ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮುಂದಿನ ಬಿಬಿಎಂಪಿ ಚುನಾವಣೆಯಲ್ಲಿ ಸ್ಪರ್ಧಿಸಲು ಎಎಪಿ ನಿರ್ಧಾರ

|
Google Oneindia Kannada News

ಬೆಂಗಳೂರು, ಮಾರ್ಚ್ 06: ಬಿಬಿಎಂಪಿ ಮುಂದಿನ ವರ್ಷ ತನ್ನ 198 ವಾರ್ಡುಗಳಿಗೆ ಪಾಲಿಕೆ ಸದಸ್ಯರನ್ನು ಆರಿಸಲು ಚುನಾವಣೆ ನಡೆಸಲಿದೆ.

ದೆಹಲಿ ಸರಕಾರದ ಕಳೆದ ನಾಲ್ಕು ವರ್ಷದ ಕಾರ್ಯನೀತಿಯ ಅನುಭವದಿಂದ, ಬೆಂಗಳೂರಿನಲ್ಲಿಯೂ ಕೂಡ ಆಡಳಿತದಲ್ಲಿ ಸುಧಾರಣೆ ತರಲು ಪ್ರಾಮಾಣಿಕ ಮತ್ತು ಬದ್ಧತೆಯುಳ್ಳ ಪಾಲಿಕೆ ಸದಸ್ಯರಿಂದ ಸಾಧ್ಯ ಎಂಬ ದೃಢ ವಿಶ್ವಾಸ ಆಮ್ ಆದ್ಮಿ ಪಾರ್ಟಿ ಹೊಂದಿದೆ.

ಮಹಿಳಾ ಸಾಧಕಿ- 3: 'ಅವಳ ಹೆಜ್ಜೆ'ಯ ಶಾಂತಲಾ ದಾಮ್ಲೆಮಹಿಳಾ ಸಾಧಕಿ- 3: 'ಅವಳ ಹೆಜ್ಜೆ'ಯ ಶಾಂತಲಾ ದಾಮ್ಲೆ

ಬಿಬಿಎಂಪಿ ಯಲ್ಲಿ ಮಹಿಳೆಯರಿಗಾಗಿ ಮೀಸಲಾಗಿರುವ ಸ್ಥಾನಗಳು 50% ಆಗಿದ್ದರೂ ಸಹ ಸ್ಪರ್ಧೆ ಮಾಡಬಹುದಾದ ಸ್ಥಾನಗಳು ಇನ್ನೂ ಹೆಚ್ಚಿವೆ. ಮೀಸಲಾತಿ ಗುಂಪಿಗೆ ಸೇರಿಲ್ಲದ ಮಹಿಳೆಯಾಗಿದ್ದಲ್ಲಿ ಯಾವುದೇ 105 ಸಾಮಾನ್ಯ ವಾರ್ಡಿನಿಂದ ಸ್ಪರ್ಧಿಸಬಹುದು. ಅದೇ ರೀತಿ ಒಬಿಸಿ-ಎ ಮಹಿಳೆ 158 ವಾರ್ಡಿನಿಂದ ಸ್ಪರ್ಧಿಸಬಹುದು, ಒಬಿಸಿ-ಬಿ ಮಹಿಳೆ 118 ವಾರ್ಡಿನಿಂದ, ಎಸ್ ಸಿ ಮಹಿಳೆ 128 ವಾರ್ಡಿನಿಂದ ಮತ್ತು ಎಸ್ ಟಿ ಮಹಿಳೆ 109 ವಾರ್ಡಿನಿಂದ ಸ್ಪರ್ಧಿಸಬಹುದಾಗಿದೆ.

ಈಗಿರುವ ರಾಜಕೀಯ ಪಕ್ಷಗಳು ಕೇವಲ ತೋರ್ಪಡಿಕೆಗೆ ಮಹಿಳಾ ಅಭ್ಯರ್ಥಿಗಳನ್ನು ನಿಲ್ಲಿಸುತ್ತಾರೆಯೇ ಹೊರತು ಮಹಿಳೆಯರನ್ನು ಸಶಕ್ತರನ್ನಾಗಿಸಲು ಅಲ್ಲ. ಆದರೆ ಆಮ್ ಆದ್ಮಿ ಪಾರ್ಟಿ ಆಡಳಿತ ಮತ್ತು ಅಧಿಕಾರದಲ್ಲಿ ಮಹಿಳೆಯರಿಗೆ ನಿಜಕ್ಕೂ ಸಮಾನತೆಯನ್ನು ನೀಡಿ ಸಶಕ್ತರನ್ನಾಗಿ ಮಾಡುವುದಕ್ಕೆ ಬದ್ಧವಾಗಿದೆ.

