳೂರು ಗ್ರಾಮಾಂತರ ಜಿಲ್ಲೆ ಚನ್ನಾದೇವಿ ಅಗ್ರಹಾರದಲ್ಲಿ 34 ಗುಂಟೆ, ಹೊನ್ನಾವರ ಗ್ರಾಮದಲ್ಲಿ 37 ಗುಂಟೆ ಕೃಷಿ ಭೂಮಿ

* ಇಸ್ತೂರು ಗ್ರಾಮದಲ್ಲಿ 38 ಗುಂಟೆ, ಹೊನ್ನಾವರ ಗ್ರಾಮದಲ್ಲಿ 29 ಗುಂಟೆ, ಮತ್ತೊಂದೆಡೆ 4 ಎಕರೆ 4 ಗುಂಟೆ ಕೃಷಿ ಭೂಮಿ, ವಿವಿಧೆಡೆ 2 ಎಕರೆ 32 ಗುಂಟೆ ಹಾಗೂ 8 ಗುಂಟೆ ಕೃಷಿ ಭೂಮಿ

* ಇಸ್ತೂರು ಗ್ರಾಮದ ಮತ್ತೊಂದೆಡೆ 1 ಎಕರೆ 11 ಗುಂಟೆ ಭೂಮಿ ಹಾಗೂ ತೋಟದ ಮನೆ

* ತುಮಕೂರಿನ ಶಿರಾದಲ್ಲಿ 10 ಎಕರೆ ಕೃಷಿ ಭೂಮಿ ಹಾಗೂ 1 ತೋಟದ ಮನೆ, ಮತ್ತೊಂದೆಡೆ ಒಂದು ತೋಟದ ಮನೆ

* ಚಿತ್ರದುರ್ಗದ ಹಿರಿಯೂರು ತಾಲ್ಲೂಕಿನಲ್ಲಿ 1 ತೋಟದ ಮನೆ

* ಇಸ್ತೂರಿನಲ್ಲಿ ಒಂದು ವಾಸದ ಮನೆ. 1 ಮಾರುತಿ ಆಲ್ಟೋ ಕಾರು ಇನ್ನು ಈ ಅಧಿಕಾರಿಗಳು ಎಲ್ಲಾದರೂ ಅಕ್ರಮಗಳಿಕೆ ಮಾಡಿ ಮರೆ ಮಾಚಿದ್ದಾರೆಯೇ ಎಂದು ಪರಿಶೀಲನೆಯಲ್ಲಿ ಎಸಿಬಿ ಅಧಿಕಾರಿಗಳು ತೊಡಗಿದ್ದಾರೆ.

English summary
Anti corruption bureau officers raid on three state government officers on coruuption allegation on Thursday.BBMP Executive Engineer B.R. Mudduraju, Director of the Bangalore Rural land record E. Prakash,Bangalore Rural Industrial Joint Director G. Nagraju House, and office raided.his officers lot of property
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X