ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಸ್ಎಸ್ಎಲ್‌ಸಿಯಲ್ಲಿ ಅವಳಿ ಸಹೋದರಿಯರ ಸಾಧನೆ

|
Google Oneindia Kannada News

ಬೆಂಗಳೂರು, ಮೇ.13 : ಬೆಂಗಳೂರಿನ ವಿವಿಎಸ್ ಸರ್ದಾರ್ ಪಟೇಲ್ ಇಂಗ್ಲಿಷ್ ಪ್ರೌಢಶಾಲೆಯ ಅವಳಿ ಸಹೋದರಿಯರು ಎಸ್ಎಸ್ಎಲ್‌ಸಿ ಫಲಿತಾಂಶದಲ್ಲಿ ರಾಜ್ಯಕ್ಕೆ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆಯುವ ಮೂಲಕ ಪಾಲಕರಿಗೆ ಡಬಲ್ ಧಮಾಕಾ ನೀಡಿದ್ದಾರೆ.

ಬಿಎಂಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿರುವ ಗಣೇಶ್ ಮತ್ತು ವೀಣಾ ಅವರ ಪುತ್ರಿಯರಾದ ಅಭಿಜ್ಞಾ ಮತ್ತು ಅನುಜ್ಞಾ ಎರಡು ಮತ್ತು ಮೂರನೇ ಸ್ಥಾನ ಪಡೆದಿದ್ದಾರೆ. ದಿನಕ್ಕೆ ಕೇವಲ 2-3ಗಂಟೆ ಓದುತ್ತಿದ್ದ ಇವರಿಗೆ ಅವಳಿಯಾಗಿದ್ದೆ ಓದಲು ಸಹಕಾರಿಯಾಗಿದೆ. ಒಟ್ಟಾಗಿ ಓದುತ್ತಿದ್ದ ಇವರು, ಭವಿಷ್ಯದಲ್ಲಿ ಇಂಜಿನಿಯರ್ ಆಗುವ ಕನಸು ಹೊಂದಿದ್ದಾರೆ. [ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ]

SSLC

ಅನುಜ್ಞಾಗಿಂತ 14 ನಿಮಿಷ ಮೊದಲು ಜನಿಸಿರುವ ಅಭಿಜ್ಞಾ 621 ಅಂಕ ಗಳಿಸಿದ್ದರೆ, ತಂಗಿ ಅನುಜ್ಞಾ 620 ಅಂಕಗಳಿಸಿದ್ದಾಳೆ. ಇಬ್ಬರೂ ಒಟ್ಟಾಗಿ ಓದುತ್ತಿದ್ದೆವು. ಪಠ್ಯ ವಿಷಯ, ಅದರಲ್ಲಿನ ಗೊಂದಲಗಳ ಬಗ್ಗೆ ಚರ್ಚೆ ಮಾಡುತ್ತಿದ್ದೆವು. ಅಂದಂದಿನ ಪಾಠಗಳನ್ನು ಅಂದೇ ಓದುತ್ತಿದ್ದೆವು. ಪೆಂಡಿಂಗ್ ಇರುವುದನ್ನು ವಾರದ ಕೊನೆಯಲ್ಲಿ ಮುಗಿಸಿಕೊಳ್ಳುತ್ತಿದ್ದೆವು ಎಂದು ಅವಳಿ ಸಹೋದರಿಯರು ತಮ್ಮ ಸಂತಸ ಹಂಚಿಕೊಂಡಿದ್ದಾರೆ. [ಮೈಸೂರಿನ ಹುಡುಗಿಗೆ ಆಪಲ್ ಕಂಪೆನಿ ಸೇರುವ ಆಸೆ!]

ತಂದೆ-ತಾಯಿ ಸಹ ನಮ್ಮ ಅಧ್ಯಯನದಲ್ಲಿನ ಗೊಂದಲಗಳನ್ನು ಕೇಳಿ ಪರಿಹರಿಸುತ್ತಿದ್ದರು. ಶಿಕ್ಷಕರ ಸಹಕಾರ, ತಂದೆ-ತಾಯಿ ಬೆಂಬಲದಿಂದ ನಾವು ಹೆಚ್ಚಿನ ಅಂಕಗಳನ್ನು ಗಳಿಸಲು ಸಾಧ್ಯವಾಯಿತು. ಪರೀಕ್ಷೆಯನ್ನು ಬರೆದ ನಂತರ 615ರ ಆಸುಪಾಸಿನ ಅಂಕಗಳನ್ನು ನಿರೀಕ್ಷಿಸಿದ್ದೆವು. ಅದಕ್ಕಿಂತ ಹೆಚ್ಚು ಅಂಕಗಳು ಬಂದಿರುವುದು ಸಂತಸತಂದಿದೆ ಎಂದರು.[SSLC ಫಲಿತಾಂಶದ ಹೈಲೈಟ್ಸ್]

ಅವಳಿ ಸಹೋದರಿಯರು ಪಿಯುಸಿಯಲ್ಲಿ ವಿಜ್ಞಾನವನ್ನು ಆಯ್ಕೆ ಮಾಡಿಕೊಂಡು ಇಂಜಿನಿಯರ್ ಆಗುವ ಕನಸನ್ನು ಹೊಂದಿದ್ದಾರೆ. ಈ ಅವಳಿ ಸಹೋದರಿಯರ ಮುಂದಿನ ಭವಿಷ್ಯಕ್ಕೆ ನಮ್ಮ ಕಡೆಯಿಂದ ಆಲ್ ದಿ ಬೆಸ್ಟ್.

English summary
These twins have always studied together and scored almost the same marks. They have repeated that record in SSLC also. In the results announced on Monday, Abhighna G and Anughna G, both students of VVS Sardar Patel English High School, have figured among the top three scorers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X