ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎರಡು ಕಡೆ ಎಸಿಬಿ ದಾಳಿ: ಅಕ್ರಮ ಹಣ ಪತ್ತೆ, ಮಧ್ಯವರ್ತಿಗಳ ಬಂಧನ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 30: ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಪೊಲೀಸರು ಸೋಮವಾರ ಬೆಂಗಳೂರಿನ ಎರಡು ಕಡೆಗಳಲ್ಲಿ ದಾಳಿ ನಡೆಸಿದ್ದಾರೆ.

ಬೆಂಗಳೂರು ನಗರದ ಕಾನೂನು ಮಾಪನ ಶಾಸ್ತ್ರ ಇಲಾಖೆಯ ಕಚೇರಿಗಳಲ್ಲಿ ಕಾನೂನು ಮಾಪನ ಶಾಸ್ತ್ರ ಸಹಾಯಕ ನಿಯಂತ್ರಕರು ಮತ್ತು ಕಾನೂನು ಮಾಪನ ನಿರೀಕ್ಷಕರು ಭ್ರಷ್ಟಾಚಾರದಲ್ಲಿ ತೊಡಗಿರುವ ಬಗ್ಗೆ ಬಂದಿರುವ ದೂರುಗಳ ಮೇರೆಗೆ ಪೊಲೀಸ್ ಅಧೀಕ್ಷಕರು ಮತ್ತು ಭ್ರಷ್ಟಾಚಾರ ನಿಗ್ರಹ ದಳದ ನೇತೃತ್ವದಲ್ಲಿ ದಾಳಿ ನಡೆಸಲಾಯಿತು.

ಭ್ರಷ್ಟಾಚಾರ ಆರೋಪ; ಕುಂದಾಪುರ ಉಪವಿಭಾಗಾಧಿಕಾರಿ ಮನೆ ಮೇಲೆ ಎಸಿಬಿ ದಾಳಿಭ್ರಷ್ಟಾಚಾರ ಆರೋಪ; ಕುಂದಾಪುರ ಉಪವಿಭಾಗಾಧಿಕಾರಿ ಮನೆ ಮೇಲೆ ಎಸಿಬಿ ದಾಳಿ

ವಿ.ವಿ. ಪುರಂನ ಮಿನರ್ವ ವೃತ್ತದಲ್ಲಿರುವ ಕಾನೂನು ಮಾಪನ ನಿರೀಕ್ಷಕರ ಕಚೇರಿ ಮೇಲೆ ದಾಳಿ ನಡೆಸಿದ ಎಸಿಬಿ ಪೊಲೀಸರು ಅಲ್ಲಿ ಖಾಸಗಿ ಮಧ್ಯವರ್ತಿಗಳಿಂದ 7.12 ಲಕ್ಷ ರೂ. ಅಕ್ರಮ ಹಣವನ್ನು ಪತ್ತೆಹಚ್ಚಿದ್ದಾರೆ. ಮಧ್ಯವರ್ತಿಗಳಾದ ಸಿದ್ದಪ್ಪ, ಚಂದ್ರಶೇಖರ, ಯಲ್ಲಪ್ಪ, ನವೀದ್, ಶ್ರೀನಿವಾಸ, ವಾದೂದ್, ಅರ್ಕಲಪ್ಪ, ಪ್ರಕಾಶ್, ಸೆಂಥಿಲ್‍ಕುಮಾರ್, ಶಶಿಕುಮಾರ್ ಹಾಗೂ ಪ್ರಕಾಶ್ ಎಂಬುವವರು ಬಂಧಿಸಲಾಗಿದೆ. ಬಂಧಿತರಿಂದ ನೂರಕ್ಕೂ ಅಧಿಕ ವೆರಿಫಿಕೇಷನ್ ಪ್ರಮಾಣಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

ACB Police Raids Two Places In Bengaluru Several Mediators Arrested

ದಾವಣಗೆರೆಯಲ್ಲಿ ಆರ್ ಟಿಒ ಕಚೇರಿ ಮೇಲೆ ಎಸಿಬಿ ದಾಳಿ; 15 ದಲ್ಲಾಳಿಗಳು ವಶಕ್ಕೆದಾವಣಗೆರೆಯಲ್ಲಿ ಆರ್ ಟಿಒ ಕಚೇರಿ ಮೇಲೆ ಎಸಿಬಿ ದಾಳಿ; 15 ದಲ್ಲಾಳಿಗಳು ವಶಕ್ಕೆ

ಬಸವೇಶ್ವರ ನಗರದ ಮೋದಿ ರಸ್ತೆಯಲ್ಲಿರುವ ಕಾನೂನು ಮಾಪನ ಶಾಸ್ತ್ರ ಇಲಾಖೆಯ ಕಚೇರಿ ಮೇಲೆ ದಾಳಿ ನಡೆಸಿದಾಗ ಮಧ್ಯವರ್ತಿಗಳ ಬಳಿ ನಗದು ಹಣ 2.73 ಲಕ್ಷ ರೂ. ಪತ್ತೆಯಾಗಿದೆ. ಖಾಸಗಿ ಮಧ್ಯವರ್ತಿಗಳಾದ ಚೇತನ್ ಕುಮಾರ್, ಶಿವಕುಮಾರ್, ಗೋಪಾಲಕೃಷ್ಣ, ಹರೀಶ್‌ಬಾಬು, ಪ್ರಮೋದ, ಕುಮಾರ್, ಕೆಂಪಣ್ಣ, ಮಂಜು, ಕಾಂತರಾಜು, ಪದ್ಮನಾಭ್ ಮತ್ತು ವೆಂಕಟೇಶ ಎಂಬುವವರನ್ನು ಬಂಧಿಸಲಾಗಿದೆ. ಪ್ರಕರಣ ಸಂಬಂಧ ತನಿಖೆ ನಡೆಸಲಾಗಿದೆ ಎಂದು ಎಸಿಬಿ ಪೊಲೀಸರು ತಿಳಿಸಿದ್ದಾರೆ.

English summary
ACB police has arrested several mediators and seizes more than Rs 9 Lakh during raid on two offices in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X