ಮಹಿಳಾ ಪರ ನೀತಿಗಳನ್ನು ಜಾರಿಗೆ ತರಬೇಕಿದೆ

ಮಹಿಳಾ ಪರ ನೀತಿಗಳನ್ನು ಜಾರಿಗೆ ತರಬೇಕಿದೆ

ಮಹಿಳೆಯರ ಜೀವನಾನುಭವ ಪುರುಷರಿಗಿಂತ ಭಿನ್ನವಾಗಿದ್ದು, ಆಡಳಿತ ಮತ್ತು ಶಾಸನದಲ್ಲಿ ಬೇರೊಂದು ಆಯಾಮವನ್ನು ತರುವ ಸಾಧ್ಯತೆಯಿರುತ್ತದೆ. ಮಹಿಳೆಯರು ಯೋಜನೆ ಮತ್ತು ಆಡಳಿತದ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗಿಯಾಗದಿದ್ದಲ್ಲಿ ಮಹಿಳಾ ಪರ ನೀತಿಗಳು ಜಾರಿಯಾಗುವುದು ಇನ್ನಷ್ಟು ಕಷ್ಟಕರವಾಗುತ್ತವೆ.

ಹೆಚ್ಚಾಗಿ ಎಲ್ಲಾ ಪಕ್ಷಗಳು ಮಹಿಳೆಯರನ್ನು ಅವರ ಮನೆಯವರ ಕೈಗೊಂಬೆಯನ್ನಾಗಿ ಮಾಡಿ ನಿಲ್ಲಿಸುತ್ತಾರೆ. ಅಂತಹ ಮಹಿಳೆ ಪಾಲಿಕೆ ಸದಸ್ಯರಾದರೂ ಸಹ, ಆಕೆ ಜನ ಸಾಮಾನ್ಯರೊಂದಿಗೆ ಬೆರೆಯದಂತೆ ಅವರ ಮನೆಯವರು ತಡೆಯುತ್ತಾರೆ.

ಡಮ್ಮಿ ಕಾರ್ಪೊರೇಟರ್ ಗಳು ಸಾಕು

ಡಮ್ಮಿ ಕಾರ್ಪೊರೇಟರ್ ಗಳು ಸಾಕು

ಮೀಸಲಾತಿ ಕಳೆದ 20 ವರ್ಷದಿಂದ ಜಾರಿಗೆ ಬಂದಿದ್ದರೂ ಸಹ ಮಹಿಳೆಯರಿಗೆ ಶಾಸಕಿಯಾಗಲು ಬೇಕಾದ ಅವಕಾಶಗಳನ್ನು ಇತರೆ ಯಾವ ಪಕ್ಷವೂ ಕಲ್ಪಿಸಿಲ್ಲ. ಅಷ್ಟೇ ಅಲ್ಲ, ಮಹಿಳೆ ಪಾಲಿಕೆ ಸದಸ್ಯಳಾಗಿ ಎಷ್ಟೇ ಸಮರ್ಪಕವಾಗಿ ಕೆಲಸ ಮಾಡಿರಲಿ, ಆಕೆಯ ವಾರ್ಡ್, ಮಹಿಳಾ ಮೀಸಲಾತಿಯಿಂದ ಹೊರತಾದಲ್ಲಿ ಆಕೆಗೆ ಸ್ಪರ್ಧಿಸಲು ಮತ್ತೊಮ್ಮೆ ಟಿಕೇಟ್ ಸಹ ನೀಡುವುದಿಲ್ಲ.

