ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಎಪಿಯಿಂದ ಬಿಬಿಎಂಪಿ ಚುನಾವಣೆಗೆ ದೆಹಲಿ ಮಾದರಿ ರಣತಂತ್ರ

|
Google Oneindia Kannada News

ಬೆಂಗಳೂರು, ಸೆ. 13: ದೆಹಲಿಯಲ್ಲಿ ಕಳೆದ ಐದು ವರ್ಷಗಳಲ್ಲಿ ಆಗಿರುವ ಅಭಿವೃದ್ದಿಯ ಮಾದರಿಯನ್ನು ಒಳಗೊಂಡಂತೆ ಬೆಂಗಳೂರಿನ ಅಭಿವೃದ್ಧಿಗೆ ಸಮಗ್ರ ಮುನ್ನೋಟ ಮತ್ತು ನವೀನ ಯೋಜನೆಗಳನ್ನು ರೂಪಿಸಲಾಗುತ್ತಿದೆ.

ಬೆಂಗಳೂರಿಗೆ ಅಂಟಿರುವ ರಾಜಕೀಯ ದುರಾಡಳಿತ ಮತ್ತು ಸಮಸ್ಯೆಗಳಿಂದ ಮುಕ್ತಗೊಳಿಸಲು ಆಮ್ ಆದ್ಮಿ ಪಕ್ಷವು ಬಿಬಿಎಂಪಿ ಚುನಾವಣೆಯಲ್ಲಿ ಸ್ಪರ್ಧಿಸಿ ಅಧಿಕಾರ ರಚಿಸಲಿದೆ ಎಂದು ಪಕ್ಷದ ರಾಷ್ಟ್ರೀಯ ರಾಜಕೀಯ ವ್ಯವಹಾರ ಸಮಿತಿ(ಪಿಎಸಿ) ಸದಸ್ಯರಾದ ದುರ್ಗೇಶ್ ಪಾಠಕ್ ಅವರು ವಿಶ್ವಾಸ ವ್ಯಕ್ತಪಡಿಸಿದರು.

ಗುತ್ತಿಗೆದಾರರಿಗೆ ಬಿಬಿಎಂಪಿ ಆಯುಕ್ತ ಅನಿಲ್‌ ಕುಮಾರ್‌ ಸಕತ್ ಕಿವಿಮಾತುಗುತ್ತಿಗೆದಾರರಿಗೆ ಬಿಬಿಎಂಪಿ ಆಯುಕ್ತ ಅನಿಲ್‌ ಕುಮಾರ್‌ ಸಕತ್ ಕಿವಿಮಾತು

ದೆಹಲಿಯಿಂದ ಆಗಮಿಸಿದ್ದ ದುರ್ಗೇಶ್ ಅವರೊಂದಿಗೆ ಸಭೆ ನಡೆಸಿ ಚರ್ಚಿಸಿದ ಬಿಪ್ಯಾಕ್ ಸಂಸ್ಥೆಯು ಸಂವಿಧಾನದ ಪ್ರಸ್ತಾವನೆಯ ಪ್ರತಿಯೊಂದನ್ನು ನೀಡಿ ಗೌರವಿಸಿತು.

AAP will come to power in BBMP to implement Delhi model of development: Durgesh Pathak

ಇಡೀ ವಿಶ್ವವೇ ದೆಹಲಿಯತ್ತ ಮುಖಮಾಡಿ ನೋಡುತ್ತಿದೆ. ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ಸರ್ಕಾರವು ಶಿಕ್ಷಣ, ಆರೋಗ್ಯ, ನೀರಿನ ಸಮಸ್ಯೆ, ಮಹಿಳೆ ಮತ್ತು ಮಕ್ಕಳ ಸಬಲೀಕರಣಕ್ಕೆ ಒತ್ತು ನೀಡಿ ಕೆಲಸ ಮಾಡುವ ಮೂಲಕ ಸಮಗ್ರ ಕ್ಷೇತ್ರದಲ್ಲಿಯೂ ಅದ್ಭುತ ರೀತಿಯಲ್ಲಿ ಅಭಿವೃದ್ಧಿ ಸಾಧಿಸಿದೆ.

ಅದೇ ಮಾದರಿಯಲ್ಲಿ ಬೆಂಗಳೂರನ್ನು ಮಾದರಿ ನಗರವನ್ನಾಗಿ ಕಟ್ಟಲು ಪಕ್ಷವು ಪಣತೊಟ್ಟಿದೆ. ಬೆಂಗಳೂರಿನಲ್ಲಿ ತಾಂಡವವಾಡುತ್ತಿರುವ ಘನತ್ಯಾಜ್ಯ ವಿಲೇವಾರಿ ಸಮಸ್ಯೆ, ಟ್ರಾಫಿಕ್, ನೀರಿನ ಸಮಸ್ಯೆಗಳನ್ನು ಪರಿಶೀಲಿಸಿ ಯೋಜನೆಗಳನ್ನು ರೂಪಿಸಲು ವಾರ್ಡ್ ಕಮಿಟಿಗಳನ್ನು ರಚಿಸಲಾಗಿದೆ ಎಂದು ತಿಳಿಸಿದರು.

ಸಮಸ್ಯೆಗಳ ಆಗರವಾಗುತ್ತಿರುವ ಬೆಂಗಳೂರು, ಬಿಬಿಎಂಪಿ ನಿಜಕ್ಕೂ ಅಸ್ತಿತ್ವದಲ್ಲಿದೆಯೇ?ಸಮಸ್ಯೆಗಳ ಆಗರವಾಗುತ್ತಿರುವ ಬೆಂಗಳೂರು, ಬಿಬಿಎಂಪಿ ನಿಜಕ್ಕೂ ಅಸ್ತಿತ್ವದಲ್ಲಿದೆಯೇ?

ಸೆ.27ಕ್ಕೆ ಚುನಾವಣೆ ನಿಗದಿಯಾಗುವ ಸಾಧ್ಯತೆ ಇದೆ. ಹಾಲಿ ಮೇಯರ್ ಗಂಗಾಂಬಿಕೆ ಹಾಗೂ ಉಪಮೇಯರ್ ಭದ್ರೇಗೌಡ ಅವರ ಅಧಿಕಾರಾವಧಿ ಸೆಪ್ಟೆಂಬರ್ 28ಕ್ಕೆ ಮುಗಿಯಲಿದೆ.

ಈ ಬಾರಿಯ ಚುನಾವಣೆಗೆ ಒಟ್ಟು 257 ಮತದಾರರಿದ್ದು, 128 ಮತಗಳ ಮ್ಯಾಜಿಕ್ ನಂಬರ್ ಬರಬೇಕಾಗಿದೆ. ಬಿಬಿಎಂಪಿ ಸದಸ್ಯರು, ಶಾಸಕರು, ವಿಧಾನಪರಿಷತ್ ಸದಸ್ಯರು, ಸಂಸದರು, ರಾಜ್ಯಸಭಾ ಸದಸ್ಯರು ಮತದಾನ ಮಾಡಲಿದ್ದಾರೆ. ಬಿಜೆಪಿ 125, ಕಾಂಗ್ರೆಸ್ 104, ಜೆಡಿಎಸ್ 21, ಪಕ್ಷೇತರರು 7 ಸದಸ್ಯ ಸಂಖ್ಯಾಬಲ ಹೊಂದಿವೆ.

English summary
Durgesh Pathak, a member of the party's National Political Affairs Committee (PAC), expressed confidence that the Aam Aadmi Party would contest the BBMP election to free it from the political scandals and problems in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X