ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಧಾನಸೌಧದಲ್ಲಿ ಹಣ ಪತ್ತೆ : ಎಸಿಬಿಯಿಂದ ಮೋಹನ್ ಬಂಧನ

|
Google Oneindia Kannada News

ಬೆಂಗಳೂರು, ಜನವರಿ 08 : ವಿಧಾನಸೌಧಲ್ಲಿ 25.7 ಲಕ್ಷ ಹಣ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸಿಬಿ ತನಿಖೆ ಆರಂಭವಾಗಿದೆ. ಹಣ ಸಾಗಣೆ ಮಾಡುತ್ತಿದ್ದ ಮೋಹನ್ ಕುಮಾರ್‌ನನ್ನು ಎಸಿಬಿ ಪೊಲೀಸರು ಬಂಧಿಸಿದ್ದಾರೆ.

ವಿಧಾನಸೌಧಲ್ಲಿ ಹಣ ಪತ್ತೆಯಾದ ಪ್ರಕರಣ ತನಿಖೆಯನ್ನು ವಿಧಾನಸೌಧ ಠಾಣೆ ಪೊಲೀಸರು ಎಸಿಬಿಗೆ ವರ್ಗಾವಣೆ ಮಾಡಿದ್ದರು. ಮಂಗಳವಾರ ಸಂಜೆ ಮೋಹನ್ ಮನೆಯಲ್ಲಿ ಮಹಜರು ಮಾಡಿದ ಬಳಿಕ ಎಸಿಬಿ ಪೊಲೀಸರು ಆತನನ್ನು ಬಂಧಿಸಿದ್ದಾರೆ.

 25 ಲಕ್ಷ ಹಣ ಪತ್ತೆ : ಸಿದ್ದರಾಮಯ್ಯ ಭೇಟಿಯಾದ ಪುಟ್ಟರಂಗ ಶೆಟ್ಟಿ 25 ಲಕ್ಷ ಹಣ ಪತ್ತೆ : ಸಿದ್ದರಾಮಯ್ಯ ಭೇಟಿಯಾದ ಪುಟ್ಟರಂಗ ಶೆಟ್ಟಿ

ಮೋಹನ್ ಮನೆಯಲ್ಲಿ ಮಹಜರು ಮಾಡುವಾಗ 2 ಮೊಬೈಲ್‌ಗಳು ಪತ್ತೆಯಾಗಿವೆ. ಮೋಹನ್ ಕಂಪ್ಯೂಟರ್ ಹಾರ್ಡ್‌ ಡಿಸ್ಕ್‌ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮೊಬೈಲ್‌ಗಳಲ್ಲಿನ ಸಂದೇಶಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.

ACB arrest Mohan Kumar on cash seizure case at Vidhana Soudha

ಮೋಹನ್ ಕುಮಾರ್ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ.ಪುಟ್ಟರಂಗ ಶೆಟ್ಟಿ ಅವರ ಕಚೇರಿ ಟೈಪಿಸ್ಟ್. ಮೋಹನ್ ದಾಖಲೆ ಇಲ್ಲದ 25.7 ಲಕ್ಷ ಹಣವನ್ನು ಸಾಗಣೆ ಮಾಡುವಾಗ ಜನವರಿ 4ರ ಶುಕ್ರವಾರ ವಿಧಾನಸೌಧದ ಪಶ್ಚಿಮ ದ್ವಾರದಲ್ಲಿ ಬಂಧಿಸಲಾಗಿತ್ತು.

ಅಕ್ರಮ ಹಣ ಪತ್ತೆ ಪ್ರಕರಣ: ಸಚಿವರ ರಕ್ಷಣೆಗೆ ನಿಂತರಾ ಕೈ ಮುಖಂಡರು?ಅಕ್ರಮ ಹಣ ಪತ್ತೆ ಪ್ರಕರಣ: ಸಚಿವರ ರಕ್ಷಣೆಗೆ ನಿಂತರಾ ಕೈ ಮುಖಂಡರು?

ಮಲ್ಲೇಶ್ವರದ ಸ್ವಿಮ್ಮಿಂಗ್ ಫೂಲ್ ಬಡಾವಣೆ ನಿವಾಸಿ ಮೋಹನ್ ಕುಮಾರ್ ಗುತ್ತಿಗೆ ಆಧಾರದಲ್ಲಿ ಸಚಿವ ಸಿ.ಪುಟ್ಟರಂಗ ಶೆಟ್ಟಿ ಅವರ ಕಚೇರಿಯಲ್ಲಿ ಟೈಪಿಸ್ಟ್‌ ಆಗಿ ಕೆಲಸ ಮಾಡುತ್ತಿದ್ದರು. ಹಣ ಸಾಗಣೆ ಮಾಡುವಾಗ ಸಿಕ್ಕಿಬಿದ್ದಿದ್ದರು.

ವಿಧಾನಸೌಧದಲ್ಲಿ 25.76ಲಕ್ಷ ಹಣ ಪತ್ತೆ, ವ್ಯಕ್ತಿ ವಶಕ್ಕೆವಿಧಾನಸೌಧದಲ್ಲಿ 25.76ಲಕ್ಷ ಹಣ ಪತ್ತೆ, ವ್ಯಕ್ತಿ ವಶಕ್ಕೆ

ವಿಧಾನಸೌಧದಲ್ಲಿ ಹಣ ಸಿಕ್ಕ ಪ್ರಕರಣ ಬೆಳಕಿಗೆ ಬಂದ ನಂತರ ಪ್ರತಿಪಕ್ಷ ಬಿಜೆಪಿ ಮೈತ್ರಿ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿತ್ತು. ಸಚಿವ ಪುಟ್ಟರಂಗ ಶೆಟ್ಟಿ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿತ್ತು.

English summary
The Karnataka Anti-Corruption Bureau (ACB) arrested the Mohan Kumar in connection with the seizure of Rs 25.7 lakh cash at Vidhana Soudha on Friday, January 4, 2019. Mohan Kumar clerk at minister C.Puttarangashetty office.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X