ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸರ್ಕಾರಿ ಬಸ್‌ನಲ್ಲಿ ಮೂರು ಪಟ್ಟು ದರ: ಖಂಡಿಸಿದ ಎಎಪಿ

|
Google Oneindia Kannada News

ಬೆಂಗಳೂರು, ಮೇ 2: ಬೆಂಗಳೂರು ನಗರದಲ್ಲಿ ಉತ್ತರ ಕರ್ನಾಟಕದಿಂದ ಬಂದಿರುವ ಸಾವಿರಾರು ಬಡ ವಲಸಿಗ ಕಾರ್ಮಿಕರು ಕಳೆದ 40 ದಿವಸಗಳಿಂದ ಲಾಕ್ ಡೌನ್ ಸಂದರ್ಭದಲ್ಲಿ ತೀವ್ರ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಆದರೆ, ಇವರನ್ನು ಊರಿಗೆ ತಲುಪಿಸಲು ಕರ್ನಾಟಕ ಸಾರಿಗೆ ಬಸ್ ಮೂರು ಪಟ್ಟು ದರವನ್ನು ವಿಧಿಸಿದೆ ಎಂದು ಆಮ್ ಆದ್ಮಿ ಪಕ್ಷ ಆರೋಪ ಮಾಡಿದೆ.

ಅತ್ತ ಊರಿಗೂ ಹೋಗಲಾಗದೆ, ಇತ್ತ ಕೆಲಸವೂ ಸಿಗದೆ ಒಂದೊತ್ತಿನ ಊಟಕ್ಕೂ ಅಲೆದಾಡುವಂತಹ ಪರಿಸ್ಥಿತಿಗೆ ಸಿಲುಕಿಕೊಂಡಿದ್ದರು. ಈ ಬಡ ಕೂಲಿ ಕಾರ್ಮಿಕರುಗಳು, ಸರ್ಕಾರದ ನಿರ್ಧಾರದಿಂದಾಗಿ ಇನ್ನೇನು ನಮ್ಮ ನಮ್ಮ ಊರುಗಳಿಗೆ ಸೇರಿಕೊಳ್ಳುತ್ತೇವೆ ಎಂಬ ಸಂತಸ ಇದ್ದರು. ಆದರೆ, ಹೀಗೆ ಇರುವಾಗಲೇ ರಾಜ್ಯ ಸಾರಿಗೆ ಇಲಾಖೆಯು ಇವರುಗಳನ್ನು ಕರ್ನಾಟಕ ಸಾರಿಗೆ ಬಸ್ ಗಳಲ್ಲಿ ತಲುಪಿಸಲು ಮೂರು ಪಟ್ಟು ದರವನ್ನು ವಿಧಿಸಿ ಮತ್ತೊಮ್ಮೆ ಇವರುಗಳನ್ನು ತೀವ್ರ ಇಕ್ಕಟ್ಟಿಗೆ ಸಿಲುಕಿಸಿದ್ದಾರೆ. ಎಂದು ಎಎಪಿ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ ಸದಂ ಹೇಳಿದ್ದಾರೆ.

'ಗೆದ್ದು ಬರುವ ದೃಢಸಂಕಲ್ಪ ಕಾರ್ಮಿಕರಲ್ಲಿ ಮನೆ ಮಾಡಲಿ' -ಕುಮಾರಸ್ವಾಮಿ 'ಗೆದ್ದು ಬರುವ ದೃಢಸಂಕಲ್ಪ ಕಾರ್ಮಿಕರಲ್ಲಿ ಮನೆ ಮಾಡಲಿ' -ಕುಮಾರಸ್ವಾಮಿ

