ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿದ್ಯುತ್ ಸಂಪರ್ಕಕ್ಕಾಗಿ 10 ಸಾವಿರ ಲಂಚ ಸ್ವೀಕರಿಸಿದ್ದ ಇಂಜಿನಿಯರ್ ಲಕ್ಷ್ಮೀಶ

|
Google Oneindia Kannada News

ಬೆಂಗಳೂರು, ಮಾ. 30: ವಾಟರ್ ಪಂಪ್‌ಸೆಟ್ ಮತ್ತು ಲಿಫ್ಟ್‌ಗಾಗಿ ಹೆಚ್ಚುವರಿ ವಿದ್ಯುತ್ ಸಂಪರ್ಕ ನೀಡಲು ಹತ್ತು ಸಾವಿರ ಲಂಚ ಸ್ವೀಕರಿಸಿ ಸಿಕ್ಕಿಬಿದ್ದಿದ್ದ ಬೆಸ್ಕಾಂ ಇಂಜಿನಿಯರ್ ಮನೆ ಮೇಲೆ ಎಸಿಬಿ ಅಧಿಕಾರಿಗಳು ಬುಧವಾರ ದಾಳಿ ನಡೆಸಿದ್ದಾರೆ.

Breaking: ಕೆಎಎಸ್ ಅಧಿಕಾರಿ ಕೆ. ರಂಗನಾಥ್ ಮನೆ ಮೇಲೆ ಎಸಿಬಿ ದಾಳಿBreaking: ಕೆಎಎಸ್ ಅಧಿಕಾರಿ ಕೆ. ರಂಗನಾಥ್ ಮನೆ ಮೇಲೆ ಎಸಿಬಿ ದಾಳಿ

ಅಕ್ರಮ ಆಸ್ತಿ ಗಳಿಕೆ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಬೆಸ್ಕಾಂ ಉತ್ತರ ವಲಯದ ಕಾರ್ಯನಿರ್ವಾಹಕ ಇಂಜಿನಿಯರ್ ಲಕ್ಷ್ಮೀಶ ವಿರುದ್ಧ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮಾಗಡಿ ರಸ್ತೆಯ ಪ್ರೆಸ್ಟೀಜ್ ವುಡ್ ಅಪಾರ್ಟ್‌ಮೆಂಟ್, ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಮನೆ ಮೇಲೆ ಎಸಿಬಿ ಅಧಿಕಾರಿಗಳು ಶೋಧ ನಡೆಸಿ ಅಕ್ರಮ ಆಸ್ತಿ ಗಳಿಕೆಗೆ ಸಂಬಂಧಿಸಿದಂತೆ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ACB police Raided Bescom Engineer House Who Caught in Bribe Case

ಕಳೆದ ಎರಡು ದಿನಗಳ ಹಿಂದೆ ಬಸವೇಶ್ವರ ನಗರದ ನಿವಾಸಿ ಲಕ್ಷ್ಮೀಶ ಎಂಬುವರು ತಮ್ಮ ಮನೆಯಲ್ಲಿರುವ ಹದಿನೇಳು ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸಲು ಪಂಪ್ ಸೆಟ್ ಕೊರೆದು ಲಿಫ್ಟ್ ಅಳವಡಿಸಿದ್ದರು. ಎಚ್‌.ಟಿ. ವಿದ್ಯುತ್ ಸಂಪರ್ಕವನ್ನು ಎಲ್ ಟಿ ವಿದ್ಯುತ್ ಸಂಪರ್ಕ ಪರಿವರ್ತನೆ ಮಾಡಿ ಹೆಚ್ಚುವರಿ ಮೀಟರ್ ಅಳವಡಿಸುವಂತೆ ಕೋರಿ ಬಸವೇಶ್ವರನಗರ ನಿವಾಸಿ ಬೆಸ್ಕಾಂ ಉತ್ತರ ವಲಯದ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಹೆಚ್ಚುವರಿ ವಿದ್ಯುತ್ ಸಂಪರ್ಕ ಕಲ್ಪಿಸುವ ಸಂಬಂಧ ಹತ್ತು ಸಾವಿರ ರೂಪಾಯಿ ಲಂಚ ನೀಡುವಂತೆ ಲಕ್ಷ್ಮೀಶ ನೇರವಾಗಿ ಬೇಡಿಕೆ ಇಟ್ಟಿದ್ದರು. ಈ ಕುರಿತು ಬಸವೇಶ್ವರ ನಗರ ನಿವಾಸಿ ಎಸಿಬಿ ಬೆಂಗಳೂರು ನಗರ ಘಟಕಕ್ಕೆ ದೂರು ನೀಡಿದ್ದರು.

ACB police Raided Bescom Engineer House Who Caught in Bribe Case

ದೂರನ್ನಾಧರಿಸಿ ಕಾರ್ಯಾಚರಣೆ ನಡೆಸಿದ ಎಸಿಬಿ ಪೊಲೀಸರು, ಮಾ. 28 ರಂದು ಲಂಚ ಸ್ವೀಕರಿಸುತ್ತಿದ್ದ ವೇಳೆ ಲಕ್ಷ್ಮೀಶ ನನ್ನು ಬಂಧಿಸಿದ್ದರು. ಬಂಧನ ವೇಳೆ ಲಂಚದ ಹಣ ವಶ ಪಡಿಸಿಕೊಂಡಿದ್ದರು. ಆ ಬಳಿಕ ವಿಚಾರಣೆ ನಡೆಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಲಕ್ಷ್ಮೀಶ ಅಕ್ರಮ ಆಸ್ತಿ ಗಳಿಕೆ ಮಾಡಿರುವ ಸಂಬಂಧ ಮಾಹಿತಿ ಬಂದ ಬೆನ್ನಲ್ಲೇ ಎಸಿಬಿ ಅಧಿಕಾರಿಗಳು ಬುಧವಾರ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಒಂದು ಅಪಾರ್ಟ್‌ಮೆಂಟ್, ಒಂದು ನಿವೇಶನ, ಚಿನ್ನಾಭರಣ ದಾಳಿ ವೇಳೆ ಸಿಕ್ಕಿದೆ ಎಂದು ತಿಳಿದು ಬಂದಿದೆ.

Recommended Video

ಸಿದ್ದರಾಮಯ್ಯ ಕಾಂಗ್ರೆಸ್ ಬಿಟ್ಟು BJP ಗೆ ಬಂದ್ರೆ ಗೆಲ್ಲೋದು ಗ್ಯಾರೆಂಟಿ... | Oneindia Kannada

English summary
ACB police have raided the home of Bescom engineer Lakshmeesha, who was caught in bribe case know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X