"ಇದು 21 ನೇ ಶತಮಾನ! ಸಾಕಿನ್ನು ಡಮ್ಮಿ ಕಾರ್ಪೊರೇಟರ್ ಗಳು. ಇಂತಹ ಬೂಟಾಟಿಕೆಯ ಪಾಲಿಕೆ ಸದಸ್ಯರಾಗಿ ಪುರುಷರ ಕೈಗೊಂಬೆಯಾಗಿ ಉಳಿಯುವುದನ್ನು ನಿಲ್ಲಿಸಲು ಮಹಿಳೆಯರಿಗೆ ಇದು ಸರಿಯಾದ ಸಮಯ" ಎಂದು ಬಿಬಿಎಂಪಿ ಚುನಾವಣಾ ಪ್ರಚಾರ ತಂಡದ ಉಸ್ತುವಾರಿ ಶಾಂತಲಾ ದಾಮ್ಲೆ ಹೇಳಿದರು.

ಬಿಬಿಎಂಪಿಯಲ್ಲಿ ಮಹಿಳೆಯರಿಂದ ಸುಧಾರಣೆ ಸಾಧ್ಯ

ಬಿಬಿಎಂಪಿಯಲ್ಲಿ ಮಹಿಳೆಯರಿಂದ ಸುಧಾರಣೆ ಸಾಧ್ಯ

"ಆಮ್ ಆದ್ಮಿ ಪಾರ್ಟಿಯ ಮಹಿಳಾ ಕಾರ್ಪೊರೇಟರ್ ಗಳು ತಮ್ಮ ವಾರ್ಡಿನ ಜನರೊಂದಿಗೆ ನೇರ ಸಂಪರ್ಕದಲ್ಲಿರುತ್ತಾರೆ ಎಂದು ಎಎಪಿ ಭರವಸೆ ನೀಡುತ್ತದೆ. ಅಷ್ಟೇ ಅಲ್ಲ, ಮಹಿಳೆಯರನ್ನು ಹೆಚ್ಚಿನ ಜವಾಬ್ದಾರಿಯ ಸ್ಥಾನಗಳಿಗೆ ನೇಮಿಸಲಿದೆ. ಮಾರ್ಗರೆಟ್ ಮೀಡ್ ಅವರ ಜನಜನಿತ ವಾಕ್ಯವನ್ನು ಬಿಬಿಎಂಪಿ ಗೆ ಅನ್ವಯಿಸುವುದಾದರೆ, "ಯೋಚಿಸಬಲ್ಲ, ಬದ್ಧತೆಯುಳ್ಳ ಸಣ್ಣ ಮಹಿಳೆಯರ ಗುಂಪು ಬಿಬಿಎಂಪಿ ಯಲ್ಲಿ ಸುಧಾರಣೆ ತರಬಲ್ಲರು ಎಂಬುದು ನಿಸ್ಸಂಶಯ" ಎಂದು ಹೇಳಬಹುದು.

ಎಎಪಿಯಿಂದ ಬಿಬಿಎಂಪಿಗೆ: 108 ನಾಯಕಿಯರು

ಎಎಪಿಯಿಂದ ಬಿಬಿಎಂಪಿಗೆ: 108 ನಾಯಕಿಯರು

"ಎಎಪಿಯಿಂದ ಬಿಬಿಎಂಪಿಗೆ: 108 ನಾಯಕಿಯರು" ಎಂಬ ಅಭಿಯಾನವನ್ನು ಆಮ್ ಆದ್ಮಿ ಪಾರ್ಟಿ ಪ್ರಾರಂಭಿಸಿ, ಪಾಲಿಕೆ ಸದಸ್ಯರಾಗಲು ಇಚ್ಛೆಯುಳ್ಳ ಮಹಿಳೆಯರಿಂದ ಅರ್ಜಿಯನ್ನು ಆಹ್ವಾನಿಸುತ್ತಿದೆ. ಸೂಕ್ತ ಮಹಿಳೆಯರನ್ನು ವಾರ್ಡಿನ ಉಸ್ತುವಾರಿಯಾಗಿ ಕೂಡಲೇ ನೇಮಿಸಲಾಗುವುದು. ಅವರಿಗೆ ಬೇಕಾದ ಬೆಂಬಲ, ತರಬೇತಿ ಮತ್ತು ಕ್ಷೇತ್ರದಲ್ಲಿ ನಾಯಕಿಯಾಗಿ ಗುರುತಿಸಿಕೊಳ್ಳುವ ಅವಕಾಶ ನೀಡಲಾಗುವುದು.

English summary
BBMP is going to the polls mid 2020 and will choose 198 new corporators. With the track record of AAP Govt’s achievements in Delhi within 4 years, AAP is confident that similar changes can be brought about in Bengaluru by honest, committed and capable corporators.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X