ನಗರದ ಬನ್ನಪ್ಪ ಪಾರ್ಕ್‌ನಲ್ಲಿ ನೂರಾರು ಕೂಲಿ ಕಾರ್ಮಿಕರು ಅವರವರ ಸ್ಥಳಗಳಿಗೆ ತಲುಪಲು ಆಸೆಯಿಂದ ಬರುತ್ತಿರುವವರಿಗೆ ಸಾರಿಗೆ ಇಲಾಖೆಯ ಈ ನಿರ್ಧಾರದಿಂದಾಗಿ ತೀವ್ರ ನಿರಾಸೆ ಕಾಡುತ್ತಿದೆ. ಉತ್ತರ ಕರ್ನಾಟಕದಿಂದ ಗುಳೆ ಬಂದಿರುವ ಹಲವಾರು ಕುಟುಂಬಗಳು ತಮ್ಮ ಊರುಗಳಿಗೆ ಮರಳಲು ಇಂದು ಹತ್ತಾರು ಸಾವಿರ ರೂಪಾಯಿಗಳನ್ನು ಖರ್ಚು ಮಾಡುವಂತಹ ದುರವಸ್ಥೆಗೆ ತಲುಪಿದ್ದಾರೆ. ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

AAP Unhappy About With The Government Move About Migrant Labor

ಉದಾಹರಣೆಗೆ, ಬೆಂಗಳೂರಿನಿಂದ ಯಾದಗಿರಿಗೆ ಪ್ರಯಾಣಿಸುವವರು 1411 ರೂಪಾಯಿಗಳು. ಕಲಬುರ್ಗಿಗೆ 1600 ರೂಪಾಯಿಗಳು, ರಾಯಚೂರಿಗೆ 1200 ರೂಪಾಯಿಗಳನ್ನು ಪಾವತಿಸಬೇಕಿದೆ. ಸಾರಿಗೆ ಇಲಾಖೆಯು ಹೋಗುವ ಮತ್ತು ವಾಪಸ್ ಬರುವ ಬಸ್ ಪ್ರಯಾಣದ ವೆಚ್ಚ ಹಾಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಉಳಿಯುವಂತಹ ಸೀಟುಗಳ ವೆಚ್ಚವನ್ನು ಸಹ ಈ ಬಡ ನಿರ್ಗತಿಕ ಕಾರ್ಮಿಕರಿಂದ ವಸೂಲಿ ಮಾಡುತ್ತಿರುವುದು ತೀರಾ ದುರಂತದ ಸಂಗತಿ ಎಂದಿದೆ.

ಬನ್ನಪ್ಪ ಪಾರ್ಕ್‌ನಲ್ಲಿ ಸಾರಿಗೆ ಇಲಾಖೆಯ ಈ ದುಬಾರಿ ವೆಚ್ಚವನ್ನು ಭರಿಸಲಾಗದೆ. ಅನೇಕ ಗರ್ಭಿಣಿ ಹೆಂಗಸರುಗಳು, ಪುಟ್ಟ ಪುಟ್ಟ ಮಕ್ಕಳನ್ನು ಹೊತ್ತುಕೊಂಡು ಪರದಾಡುತ್ತಿರುವ ದೃಶ್ಯಗಳು ಮನ ಕಲಕುವಂತಿದೆ. ಈ ಕೂಡಲೇ ರಾಜ್ಯ ಸರ್ಕಾರವು ತನ್ನ ಈ ದುರುಳ ನೀತಿಯನ್ನು ವಾಪಸ್ ಪಡೆದುಕೊಂಡು ಉಚಿತವಾಗಿ ಅಥವಾ ಕೇವಲ ಡೀಸೆಲ್‌ಗೆ ಆಗುವ ವೆಚ್ಚವನ್ನು ಮಾತ್ರ ಪಡೆದುಕೊಂಡು ಅವರುಗಳ ಊರುಗಳಿಗೆ ತಲುಪಿಸುವಂತಹ ಸತ್ಕಾರ್ಯವನ್ನು ಮಾಡಲು ಮುಂದಾಗಬೇಕೆಂದು ಆಮ್ ಆದ್ಮಿ ಪಕ್ಷವು ಆಗ್ರಹಿಸಿದೆ.

English summary
Aam Aadmi Party unhappy about with the government move about migrant labor.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X