ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking: ಬೆಂಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಉಪತಹಸೀಲ್ದಾರ್ ಎಸಿಬಿ ಬಲೆಗೆ

|
Google Oneindia Kannada News

ಬೆಂಗಳೂರು, ಮೇ,21 : ಬೆಂಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಎಸಿಬಿ ಲಂಚ ಬಾಕ ಅಧಿಕಾರಿಯನ್ನು ಬಲೆಗೆ ಕೆಡವಿದೆ. ಜಿಲ್ಲಾಧಿಕಾರಿ ಮಂಜುನಾಥ್ ಜೊತೆಯಲ್ಲಿ ಕರ್ತ್ಯವ್ಯವನ್ನು ನಿರ್ವಹಿಸುತ್ತಿದ್ದ ಉಪ ತಹಸೀಲ್ದಾರ್ ಮಹೇಶ್ ಮತ್ತು ಕ್ಲರ್ಕ್ ಚಂದ್ರು ಐದು ಲಕ್ಷ ಹಣವನ್ನು ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

ಎಸಿಬಿಯ ಡಿವೈಎಸ್ಪಿ ರವಿಶಂಕರ್ ನೇತೃತ್ವದಲ್ಲಿ ದಾಳಿಯನ್ನು ನಡೆಸಲಾಗಿದೆ. ಆಜಾಂ ಪಾಷ ಎಂದುವವರು ಕೊಟ್ಟ ದೂರಿನ ಮೇರೆಗೆ ಎಸಿಬಿ ಟ್ರಾಪ್ ಮಾಡಿದೆ. ಜಮೀನಿಗೆ ಸಂಬಂಧಿಸಿದಂತೆ ಎಸಿ ನ್ಯಾಯಾಲಯ ತೀರ್ಪು ನೀಡಿದ್ದು ಡಿಸಿ ನ್ಯಾಯಾಲಯಕ್ಕೆ ವರ್ಗಾವಣೆಯಾಗಿರುತ್ತದೆ. ಈ ಕೇಸ್ ಫೈಲ್ ಅನ್ನು ಕ್ಲಿಯರ್ ಮಾಡುವ ಸಲುವಾಗಿ ಹದಿನೈದು ಲಕ್ಷಕ್ಕೆ ಬೇಡಿಕೆ ಇಡಲಾಗಿತ್ತಂತೆ. ಹದಿನೈದು ಲಕ್ಷದ ಪೈಕಿ 5 ಲಕ್ಷವನ್ನು ಲಂಚವಾಗಿ ಸ್ವೀಕರಿಸುವ ವೇಳೆ ಎಸಿಬಿ ಅಧಿಕಾರಿಗಳು ಟ್ರಾಪ್ ಮಾಡಿದ್ದಾರೆ.

Bengaluru: ACB Caught 2 Govt Officials Red Handed while taking bribe of Rs 5 Lakh

ಡಿಮ್ಯಾಂಡ್ ( demand), ವರ್ಕ್ ಪೆಂಡಿಂಗ್( work pending), ಅಕ್ಸೆಪೆಟ್ನ್ಸ್ (acceptancy)ಯ ಆಧಾರದಲ್ಲಿ ಎಸಿಬಿ ತನಿಖೆಯನ್ನು ನಡೆಸುತ್ತಿದೆ. ಸದ್ಯ ಉಪತಹಸೀಲ್ದಾರ್ ಮಹೇಶ್ ಮತ್ತು ಕ್ಲರ್ಕ್ ಚಂದ್ರುವನ್ನು ಎಸಿಬಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ. ಲಂಚ ಪ್ರಕರಣದಲ್ಲಿ ಡಿಸಿ ಮಂಜುನಾಥ್ ರವರ ಪಾತ್ರದ ಬಗ್ಗೆಯು ಪರಿಶೀಲನೆ ನಡೆಸಲಾಗುತ್ತಿದೆ.

English summary
Bengaluru: ACB Caught 2 Govt Officials sub tahsildar and clerk Red Handed while taking bribe of Rs 5 Lakh from Azam Pasha for clearing his land related file.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X