ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಫ್ಯಾಷನ್ ತಂತ್ರಜ್ಞಾನ ಶಿಕ್ಷಣ ನೀಡುವುದಾಗಿ ಮೋಸ: ಎಬಿವಿಪಿ ಪ್ರತಿಭಟನೆ

|
Google Oneindia Kannada News

ಬೆಂಗಳೂರು, ಫೆಬ್ರವರಿ 02: 'ವೋಗ್ ಇನ್ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ' ಹೆಸರಿನಲ್ಲಿ ವಿದ್ಯಾರ್ಥಿಗಳನ್ನು ನೊಂದಾಯಿಸಿಕೊಂಡು ಶುಲ್ಕ ಪಡೆದು ಮೋಸ ಮಾಡಿದ ಸಂಸ್ಥೆಯ ವಿರುದ್ಧ ಎಬಿವಿಪಿಯು ಪ್ರತಿಭಟನೆ ನಡೆಸಿದೆ.

ನಿನ್ನೆ ನಗರದ ರಿಚ್ಮಂಡ್ ರಸ್ತೆಯಲ್ಲಿರುವ ವೋಗ್‌ ಇನ್ಸ್ಟಿಟ್ಯೂಟ್‌ನ ಕೇಂದ್ರ ಕಚೇರಿಗೆ ಮುತ್ತಿಗೆ ಹಾಕಿದ ಎಬಿವಿಪಿ ಬೆಳಿಗ್ಗೆ 11 ರಿಂದ ರಾತ್ರಿ 11 ರವರೆಗೆ ಪ್ರತಿಭಟನೆ ನಡೆಸಿತು. ಅಂತಿಮವಾಗಿ ವಿದ್ಯಾರ್ಥಿಗಳ ಶುಲ್ಕ ವಾಪಸ್ ನೀಡುವುದಾಗಿ ವೋಗ್‌ ಇನ್ಸ್ಟಿಟ್ಯೂಟ್‌ನ ಪ್ರಾಂಶುಪಾಲರ ಮಗನಿಂದ ಲಿಖಿತ ದಾಖಲೆ ಪಡೆದುಕೊಂಡಿತು.

ಲೈಟ್ ಹಾಗೂ ಬುಲ್ ಟ್ರಾಲ್ ಫಿಶಿಂಗ್ ವಿರುದ್ಧ ಧರಣಿ ಆರಂಭಿಸಿದ ಮೀನುಗಾರರುಲೈಟ್ ಹಾಗೂ ಬುಲ್ ಟ್ರಾಲ್ ಫಿಶಿಂಗ್ ವಿರುದ್ಧ ಧರಣಿ ಆರಂಭಿಸಿದ ಮೀನುಗಾರರು

ವೋಗ್ ಇನ್ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ ಹೆಸರಿನಲ್ಲಿ ವಿದ್ಯಾರ್ಥಿಗಳನ್ನು ನೊಂದಾಯಿಸಿಕೊಂಡು ರಿಚ್‌ಮಂಡ್ ರಸ್ತೆಯಲ್ಲಿ ತರಗತಿ ನಡೆಸುತ್ತೇವೆ ಎಂದು ಹೇಳಿತ್ತು. ನಂತರ ದೊಡ್ಡಬಳ್ಳಾಪುರದ ಕರಿಯಪ್ಪ ಮ್ಯಾನೆಜ್‌ಮೆಂಟ್‌ ಸಂಸ್ಥೆಯಲ್ಲಿ ತರಗತಿ ನಡೆಸುವುದಾಗಿ ಹೇಳಿತ್ತು.

ABVP protest against Voge fasion institue

ಅದರಂತೆ ದೊಡ್ಡಬಳ್ಳಾಪುರದಲ್ಲಿ ತರಗತಿ ಪ್ರಾರಂಭ ಆದವಾದರೂ ಅಲ್ಲಿ ಸರಿಯಾಗಿ ತರಗತಿಗಳು ನಡೆಯಲಿಲ್ಲ, ವಿದ್ಯಾರ್ಥಿಗಳು ಶುಲ್ಕ ವಾಪಸ್ಸಾತಿಗೆ ಕೇಳಿದರೆ ಆರು ತಿಂಗಳಿನಿಂದಲೂ ಆಡಳಿತ ಮಂಡಳಿ ಸದಸ್ಯರು ಸತಾಯಿಸುತ್ತಲೇ ಇದ್ದರು.

ಬೀರು ಬೇಡ ನೀರು ಕೊಡಿ, ವಿಸ್ಕಿ ಬೇಡ ವಸತಿ ಕೊಡಿ: ಮಹಿಳೆಯರ ಆಗ್ರಹ ಬೀರು ಬೇಡ ನೀರು ಕೊಡಿ, ವಿಸ್ಕಿ ಬೇಡ ವಸತಿ ಕೊಡಿ: ಮಹಿಳೆಯರ ಆಗ್ರಹ

ಸಂಸ್ಥೆಯು ವಿದ್ಯಾರ್ಥಿಗಳಿಗೆ ಮಾಡುತ್ತಿರುವ ಅನ್ಯಾಯ ಎಬಿವಿಪಿ ಗಮನಕ್ಕೆ ಬಂದು ಎಬಿವಿಯು ಕಾಲೇಜಿನ ಬಗ್ಗೆ ವಿಚಾರಿಸಿದಾಗ ಈ ಸಂಸ್ಥೆಯು ನೊಂದಾವಣಿಯೇ ಆಗದ ಸಂಸ್ಥೆ ಎಂಬುದು ಗೊತ್ತಾಯಿತು ಹಾಗಾಗಿ ಎಬಿವಿಪಿಯು ಪ್ರತಿಭಟನೆ ಮಾಡಿತು ಎಂದು ಎಬಿವಿಪಿ ಮುಖಂಡರು ಹೇಳಿದ್ದಾರೆ.

ABVP protest against Voge fasion institue

ಈ ಹೋರಾಟದಲ್ಲಿ ಬೆಂಗಳೂರು ಮಹಾನಗರ ಸಂಘಟನಾ ಕಾರ್ಯದರ್ಶಿಯಾದ ಜಯಪ್ರಕಾಶ, ಮಹಾನಗರ ಕಾಯರ್ಯದರ್ಶಿಯಾದ ಸೂರಜ್ ಪಂಡಿತ್, ನಗರ ಸಂಘಟನಾ ಕಾರ್ಯದರ್ಶಿಗಳಾದ ವೆಂಕಟೇಶ, ಶಿವಾನಂದ ಹಾಗೂ ಜಿಲ್ಲಾ ಸಂಚಾಲಕರಾದ ಗಗನ, ತೇಜಸ್, ಮಹೇಶ, ಪರಮೇಶ ಕಾರ್ಯಕರ್ತರಾದ ನಿಶಾಂತ ಹಾಗೂ ವಿದ್ಯಾರ್ಥಿನಿ ಪ್ರಮುಖರಾದ ಸ್ವಾತಿ, ದೀಕ್ಷಾ, ಪ್ರಿಯಾ , ನಿಧಿ, ಕೀರ್ತಿ ಮತ್ತಿತರಿದ್ದರು.

English summary
Voge fasion institue cheats students ABVP protest against it. Voge collected fee from students and did not do the classes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X