ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತಿರುಪತಿಗೆ ಎಸಿ ಡಬಲ್‌ ಡೆಕ್ಕರ್‌ ಎಕ್ಸ್‌ಪ್ರೆಸ್‌ ರೈಲು

By Ashwath
|
Google Oneindia Kannada News

ತಿರುಪತಿ, ಮೇ.9 : ಕಾಚಿಗುಡ- ಗುಂಟೂರ್‌ ಮತ್ತು ಕಾಚಿಗುಡ- ತಿರುಪತಿ ನಡುವೆ ಇನ್ನು ಮುಂದೆ ಹವಾನಿಯಂತ್ರಿತ ಡಬ್ಬಲ್ ಡೆಕ್ಕರ್ ಸೂಪರ್‌ ಫಾಸ್ಟ್‌ ಎಕ್ಸ್‌ಪ್ರೆಸ್‌ ರೈಲು ‌‌(ಒಂದೇ ಬೋಗಿಯಲ್ಲಿ ಮೇಲೆ ಮತ್ತು ಕೆಳಗೆ ಆಸನಗಳಿರುವ ರೈಲು) ಸಂಚರಿಸಲಿದೆ.

ಪರೀಕ್ಷಾರ್ಥ ಪ್ರಯೋಗದ ಯಶಸ್ಸಿನ ಬಳಿಕ ದಕ್ಷಿಣ ಕೇಂದ್ರ ರೈಲ್ವೆ ಈ ಪ್ರಕಟಣೆ ಹೊರಡಿಸಿದ್ದು ಈ ಎರಡು ರೈಲುಗಳು ಮೇ.13ರಂದು ತನ್ನ ಮೊದಲ ಸಂಚಾರವನ್ನು ಆರಂಭಿಸಲಿದೆ.

ಬೇಸಗೆಯಲ್ಲಿ ಜನರ ಓಡಾಟ ಹೆಚ್ಚುತ್ತಿರುವ ಈ ಹಿನ್ನೆಲೆಯಲ್ಲಿ ಹೊಸ ರೈಲು ಸೇವೆಯನ್ನು ಆರಂಭಿಸಲಾಗಿದೆ. ವಾರಕ್ಕೆ ಎರಡು ಬಾರಿ ಈ ರೈಲು ಸಂಚರಿಸಲಿದ್ದು ಪ್ರಯಾಣಿಕರು ಇಂದಿನಿಂದಲೇ ಟಿಕೆಟ್‌ ಬುಕ್‌ ಮಾಡಬಹುದು ಎಂದು ದಕ್ಷಿಣ ಕೇಂದ್ರ ರೈಲ್ವೆ ತಿಳಿಸಿದೆ.[ಬೆಂಗಳೂರಿನಿಂದ ಶಿರಡಿಗೆ ವಿಶೇಷ ರೈಲು ಯಾತ್ರೆ]

AC Double Decker Trains

ಗುಂಟೂರ್‌ - ಕಾಚಿಗುಡ ನಡುವೆ ಪ್ರತಿ ಗುರುವಾರ ಮತ್ತು ಶುಕ್ರವಾರ ರೈಲು ಸಂಚರಿಸಲಿದೆ. ಬೆಳಗ್ಗೆ 5:30ಕ್ಕೆ ಕಾಚಿಗುಡದಿಂದ ಹೊರಟ ರೈಲು, ಗುಂಟೂರ್‌ಗೆ ಬೆಳಗ್ಗೆ 10:40ಕ್ಕೆ ತಲುಪಲಿದೆ. ಪ್ರತಿ ಗುರುವಾರ ಮತ್ತು ಶುಕ್ರವಾರ ಗುಂಟೂರ್‌ನಿಂದ ಮಧ್ಯಾಹ್ನ 12:45ಕ್ಕೆ ಹೊರಟು, ಸಂಜೆ 5:55ಕ್ಕೆ ಕಾಚಿಗುಡಕ್ಕೆ ತಲುಪಲಿದೆ.[ಭಾರತೀಯ ರೈಲು ಓಡಲು ವಿದೇಶಿ ದುಡ್ಡು]

ಕಾಚಿಗುಡ - ತಿರುಪತಿ ರೈಲು ಕಾಚಿಗುಡದಿಂದ ಪ್ರತಿ ಬುಧವಾರ ಮತ್ತು ಶನಿವಾರ ಬೆಳಗ್ಗೆ 6:45 ಹೊರಡಲಿದ್ದು, ಅದೇ ದಿನ ಸಂಜೆ 6:15ಕ್ಕೆ ತಿರುಪತಿಗೆ ತಲುಪಲಿದೆ.ತಿರುಪತಿ ಕಾಚಿಗುಡ ರೈಲು ಪ್ರತಿ ಗುರುವಾರ ಮತ್ತು ಅದಿತ್ಯವಾರ ಬೆಳಗ್ಗೆ 5:45ಕ್ಕೆ ತಿರುಪತಿಯಿಂದ ಹೊರಟು ಅದೇ ದಿನ ಸಂಜೆ 5.15ಕ್ಕೆ ಕಾಚಿಗುಡ ತಲುಪಲಿದೆ.

English summary
The South Central Railway will introduce two such express trains on Kacheguda- Guntur and Kacheguda-Tirupati routes, as announced in the interim Railway Budget 2014. The maiden service of the first ever double-decker train on this zone will commence at 05:30 hrs on May 13 from Kacheguda to Guntur.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X